Tuesday, Nov 30 2021 | Time 18:30 Hrs(IST)
Top News
ಒಮಿಕ್ರಾನ್  ಇದುವರೆಗೆ ಎಲ್ಲೆಲ್ಲಿ, ಎಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ ?

ಒಮಿಕ್ರಾನ್ ಇದುವರೆಗೆ ಎಲ್ಲೆಲ್ಲಿ, ಎಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ ?

ಯುನೈಟೆಡ್ ಕಿಂಗ್‍ಡಮ್ ನಂತರ ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿರುವ ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲ್ಪಟ್ಟ ಕೆಲವೇ ದಿನಗಳ ನಂತರ, ಪ್ರಪಂಚದಾದ್ಯಂತದ ಸರ್ಕಾರಗಳು ಒಮಿಕ್ರಾನ್ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ. ಈಗಾಗಲೇ ಬೆಲ್ಜಿಯಂ, ಬೋಟ್ಸ್‍ವಾನ್, ಹಾಂಗ್ ಕಾಂಗ್, ಬ್ರಿಟನ್, ಇಸ್ರೇಲ್‍ಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಬರುವ ಎಲ್ಲ ವಿಮಾನಗಳಿಗೆ ಕೆಲವು ದೇಶಗಳು ನಿಷೇಧ ಹೇರಿವೆ.

see more..
ಕೋವಿಡ್, ಅಕಾಲಿಕ ಮಳೆ.. ಇನ್ನು ಏನೇನು ಕಾದಿದೆಯೋ? ತಲೆಮೇಲೆ ಕೈಹೊತ್ತು ಕೂತ ರೈತ

ಕೋವಿಡ್, ಅಕಾಲಿಕ ಮಳೆ.. ಇನ್ನು ಏನೇನು ಕಾದಿದೆಯೋ? ತಲೆಮೇಲೆ ಕೈಹೊತ್ತು ಕೂತ ರೈತ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.. ಇದು ರೈತನ ಪಾಲಿಗೆ ಅಕ್ಷರಶಃ ನಿಜ. ಕಳೆದೆರಡು ವರ್ಷಗಳಿಂದ ಅನ್ನದಾತನ ಬದುಕು ಶೋಚನಿಯ ಸ್ಥಿತಿಗೆ ತಲುಪಿದೆ. ಕಣ್ಣಿಗೆ ಕಾಣದ ವೈರಸ್ ನಿಂದಾಗಿ ಮಾರ್ಕೆಟ್ ಇಲ್ಲದೆ ರೈತ ಮಮ್ಮಲ ಮರುಗಿದ್ದ. ಇನ್ನೇನು ಕರೊನಾ ಕಂಟ್ರೋಲ್ ಗೆ ಬಂತು ನಮ್ಮ ತಾಪತ್ರಯಗಳು ಕಡಿಮೆಯಾಗುತ್ತದೆ ಅಂದ್ಕೊಂಡಿದ್ದ ರೈತನನ್ನು ಮತ್ತೆ ಅಕಾಲಿಕ ಮಳೆ ಸಂಕಷ್ಟದ ಹಾದಿಗೆ ತಳ್ಳಿದೆ.

see more..

"ಭಾರತ" ಭಾರತವಾಗಿಯೇ ಉಳಿಯಲು ಹಿಂದೂಗಳು ಹಿಂದೂಗಳಾಗಿಯೇ ಉಳಿಯಬೇಕು: ಭಾಗವತ್

ಹಿಂದೂಗಳಿಲ್ಲದೆ ಭಾರತವಿಲ್ಲ,ಭಾರತವಿಲ್ಲದೆ ಹಿಂದೂಗಳೂ ಇಲ್ಲ.ಹಿಂದೂ ಮತ್ತು ಭಾರತವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಭಾರತ ಭಾರತವಾಗಿ ಉಳಿಯಬೇಕಾದರೆ ಭಾರತ ಹಿಂದೂವಾಗಿಯೇ ಉಳಿಯಬೇಕು.ಹಿಂದೂ ಹಿಂದೂವಾಗಿಯೇ ಉಳಿಯಬೇಕಾದರೆ ಭಾರತ ಒಂದಾಗಬೇಕು. ಇದು ಹಿಂದೂಸ್ಥಾನವಾಗಿದ್ದು, ಹಿಂದೂಗಳು ಇಲ್ಲಿ ಸಂಪ್ರದಾಯವಾಗಿ ವಾಸಿಸುತ್ತಿದ್ದಾರೆ. ಯಾವುದನ್ನು ಹಿಂದೂ ಎಂದು ಕರೆಯುತ್ತಾರೋ ಅವೆಲ್ಲವೂ ಈ ನೆಲದಲ್ಲಿ ಅಭಿವೃದ್ಧಿಯಾಗಿವೆ. ಭಾರತದ ಬಗ್ಗೆ ಎಲ್ಲವೂ ಭಾರತದ ನೆಲಕ್ಕೆ ಸಂಬಂಧಿಸಿದೆಯೇ ಹೊರತು ಆಕಸ್ಮಿಕವಾಗಿ ಅಲ್ಲ.

