Monday, Jan 18 2021 | Time 00:59 Hrs(IST)
National Share

ಅಯೋಧ್ಯೆಯ ಮಸೀದಿ ನಿರ್ಮಾಣದ ಟ್ರಸ್ಟ್ ಗೆ ಸರ್ಕಾರದ ನಾಮನಿರ್ದೇಶಿತರ ನೇಮಕ : ಮನವಿ ತಿರಸ್ಕರಿಸಿದ ಸುಪ್ರೀಂ

ಅಯೋಧ್ಯೆಯ ಮಸೀದಿ ನಿರ್ಮಾಣದ ಟ್ರಸ್ಟ್ ಗೆ ಸರ್ಕಾರದ ನಾಮನಿರ್ದೇಶಿತರ ನೇಮಕ : ಮನವಿ ತಿರಸ್ಕರಿಸಿದ ಸುಪ್ರೀಂ
ಅಯೋಧ್ಯೆಯ ಮಸೀದಿ ನಿರ್ಮಾಣದ ಟ್ರಸ್ಟ್ ಗೆ ಸರ್ಕಾರದ ನಾಮನಿರ್ದೇಶಿತರ ನೇಮಕ : ಮನವಿ ತಿರಸ್ಕರಿಸಿದ ಸುಪ್ರೀಂ

ನವದೆಹಲಿ, ಡಿ 04 (ಯುಎನ್‌ಐ) ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸ್ಥಾಪಿಸಲಾದ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನೇತೃತ್ವದ ನ್ಯಾಯಪೀಠವು ವಕೀಲರಾದ ಶಿಶಿರ್ ಚತುರ್ವೇದಿ ಮತ್ತು ಕೆ ಕೆ ಶುಕ್ಲಾ ಸಲ್ಲಿಸಿದ್ದ ತುಂಬಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ವಜಾಗೊಳಿಸಿತು.

ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರನ್ನೂ ಒಳಗೊಂಡ ನ್ಯಾಯಪೀಠ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಟ್ರಸ್ಟ್‌ಗೆ ಸೇರಿಸಲಾಗುವುದಿಲ್ಲ ಎಂದು ಹೇಳಿದೆ.

ಅರ್ಜಿದಾರರು ರಾಮ ಮಂದಿರ ಟ್ರಸ್ಟ್‌ನ ಮಾರ್ಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್‌ಗೆ ಸೇರಿಸಲು ಆದೇಶಿಸುವಂತೆ ಕೋರಿ ಮನವಿ ಮಾಡಿದ್ದರು.

ಯುಎನ್ಐ ಎಸ್‍ಎ 1403

More News

ಕೆವಾಡಿಯಾ ಜಾಗತಿಕ ಪ್ರವಾಸಿ ತಾಣ: ಮೋದಿ

17 Jan 2021 | 10:23 PM

 Sharesee more..

ಜಿ-7 ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

17 Jan 2021 | 9:04 PM

 Sharesee more..
ಜೂನ್‌ನಲ್ಲಿ ಬ್ರಿಟನ್‌ ಜಿ-7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸುವ ಸಾಧ್ಯತೆ

ಜೂನ್‌ನಲ್ಲಿ ಬ್ರಿಟನ್‌ ಜಿ-7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸುವ ಸಾಧ್ಯತೆ

17 Jan 2021 | 8:26 PM

ನವದೆಹಲಿ, ಜ 17 (ಯುಎನ್‌ಐ) ನೈಋತ್ಯ ಇಂಗ್ಲೆಂಡ್‌ನ ಸಣ್ಣ ಕಡಲತೀರದ ರೆಸಾರ್ಟ್‌ ಕಾರ್ನ್‌ವಾಲ್‌ನಲ್ಲಿ ಜೂನ್ 11 ರಿಂದ 13ರವರೆಗೆ ನಡೆಯಲಿರುವ ವಿಶ್ವದ ಏಳು ಕೈಗಾರಿಕೀಕರಣಗೊಂಡ ದೇಶಗಳ ಜಿ -7 ರ 47 ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

 Sharesee more..