Monday, Jun 21 2021 | Time 06:18 Hrs(IST)
Entertainment Share

ಅರ್ಧ ಶತಕದತ್ತ ‘ಕಾಣದಂತೆ ಮಾಯವಾದನು’

ಅರ್ಧ ಶತಕದತ್ತ ‘ಕಾಣದಂತೆ ಮಾಯವಾದನು’
ಅರ್ಧ ಶತಕದತ್ತ ‘ಕಾಣದಂತೆ ಮಾಯವಾದನು’

ಬೆಂಗಳೂರು, ಅ 20 (ಯುಎನ್‍ಐ) ಲಾಕ್ ಡೌನ್ ಗೂ ಮುನ್ನ ತೆರೆಕಂಡಿದ್ದ ‘ಕಾಣದಂತೆ ಮಾಯವಾದನು’ ಚಿತ್ರಕ್ಕೆ ರಿಲೀಸ್ ಆದ ಮೊದಲ ವಾರ ಉತ್ತಮ ಪ್ರತಿಕ್ರಿಯೆ ಬಂದರೂ ಎರಡನೇ ವಾರ ಸಿನಿಮಾ ಥಿಯೇಟರ್ ‌ಗಳ ಸಂಖ್ಯೆ ಕುಸಿಯಿತು. ಆದರೆ ಮೂರನೇ ವಾರ ಥಿಯೇಟರ್‌‌‌ಗಳಲ್ಲಿ ತನ್ನ ಗುಣಮಟ್ಟದಿಂದ ಗಟ್ಟಿಯಾಗಿ ನೆಲೆಯೂರಿತು. ಪ್ರದರ್ಶನ ಸಂಖ್ಯೆ ಹಾಗು ಥಿಯೇಟರ್‌ಗಳ ಸಂಖ್ಯೆ ಏರಿಸಿಕೊಂಡ ಸಿನಿಮಾ ಮತ್ತೆ ಲಾಕ್‌ಡೌನ್‌ನಿಂದಾಗಿ ಚಿತ್ರದ ಓಟಕ್ಕೆ ತಡೆ ಬಿತ್ತು. ನಿಲ್ಲುವ ಮುನ್ನ ವೀಕೆಂಡ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿತ್ತು.

ಪದರ್ಶನ ನಿಲ್ಲುವಾಗ ಸಿನಿಮಾ 43 ದಿನಗಳನ್ನ ಪೂರೈಸಿತ್ತು. ಅನ್ ಲಾಕ್ ಬಳಿಕ ಈ ವಾರ 50 ದಿನಗಳ ಓಟವನ್ನು ಯಶಸ್ವಿಯಾಗಿ ಪೂರೈಸಲಿದೆ.

ಈ ಸಿನಿಮಾದ ಡಬ್ಬಿಂಗ್ ಹಕ್ಕುಗಳ ಮಾರಾಟ. ಕನ್ನಡ ಹೊರತುಪಡಿಸಿ ಮಿಕ್ಕೆಲ್ಲಾ ಭಾರತೀಯ ಭಾಷೆಗಳ ಡಿಜಿಟಲ್ ಹಕ್ಕುಗಳು ಮಾರಟವಾಗಿವೆ. ಲಾಕ್‌ಡೌನ ಸಮಯದಲ್ಲಿ 81 ಲಕ್ಷಕ್ಕೆ ಮಾರಾಟವಾಗಿರುವುದು ವಿಶೇಷ. ಈ ಸಿನಿಮಾದ ಹಾಡು "ಎಷ್ಟು ಚೆಂದ ಇವಳು" ಹೆಚ್ಚು ಜನಪ್ರಿಯ ವಾಗಿದೆ. ದಿನಕ್ಕೆ ಕನಿಷ್ಟ ‌ಸಾವಿರ ಮಂದಿ ಹಾಡನ್ನು ವೀಕ್ಷಿಸುತ್ತಿದ್ದಾರೆ.

ನಾಯಕನಾಗಿ ವಿಕಾಸ್, ನಾಯಕಿಯಾಗಿ ಸಿಂಧು ಲೋಕನಾಥ್ ಅಭಿನಯಿಸಿದ್ದಾರೆ. ಖಳನಾಯಕರಾಗಿ ಉದಯ್ ಹಾಗು ಭಜರಂಗಿ ಲೋಕಿಯಿದ್ದು, ವಿಶೇಷ ಪಾತ್ರದಲ್ಲಿ ಧರ್ಮಣ್ಣ, ಪೋಷಕ ಪಾತ್ರಗಳಲ್ಲಿ ಅಚ್ಯುತ್, ವಿನಯಾ ಪ್ರಸಾದ್, ಸುಚೇಂದ್ರ ಪ್ರಸಾದ್ ಮುಂತಾದವರಿದ್ದಾರೆ. ಸಂಗೀತ ಗುಮ್ಮಿನೇನಿ‌ ವಿಜಯ್. ಒಂದು ವಿಭಿನ್ನ ಪ್ರೇಮಕಥೆ ಮಾಡಿದ ಚಿತ್ರದ ನಿರ್ದೇಶಕ ರಾಜ್ ಪತ್ತಿಪಾಟಿ. ಚಂದ್ರಶೇಖರ್ ನಾಯ್ಡು ಸೋಮ್ ಸಿಂಗ್ ಹಾಗು ಪುಷ್ಪ ಸೋಮ್ ಸಿಂಗ್, ಬಂಡವಾಳ ಹೂಡಿದ್ದಾರೆ.ಯುಎನ್‍ಐ ಎಸ್‍ಎ 1014