see more..
ಕೊರೊನಾ;   ನ್ಯೂಯಾರ್ಕಿನಲ್ಲಿ ತುರ್ತು ಪರಿಸ್ಥಿತಿ

ಕೊರೊನಾ; ನ್ಯೂಯಾರ್ಕಿನಲ್ಲಿ ತುರ್ತು ಪರಿಸ್ಥಿತಿ

ನಮ್ಮ ರಾಜ್ಯದಲ್ಲಿ ಈ ಹೊಸ ರೂಪಾಂತರವು ಇದುವರೆಗೂ ಪತ್ತೆಯಾಗಿಲ್ಲ. ಆದರೆ ಆಸ್ಪತ್ರೆಗಳಲ್ಲಿ ಅನಿವಾರ್ಯವಲ್ಲದ, ತುರ್ತು ಅವಶ್ಯಕತೆ ಇಲ್ಲದ ಕಾರ್ಯವಿಧಾನಗಳನ್ನು ಮಿತಿಗೊಳಿಸಲು ಮತ್ತು ನಿರ್ಣಾಯಕ ಸರಬರಾಜುಗಳನ್ನು ತ್ವರಿತವಾಗಿ ಪಡೆಯಲು ಆರೋಗ್ಯ ಇಲಾಖೆಗೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಆದೇಶವು ಡಿಸೆಂಬರ್ 3ರಂದು ಅಧಇಕೃತವಾಗಿ ಘೋಷಣೆಯಾಗಲಿದೆ. ಜನವರಿ 15ರಂದು ಇತ್ತೀಚಿನ ಡೇಟಾವನ್ನು ಆಧರಿಸಿ ಮರು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಹೇಳಿದರು.

see more..
ಮುನಾವರ್ ಫಾರೂಕಿ ಕಾರ್ಯಕ್ರಮ ರದ್ದು

ಮುನಾವರ್ ಫಾರೂಕಿ ಕಾರ್ಯಕ್ರಮ ರದ್ದು

ಹಿಂದೂಗಳು,ಹಿಂದೂ ದೇವತೆಗಳ ಬಗ್ಗೆ ವ್ಯಂಗ್ಯ ಹಾಸ್ಯ ಮಾಡುವ ಹಾಸ್ಯಗಾರ ಗುಜರಾತ್ ಮೂಲದ ಮುನಾವರ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಇಂದು ಆಯೋಜನೆಗೊಂಡಿತ್ತಾದರು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು.ಅಲ್ಲದೇ ತೀವ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದ ಸಮಿತಿ, ಮುನಾವರ್ ಕಾರ್ಯಕ್ರಮದಿಂದ ಇಲ್ಲಿನ ಸಾಮಾಜಿಕ ಸೌಹಾರ್ದತೆ ಕದಡುತ್ತದೆ ಎಂದು ಆತಂಕವನ್ನೂ ವ್ಯಕತಪಡಿಸಿದ್ದರು.

see more..
ಜೂನಿಯರ್ ಹಾಕಿ ವಿಶ್ವಕಪ್: ಭಾರತಕ್ಕೆ 8-2 ಅಂತರದಲ್ಲಿ ಪೋಲೆಂಡ್ ವಿರುದ್ಧ ಗೆಲುವು – ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಇಂಡಿಯಾ

ಜೂನಿಯರ್ ಹಾಕಿ ವಿಶ್ವಕಪ್: ಭಾರತಕ್ಕೆ 8-2 ಅಂತರದಲ್ಲಿ ಪೋಲೆಂಡ್ ವಿರುದ್ಧ ಗೆಲುವು – ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಇಂಡಿಯಾ

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾರತ ಮೂರನೇ ಪಂದ್ಯದಲ್ಲಿ ಪೋಲೆಂಡ್ ಅನ್ನು 8-2 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

see more..
ಕಡಲೇಕಾಯಿ ಪರಿಶೆ ಮೇಲೆ ಕೊರೊನಾ ಕರಿಛಾಯೆ ?

