Wednesday, Jun 3 2020 | Time 08:51 Hrs(IST)
  • ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ
  • ವಂದೇ ಭಾರತ್ ಮಿಷನ್ ಅಡಿ ಗಲ್ಫ್ ದೇಶಗಳಿಂದ 2,200ಕ್ಕೂ ಹೆಚ್ಚು ಭಾರತೀಯರು ವಾಪಸ್
  • ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ
International Share

ಅನ್ಯ ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಭಾರತ ಹೊಂದಿಲ್ಲ; ರಾಜನಾಥ್ ಸಿಂಗ್

ಅನ್ಯ ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಭಾರತ ಹೊಂದಿಲ್ಲ; ರಾಜನಾಥ್ ಸಿಂಗ್
ಅನ್ಯ ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಭಾರತ ಹೊಂದಿಲ್ಲ; ರಾಜನಾಥ್ ಸಿಂಗ್

ಪ್ಯಾರಿಸ್, ಅ.9 (ಯುಎನ್‌ಐ) ಭಾರತ ತನ್ನ ಭದ್ರತೆಗಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆಯೇ ಹೊರತು, ಯಾವುದೇ ಅನ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನವನ್ನು ಮಂಗಳವಾರ ಅಧಿಕೃತವಾಗಿ ಸ್ವೀಕರಿಸಿದ ನಂತರ, ರಾಜನಾಥ್ ಸಿಂಗ್ ವಿಜಯದಶಮಿಯ ಶುಭದಿನದಂದು ರಫೇಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ’ಇದೊಂದು ಮಹತ್ವದ ಐತಿಹಾಸಿಕ ದಿನ. ರಫೇಲ್ ಯುದ್ಧ ವಿಮಾನ ಹಸ್ತಾಂತರಿಸುವ ಮೂಲಕ ಭಾರತ ಮತ್ತು ಫ್ರಾನ್ಸ್ ನಡುವಣ ಸಂಬಂಧ ಮತ್ತಷ್ಟು ಬಲಪಡಿಸಿದಂತಾಗಿದೆ ಎಂದರು.

ರಫೇಲ್ ಯುದ್ಧ ವಿಮಾನ ಸೇರ್ಪಡೆ ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದಂತಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಫೇಲ್ ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀಸಲಾಗಿದೆ. ಆದರೆ, ಯಾವುದೇ ಅನ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶ ನಮಗಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಆಯುಧ ಪೂಜೆಯ ರಾಜನಾಥ್ ಸಿಂಗ್ ರಫೇಲ್ ಜೆಟ್ ವಿಮಾನದಲ್ಲಿ ಹಾರಾಟ ನಡೆಸಿದರು. ಈ ಸಂಬಂಧ ತಮ್ಮ ಅನುಭವವನ್ನು ವಿವರಿಸಿದ ರಕ್ಷಣಾ ಸಚಿವರು, ರಫೇಲ್ ವಿಮಾನದಲ್ಲಿನ ಪ್ರಯಾಣ ಹೆಚ್ಚು ಆರಾಮದಾಯಕ ಎಂದು ಬಣ್ಣಿಸಿದರು.

ಜೀವನದಲ್ಲಿ ಸೂಪರ್‌ ಸಾನಿಕ್ ವೇಗದಲ್ಲಿ ಪ್ರಯಾಣಿಸುತ್ತೇನೆ ಎಂದು ಊಹಿಸಿರಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಭಾರತೀಯ ವಾಯುಪಡೆಗೆ ರಫೇಲ್ ಜೆಟ್‌ಗಳ ಸೇರ್ಪಡೆಗೊಳಿಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ದೇಶದ ಭದ್ರತೆಗಾಗಿ ಮೋದಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಫೆಬ್ರವರಿ 2021ರ ವೇಳೆಗೆ ಫ್ರಾನ್ಸ್ ಇನ್ನೂ 18 ರಫೇಲ್ ವಿಮಾನಗಳನ್ನು ಭಾರತಕ್ಕೆ ತಲುಪಿಸಲಿದೆ. ಮೇ 2022 ರ ವೇಳೆಗೆ ದೇಶದ ವಾಯುಪಡೆಗೆ 36 ರಫೇಲ್ ಜೆಟ್ ವಿಮಾನಗಳು ಸೇರಲಿವೆ.

ಯುಎನ್ ಐ ಕೆವಿಆರ್ ಎಎಚ್ 1150

More News

ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ

03 Jun 2020 | 8:13 AM

 Sharesee more..
ಗಲಭೆಗಳನ್ನು ಹತ್ತಿಕ್ಕಲು ಹೆಚ್ಚಿನ ಸೇನೆ: ವಾಷಿಂಗ್ಟನ್‍ಗೆ ಸಾವಿರಾರು ಸಶಸ್ತ್ರ ಪಡೆಗಳ ನಿಯೋಜನೆ- ಟ್ರಂಪ್

ಗಲಭೆಗಳನ್ನು ಹತ್ತಿಕ್ಕಲು ಹೆಚ್ಚಿನ ಸೇನೆ: ವಾಷಿಂಗ್ಟನ್‍ಗೆ ಸಾವಿರಾರು ಸಶಸ್ತ್ರ ಪಡೆಗಳ ನಿಯೋಜನೆ- ಟ್ರಂಪ್

02 Jun 2020 | 5:44 PM

ವಾಷಿಂಗ್ಟನ್, ಜೂನ್ 2 (ಸ್ಪುಟ್ನಿಕ್) ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಭಾಯಿಸಲು ರಾಷ್ಟ್ರರಾಜಧಾನಿಯಲ್ಲಿ ಸಾವಿರಾರು ಸಶಸ್ತ್ರ ಪಡೆಗಳ ನಿಯೋಜನೆ ಸೇರಿದಂತೆ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಅಧ್ಯಕ್ಷೀಯ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 Sharesee more..
ಕೊವಿಡ್‍-19 ಪರಿಣಾಮ: ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆ 7 9 ಟ್ರಿಲಿಯನ್‍ ಡಾಲರ್‍ ನಷ್ಟು ಕುಸಿತ ಅಂದಾಜು

ಕೊವಿಡ್‍-19 ಪರಿಣಾಮ: ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆ 7 9 ಟ್ರಿಲಿಯನ್‍ ಡಾಲರ್‍ ನಷ್ಟು ಕುಸಿತ ಅಂದಾಜು

02 Jun 2020 | 5:25 PM

ವಾಷಿಂಗ್ಟನ್, ಜೂನ್ 2 (ಕ್ಸಿನ್ಹುವಾ) ಕೊವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮದಿಂದ ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆಯ ಗಾತ್ರ 7.9 ಟ್ರಿಲಿಯನ್ ಡಾಲರ್ ನಷ್ಟು ಕುಸಿತ ಕಾಣಲಿದೆ ಎಂದು ಸಿಬಿಒ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಅಂದಾಜಿಸಲಾಗಿದೆ.

 Sharesee more..