Wednesday, Jul 15 2020 | Time 03:21 Hrs(IST)
Entertainment Share

ಅಮೆರಿಕಾದಲ್ಲಿ ‘ನ್ಯೂರಾನ್’ ಟ್ರೇಲರ್‌ಗೆ ಮೆಚ್ಚುಗೆ

ಅಮೆರಿಕಾದಲ್ಲಿ ‘ನ್ಯೂರಾನ್’ ಟ್ರೇಲರ್‌ಗೆ ಮೆಚ್ಚುಗೆ
ಅಮೆರಿಕಾದಲ್ಲಿ ‘ನ್ಯೂರಾನ್’ ಟ್ರೇಲರ್‌ಗೆ ಮೆಚ್ಚುಗೆ

ಬೆಂಗಳೂರು, ನ ೨೦ (ಯುಎನ್‌ಐ) ಫ್ರೆಂಡ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ವಿನಯ್‌ಕುಮಾರ್.ವಿ.ಆರ್ ಅವರು ನಿರ್ಮಿಸಿರುವ ‘ನ್ಯೂರಾನ್‘ ಚಿತ್ರ ಶುಕ್ರವಾರ ರಾಜ್ಯಾದ್ಯಂತ ೬೫ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ನಡೆದ ನೈಜ ಘಟನೆ ಆಧಾರಿತ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ವಿಕಾಸ್ ಪುಷ್ಪಗಿರಿ.

ಇದೇ ಶುಕ್ರವಾರ ರಾಜ್ಯಾದ್ಯಂತ ನ್ಯೂರಾನ್ ಬಿಡುಗಡೆಯಾಗಲಿದೆ ಅಮೆರಿಕ, ಆಸ್ಟ್ರೇಲಿಯಾ ಮತ್ತುಯುರೋಪ್ ರಾಷ್ಟ್ರಗಳಲ್ಲಿ ಮುಂದಿನ ವಾರ ರಿಲೀಸ್‌ಗೆ ಚಿಂತನೆ ನಡೆದಿದೆ ಅಮೆರಿಕಾದಲ್ಲಿ ನ್ಯೂರಾನ್ ಟ್ರೇಲರ್ ವೀಕ್ಷಿಸಿರುವ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ತಿಳಿಸಿದ್ದಾರೆ

ಯುವ ಈ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇನ್ನುಳಿದಂತೆ ನೇಹಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ವೈಷ್ಣವಿ ಮೆನನ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೈಜಗದೀಶ್, ಶಿಲ್ಪಾ ಶೆಟ್ಟಿ, ವರ್ಷ, ಅರವಿಂದ್ ರಾವ್, ಕಬೀರ್ ಸಿಂಗ್(ಬಾಂಬೆ), ರಾಕ್‌ಲೈನ್ ಸುಧಾಕರ್, ಕಾರ್ತಿಕ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಹೈದರಾಬಾದ್‌ನ ಶೋಯಬ್ ಅಹಮದ್ ಛಾಯಾಗ್ರಹಣ, ಶ್ರೀಧರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ಡಾ ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಡುಗಳನ್ನು ರಚಿಸಿದ್ದಾರೆ. ಶ್ರೀಹರ್ಷ ಸಂಭಾಷಣೆ ಬರೆದಿದ್ದಾರೆ.

ಯುಎನ್‌ಐ ಎಸ್‌ಎ ವಿಎನ್ ೧೭೧೩