ಕಡಲೇಕಾಯಿ ಪರಿಶೆ ಮೇಲೆ ಕೊರೊನಾ ಕರಿಛಾಯೆ ?

ನಿನ್ನೆಯಷ್ಟೇ ರಾಜ್ಯ ಸರ್ಕಾರ ಕೊರೊನಾ 3ನೇ ಅಲೆ ತಡೆಗಟ್ಟಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೆಚ್ಚುಜನ ಒಂದೆಡೆ ಸೇರುವುದನ್ನು ನಿರ್ಬಂಧಿಸಲಾಗಿದೆ. ಶಾಲಾ –ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ಮುಂದೂಡಲು ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಕ್ರಮಗಳನ್ನು ಮತ್ತೆ ಬಿಗಿಗೊಳಿಸಲು ಹೇಳಲಾಗಿದೆ.

see more..
ರೈಡ್ ಫಾರ್ ಅಪ್ಪು’ ಬೈಕ್ ಮೆರವಣಿಗೆ  ಚಾಲನೆ

ರೈಡ್ ಫಾರ್ ಅಪ್ಪು’ ಬೈಕ್ ಮೆರವಣಿಗೆ ಚಾಲನೆ

ಪುನೀತ್ ಅವರ ಸಾಧನೆಯು ದಿನ ಕಳೆದಂತೆ ಹೆಚ್ಚೆಚ್ಚು ಜನರನ್ನು ತಲುಪುತ್ತಿದೆ. ಇದು ನಮ್ಮ ವಿದ್ಯಾರ್ಥಿ ಸಮೂಹ ಸೇರಿದಂತೆ ಎಲ್ಲರಿಗೂ ಸ್ಫೂರ್ತಿಯಾಗಬೇಕು. ಪ್ರತಿಯೊಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಸ್ವಂತಿಕೆ ಹಾಗೂ ಸಮಾಜಪರ ಮನೋಭಾವದೊಂದಿಗೆ ಕೆಲಸ ಮಾಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.ಸ್ವಾತಂತ್ರ್ಯ ಉದ್ಯಾನದಿಂದ ಅಪ್ಪು ಸಮಾಧಿಯವರೆಗೆ ನಡೆದ ಮೆರವಣಿಗೆಯಲ್ಲಿ ಸುಮಾರು 200 ಬೈಕ್ ಸವಾರರು ಪಾಲ್ಗೊಂಡಿದ್ದರು. ಪುನೀತ್ ಅವರು ಹೆಲ್ಮೆಟ್ ಧರಿಸುವುದರ ಮಹತ್ವ ತಿಳಿಸಿಕೊಡುವ ವ ಜಾಹೀರಾತಿನ ಮೂಲಕ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದ್ದನ್ನು ನೆನೆದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಹೆಲ್ಮೆಟ್ ಧರಿಸಿದ್ದರು. ಸಚಿವ ಅಶ್ವತ್ಥ ನಾರಾಯಣ ಕೂಡ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

see more..
ಅಪಾಯದಲ್ಲಿ ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ!

ಅಪಾಯದಲ್ಲಿ ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ!

ದಕ್ಷಿಣ ಆಫ್ರಿಕಾದಲ್ಲಿ ಕರೊನಾ ಹೊಸ ತಳಿ ಓಮಿಕ್ರಾನ್ ಭೀತಿ ಸೃಷ್ಟಿ ಮಾಡಿದೆ. ಹಾಂಗ್ ಕಾಂಗ್, ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಲ್ಲಿ 50 ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಇಲ್ಲಿಯವರೆಗೆ ಭಾರತದಲ್ಲಿ ಈ ಹೊಸ ರೂಪಾಂತರಿಯ ಯಾವುದೇ ಪ್ರಕರಣ ಕಂಡುಬಂದಿಲ್ಲ. ಇದೆಲ್ಲದರ ನಡುವೆ ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗುತ್ತಿದೆ.

see more..