Tuesday, Oct 22 2019 | Time 09:26 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
International Share

ಅಫ್ಘಾನಿಸ್ತಾನದಲ್ಲಿ ಮತ್ತೆ 24 ತಾಲಿಬಾನ್ ಉಗ್ರರ ಶರಣು

ಫೈಜಾಬಾದ್, ಸೆಪ್ಟೆಂಬರ್ 16 (ಯುಎನ್‌ಐ) ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಶರಣಾಗತಿ ಮುಂದುವರೆದಿದ್ದು, ಉತ್ತರ ಬಡಾಖಾನ್ ಪ್ರಾಂತ್ಯದಲ್ಲಿ ಸೇನೆಯ ಮುಂದೆ ಇನ್ನೂ 24 ಉಗ್ರರು ಶರಣಾಗಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
24 ತಾಲಿಬಾನ್ ಉಗ್ರರು ಭಾನುವಾರ ಸಂಜೆ ಬಡಾಖಾನ್ ಪ್ರಾಂತ್ಯದ ಯಮಗಾನ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸೇನೆಗೆ ಶರಣಾಗಿದ್ದಾರೆ ಜೊತೆಗೆ ಅವರು ಶಸ್ತ್ರಾಸ್ತ್ರಗಳನ್ನು ಹಸ್ತಾಂತರ ಮಾಡಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ. ಶರಣಾದ ಉಗ್ರರ ಪೈಕಿ ಗುಂಪಿನ ಕಮಾಂಡರ್ ಖಾರಿ ಸುಲ್ತಾನ್ ಕೂಡ ಸೇರಿದ್ದಾರೆ.
ತಾಲಿಬಾನ್ ಉಗ್ರರು ಈಗ ಸರಿಯಾದ ಮಾರ್ಗ ಕಂಡುಕೊಂಡಿದ್ದಾರೆ ಮತ್ತು ಹಿಂದಿನ ತಪ್ಪು ಮಾರ್ಗವನ್ನು ತ್ಯಜಿಸಿ ಮುಖ್ಯವಾಹಿನಿಯಲ್ಲಿ ಸೇರಲು ನಿರ್ಧರಿಸಿದ್ದೇವೆ ಎಂದು ಸುಲ್ತಾನ್ ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ನೆರೆಯ ತಖಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿ 200 ಕ್ಕೂ ಹೆಚ್ಚು ತಾಲಿಬಾನ್ ಉಗ್ರರು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ.
ಯುಎನ್ಐ ಕೆಎಸ್ಆರ್ 1220