Sunday, May 31 2020 | Time 18:23 Hrs(IST)
 • ರಾಜ್ಯದಲ್ಲಿ ಒಂದೇ ದಿನ 299 ಕೊರೋನಾ ಸೋಂಕಿತರು ಪತ್ತೆ, ಒಟ್ಟು ಸಂಖ್ಯೆ 3221ಕ್ಕೇರಿಕೆ
 • ತಮ್ಮ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಇಬ್ಬರು ಭಾರತೀಯರನ್ನು ಹೆಸರಿಸಿದ ಅಂಪೈರ್ ಇಯಾನ್
 • ರಾಜ್ಯ ಸರ್ಕಾರದ ಲಾಕ್‌ ಡೌನ್‌ 5 0 ಹೊಸ ಮಾರ್ಗಸೂಚಿ ಪ್ರಕಟ; ಮೂರು ಹಂತಗಳಲ್ಲಿ ನಿರ್ಬಂಧ ಸಡಿಲಿಕೆ
 • ತೆಲಂಗಾಣದಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ
 • 2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್
 • ಕೇಂದ್ರದಿಂದ 5 ಸಾವಿರ ಕೋಟಿ ರೂ ನೆರವಿನ ಬೇಡಿಕೆಯಿಟ್ಟ ದೆಹಲಿ
 • ಮುಂಬೈನಲ್ಲಿ ಸಿಲುಕಿದ್ದ ಇನ್ನೂ 180 ವಲಸಿಗರು ವಿಶೇಷ ವಿಮಾನದ ಮೂಲಕ ರಾಂಚಿಗೆ ಆಗಮನ
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
 • ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ
Special Share

ಅಯೋಧ್ಯೆ ವಿವಾದ ತೀರ್ಪಿನ ಹಿನ್ನೆಲೆ : ಉತ್ತರಪ್ರದೇಶದಲ್ಲಿ ಬಿಗಿ ಬಂದೋಬಸ್ತ್

ಅಯೋಧ್ಯೆ ವಿವಾದ ತೀರ್ಪಿನ ಹಿನ್ನೆಲೆ : ಉತ್ತರಪ್ರದೇಶದಲ್ಲಿ ಬಿಗಿ ಬಂದೋಬಸ್ತ್
ಅಯೋಧ್ಯೆ ವಿವಾದ ತೀರ್ಪಿನ ಹಿನ್ನೆಲೆ : ಉತ್ತರಪ್ರದೇಶದಲ್ಲಿ ಬಿಗಿ ಬಂದೋಬಸ್ತ್

ಲಖನೌ, ನ 8 (ಯುಎನ್ಐ) ಅಯೋಧ್ಯೆ ಭೂವಿವಾದದ ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಹೊರಬೀಳುವ ನಿರೀಕ್ಷೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಸಂದರ್ಭ ಬಳಕೆಗೆಂದು ಎರಡು ಹೆಲಿಕಾಫ್ಟರ್ ಗಳನ್ನು ಸರ್ಕಾರ ಮೀಸಲಿಟ್ಟಿದ್ದು ರಾಜಧಾನಿ ಲಖನೌ ಮತ್ತು ವಿವಾದಿತ ಅಯೋಧ್ಯೆಯಲ್ಲಿ ಗಂಭೀರ ಸ್ಥಿತಿ ಉದ್ಭವಿಸಿದರೆ ಈ ಹೆಲಿಕಾಪ್ಟರ್‌ಗಳನ್ನು ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.ತೀರ್ಪಿನ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಗುರುವಾರ ರಾತ್ರಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು, ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ನ್ಯಾಯಾಧೀಶರೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಮಾಲೋಚನೆ ನಡೆಸಿದ್ದಾರೆ.ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯುಎನ್ಐ ಜಿಎಸ್ಆರ್ 1146