Monday, Jul 13 2020 | Time 00:17 Hrs(IST)
Entertainment Share

ಅನಾರೋಗ್ಯಕ್ಕೆ ತುತ್ತಾದವರ ನೆರವಿಗಾಗಿ ದತ್ತಿ ನಿಧಿ: ಸುನೀಲ್ ಪುರಾಣಿಕ್

ಬೆಂಗಳೂರು, ಮೇ 28 (ಯುಎನ್ಐ) ರಾಜ್ಯ ಸರ್ಕಾರವು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ, ಕರ್ನಾಟಕ ರಾಜ್ಯದ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಕಲ್ಯಾಣ ನಿಧಿ ' ದತ್ತಿ ನಿಧಿ ' ಯನ್ನು ಜಾರಿಗೆ ತಂದಿದೆ.
ಇದರ ಅನ್ವಯ ಆರೋಗ್ಯ ಸಮಸ್ಯೆಯಿಂದ ಸಂಕಷ್ಟಕ್ಕೀಡಾಗಿರುವ ಕರ್ನಾಟಕ ರಾಜ್ಯದ ಚಲನಚಿತ್ರ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರು, ದತ್ತಿ ನಿಧಿಯಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವವರರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕರ್ನಾಟಕ ಚಲನಚಿತ್ರ ಸಂಕಲನಕಾರರ ಸಂಘ , ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ, ಕರ್ನಾಟಕ ಚಲನಚಿತ್ರ ಸಂಗೀತ ನಿರ್ದೇಶಕರ ಸಂಘ, ಕರ್ನಾಟಕ ಚಲನಚಿತ್ರ ಬರಹಗಾರರ ಸಂಘ , ಕರ್ನಾಟಕ ಚಲನಚಿತ್ರ ಸಂಗೀತಗಾರರ ಸಂಘ ಜೊತೆಗೆ, ಕರ್ನಾಟಕ ಕಲಾವಿದರು ಮತ್ತು ಕಾರ್ಮಿಕರ ಒಕ್ಕೂಟದ,ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘ, ಕರ್ನಾಟಕ ಚಲನಚಿತ್ರ ನಿರ್ಮಾಣ ಸಹಾಯಕರ ಸಂಘ, ಕರ್ನಾಟಕ ಚಲನಚಿತ್ರ ಕಲಾ ನಿರ್ದೇಶಕರು ಹಾಗೂ ಸಹ ಕಲಾ ನಿರ್ದೇಶಕರ ಸಂಘ,ಕರ್ನಾಟಕ ಚಲನಚಿತ್ರ ಚಾಲಕರ ಸಂಘ,
ಕರ್ನಾಟಕ ಚಲನಚಿತ್ರ ಕಾರ್ಪೆಂಟರ್ ಸಂಘ ಹಾಗೂ ಕರ್ನಾಟಕ ಚಲನಚಿತ್ರ ಡಬ್ಬಿಂಗ್ ಕಲಾವಿದರ ಸಂಘ, ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಸಂಘ, ಕರ್ನಾಟಕ ಚಲನಚಿತ್ರ ವರ್ಣಾಲಂಕರ ಸಂಘ, ಕರ್ನಾಟಕ ಚಲನಚಿತ್ರ ಸಾಹಸ ನಿರ್ದೇಶಕರು ಮತ್ತು ಸಾಹಸ ಕಲಾವಿದರ ಸಂಘ,
ಕರ್ನಾಟಕ ಚಲನಚಿತ್ರ ಸ್ಥಿರ ಛಾಯಾಗ್ರಾಹಕರ ಸಂಘ, ಕರ್ನಾಟಕ ಚಲನಚಿತ್ರ ಲೈಟ್ ಮೆನ್ ಸಂಘ, ಕರ್ನಾಟಕ ಚಲನಚಿತ್ರ ಕ್ಯಾಮೆರಗಾರರ ಸಂಘ, ಕರ್ನಾಟಕ ಚಲನಚಿತ್ರ ಸಹಾಯಕ ನಿರ್ದೇಶಕರ ಸಂಘ, ಕರ್ನಾಟಕ ಚಲನಚಿತ್ರ ಸಹ ಕಲಾವಿದರ ಸಂಘ (ಮೈಸೂರು)ಕರ್ನಾಟಕ ಚಲನಚಿತ್ರ ಪೈಂಟರ್ ಸಂಘ, ಕರ್ನಾಟಕ ಚಲನಚಿತ್ರ ಪೋಷಕ ನಟರ ಸಂಘ.ಈ ಸಂಘಗಳಲ್ಲಿ ನೋಂದಣಿಯಾಗಿರುವ ಸದಸ್ಯರಾಗಿದ್ದು, ಕನಿಷ್ಠ 10 ವರ್ಷ ಸದಸ್ಯತ್ವ ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.
ಆರ್ಥಿಕ ನೆರವು, ಅಕಾಲಿಕ ಮರಣ, ಕ್ಯಾನ್ಸರ್, ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು, ಅಪಘಾತ, ಮೂತ್ರಪಿಂಡ ಕ್ಕೆ ಸಂಬಂಧಿಸಿದ ರೋಗಗಳು, ದೀರ್ಘ ಕಾಲದ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಆರ್ಥಿಕ ನೆರವು ಕೋರಿ ಸಲ್ಲಿಸುವ ಅರ್ಜಿಯನ್ನು, ಪ್ರಕರಣದ ಸಮಯ ಸಂದರ್ಭದ ಗಂಭೀರತೆ ಹಾಗೂ ತೀವ್ರತೆಯನ್ನು ಆಧರಿಸಿ ದತ್ತಿ ಸಭೆಯು ನಿರ್ಣಯವನ್ನು ತೆಗೆದುಕೊಳ್ಳಲಿದ್ದು, ಸಂಕಷ್ಟದಲ್ಲಿರುವ ಕಲಾವಿದರು, ಕಾರ್ಮಿಕರು ಹಾಗೂ ತಂತ್ರಜ್ಞರು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅರ್ಜಿಯನ್ನು ಸಲ್ಲಿಸಿ, ಈ ದತ್ತಿ ನಿಧಿಯ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಎನ್ಐ ಪಿಕೆ ಎಎಚ್ 2200
More News

ಬಾಲಿವುಡ್ ಹಾಸ್ಯ ನಟ ಜಗದೀಪ್ ಜಾಫ್ರಿ ನಿಧನ

08 Jul 2020 | 11:30 PM

 Sharesee more..
ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

08 Jul 2020 | 6:18 PM

ಬೆಂಗಳೂರು, ಜುಲೈ 08 (ಯುಎನ್‍ಐ) ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..