SpecialPosted at: Jan 13 2021 5:04PM
Shareಅಕ್ರಮ ಹಣಕಾಸು ವರ್ಗಾವಣೆ, ಮಾಜಿ ಸಂಸದ ಕೆ.ಡಿ. ಸಿಂಗ್ ಬಂಧನ
ಅಕ್ರಮ ಹಣಕಾಸು ವರ್ಗಾವಣೆ, ಮಾಜಿ ಸಂಸದ ಕೆ.ಡಿ. ಸಿಂಗ್ ಬಂಧನನವದೆಹಲಿ, ಜ 13 (ಯುಎನ್ಐ) ಒಂದು ಸಾವಿರದ 900 ಕೋಟಿರೂಪಾಯಿಗಳ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿಯ ಮಾಜಿ ರಾಜ್ಯಸಭಾ ಸದಸ್ಯ , ಉದ್ದಿಮೆದಾರ ಕೆ.ಡಿ. ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಸಿಂಗ್ ಅವರನ್ನು ಬಂಧಿಸಿರುವುದಾಗಿ ಮೂಲಗಳು ಹೇಳಿವೆ. ಬಂಧಿತ ಸಿಂಗ್ ಅವರು ಸ್ವಲ್ಪ ಸಮಯದಿಂದ ಟಿಎಂಸಿ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದೆ ದೂರವೇ ಉಳಿದಿದ್ದಾರೆ.
ಹಣ ಅಕ್ರಮ ವರ್ಗಾವಣೆಯ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸಿಂಗ್ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದವರನ್ನು ವಿಚಾರಣೆಗೆ ಒಳಪಡಿಸಿತ್ತು 1, 900 ಕೋಟಿ ರೂ.ಗಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಯುಎನ್ಐ ಕೆಎಸ್ಆರ್ 1543