Tuesday, Oct 20 2020 | Time 13:33 Hrs(IST)
 • ನಾಳೆ ಕೇಂದ್ರ ಸಂಪುಟ ಸಭೆ
 • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
 • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
 • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
 • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
 • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
 • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
 • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
 • ಸಿಎಸ್‌ಕೆ ಸೋಲಿನ ಬಳಿಕ ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾದ ಕೇದಾರ್ ಜಾಧವ್‌
 • ಮೂರು ತಿಂಗಳ ಚಳಿಗಾಲದಲ್ಲಿ ಮತ್ತಷ್ಟು ಕಾಡಲಿರುವ ಕೊರೋನ: ಎಚ್ಚರ, ಎಚ್ಚರ !!
 • ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸತತ ನಾಲ್ಕನೇ ದಿನವೂ ಇಳಿಕೆ
Parliament Share

ಅಶೋಕ್ ಗಸ್ತಿ ಬದುಕಿದ್ದಾಗಲೇ ಸಂತಾಪ ಸೂಚಿಸಿದ್ದೆ: ರಾಜ್ಯಸಭೆಯಲ್ಲಿ ಎಂ. ವೆಂಕಯ್ಯ ನಾಯ್ಡು

ಅಶೋಕ್ ಗಸ್ತಿ ಬದುಕಿದ್ದಾಗಲೇ ಸಂತಾಪ ಸೂಚಿಸಿದ್ದೆ: ರಾಜ್ಯಸಭೆಯಲ್ಲಿ ಎಂ. ವೆಂಕಯ್ಯ ನಾಯ್ಡು
ಅಶೋಕ್ ಗಸ್ತಿ ಬದುಕಿದ್ದಾಗಲೇ ಸಂತಾಪ ಸೂಚಿಸಿದ್ದೆ: ರಾಜ್ಯಸಭೆಯಲ್ಲಿ ಎಂ. ವೆಂಕಯ್ಯ ನಾಯ್ಡು

ನವದೆಹಲಿ, ಸೆ 18[ಯುಎನ್ಐ] ರಾಜ್ಯವನ್ನು ಪ್ರತಿನಿಧಿಸುವ ಹಾಲಿ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಹಾಗೂ ಮಾಜಿ ಸದಸ್ಯರಾದ ಡಾ. ಕಪಿಲ್ ವಾತ್ಸಯನ್ ಅವರ ನಿಧನಕ್ಕೆ ರಾಜ್ಯಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಅರ್ದ ಗಂಟೆ ಕಲಾಪವನ್ನು ಮುಂದೂಡಲಾಯಿತು.

ಸದನ ಸಮಾವೇಶಗೊಳ್ಳುತ್ತಿದ್ದಂತೆ , ಸಭಾಪತಿ ಎಂ. ವೆಂಕಯ್ಯ ನಾಯ್ಡು ಸಂತಾಪ ಸೂಚಕ ನಿರ್ಣಯ ಮಂಡಿಸಿ, ಸದಸ್ಯರ ಸಾಧನೆಗಳನ್ನು ಸ್ಮರಿಸಿದರು.

ಕರ್ನಾಟಕದ ಅಶೋಕ್ ಗಸ್ತಿ ಜೂನ್ 20ರಂದು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರು ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾದರೂ ಸದನಕ್ಕೆ ಒಮ್ಮೆಯೂ ಹಾಜರಾಗಿರಲಿಲ್ಲ. ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ, ತಮ್ಮ ಕಾರ್ಯಾಲಯದಿಂದಲೂ ಸಂತಾಪ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸಲಾಗಿತ್ತು. ಇದು ತಮ್ಮಿಂದಾದ ಅಚಾತುರ್ಯ ಎಂದರು.

ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಪರ್ಕಿಸಿದಾಗ , ಗಸ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ದೊರೆಯಿತು. ಆಸ್ಪತ್ರೆ ವೈದ್ಯರ ಜೊತೆ ತಾವು ಖುದ್ದಾಗಿ ಮಾಹಿತಿ ಪಡೆದು ಅವರು ಬದುಕಿರುವುದನ್ನು ಖಚಿತಪಡಿಸಿಕೊಂಡೆ ಎಂದು ವೆಂಕಯ್ಯನಾಯ್ಡು ಸ್ಪಷ್ಟಪಡಿಸಿದರು.

ದುರದೃಷ್ಟವೆಂದರೆ ರಾತ್ರಿ ಅವರು ಮೃತಪಟ್ಟಿರುವುದಾಗಿ ತಿಳಿದುಬಂತು. ಇದೊಂದು ನೋವಿನ ಘಟನೆ . ಅಶೋಕ್ ಗಸ್ತಿ ಅವರನ್ನು ಬಹು ಹಿಂದಿನಿಂದಲೇ ಬಲ್ಲೆ. ಅವರು ಸಾಮಾನ್ಯ ಕುಟುಂಬದಿಂದ ಬಂದಿದ್ದು, ನಿಷ್ಠಾವಂತ ಕಾರ್ಯಕರ್ತರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಉಪಸಭಾಪತಿ ಕಂಬನಿ ಮಿಡಿದರು.

ವಕೀಲರಾಗಿ, ಹಿಂದುಳಿದ ವರ್ಗಗಳ ನಿಗಮಮಂಡಳಿಯ ಅಧ್ಯಕ್ಷರಾಗಿ, ತಳಮಟ್ಟದ ಕಾರ್ಯಕರ್ತರಾಗಿ ಗಸ್ತಿ ಸೇವೆ ಸಲ್ಲಿಸಿದ್ದರು. ಅವರ ನಿಧನ ತಮಗೆ ತೀವ್ರ ದುಖಃ ಉಂಟು ಮಾಡಿದೆ ಎಂದರು.

ಗಸ್ತಿ ಬಿಜೆಪಿಯ ಹಾಲಿ ರಾಜ್ಯಸಭಾ ಸದಸ್ಯರಾಗಿದ್ದು, ಕೋವಿಡ್ -19 ಸೋಂಕಿನಿಂದ ಗುರುವಾರ ರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಯುಎನ್ಐ ಕೆ.ವಿ.ಆರ್ ವಿಎನ್

There is no row at position 0.