Saturday, Oct 24 2020 | Time 19:37 Hrs(IST)
 • ದೇಶಾದ್ಯಂತ ಉಚಿತ ಕೋವಿಡ್‌ ಲಸಿಕೆ ದೊರೆಯಬೇಕು; ಕೇಜ್ರೀವಾಲ್‌
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
 • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
 • ತಿರುಪತಿ ತಿಮ್ಮಪ್ಪ ದೇಗಲ ಪ್ರಸಾದ ತಯಾರಿಕ ಕೇಂದ್ರದಲ್ಲಿ ಸ್ಪೋಟ- ಐವರು ಕಾರ್ಮಿಕರಿಗೆ ಗಾಯ
 • ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ
 • ಗುಜರಾತ್‌; ಕಿಸಾನ್‌ ಸೂರ್ಯೋದಯ ಸೇರಿ ಮೂರು ಯೋಜನೆಗೆ ಪ್ರಧಾನಿ ಮೋದಿ ಚಾಲನೆ
 • ಕೆಲವೆಡೆ ಆಯುಧ ಪೂಜೆ, ಇನ್ನೂ ಕೆಲವೆಡೆ ಸಿದ್ಧತೆ: ಕಾರ್ಮಿಕರಿಗಿಲ್ಲ ಬೋನಸ್ !!!
 • ಓಲಾ, ಉಬರ್, ಆಟೋ ಚಾಲಕ ಸಂಘದ ಪದಾಧಿಕಾರಿಗಳು ಕಾಂಗ್ರೆಸ್ ಗೆ ಸೇರ್ಪಡೆ
 • ಸೇನಾ ಕ್ಯಾಂಟೀನ್ ಗಳಲ್ಲಿ ಇನ್ನೂ ವಿದೇಶಿ ಮದ್ಯ ಲಭ್ಯವಿರುವುದಿಲ್ಲ
 • ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
 • ಮುಖ್ಯಮಂತ್ರಿಯಾಗಲು ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು- ಡಿ ಕೆ ಶಿವಕುಮಾರ್
Karnataka Share

ಅಂತಾರಾಜ್ಯ ಗಾಂಜಾ ಮಾರಾಟಗಾರರ ಸೆರೆ: 57 ಕೆಜಿ ಗಾಂಜಾ ವಶ

ಬೆಂಗಳೂರು, ಸೆ.18 (ಯುಎನ್ಐ) ಮಾದಕ ವಸ್ತುವನ್ನು ಸಂಗ್ರಹಣೆ ಮಾಡಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ 9 ಮಂದಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ 57 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಾಲರಾಜು (27) , ಗೋಪಿನಾಥ ( 34 ), ವಿನೋದ್ ( 25) , ಪಿ.ಮನೋಹರ ( 29), ಕೆ.ಪಾಲ್ಪಾಂರಡಿ ( 27 ), ವೈಕಾಟ್ಟು ಚಿನ್ನು ( 30), ಟಿ.ಮದನ್ ( 25 ) ಸೇರಿ 9 ಜನ ಬಂಧಿತ ಆರೋಪಿಗಳು.
ಬಂಧಿತರಿಂದ 22 ಲಕ್ಷ ಮೌಲ್ಯದ 57 ಕೆ.ಜಿ. ಗಾಂಜಾ, 10 ಮೊಬೈಲ್ ಫೋನ್‍ ಮತ್ತು 20,500 ರೂ. ಸೇರಿ ಒಂದು ಜೈಲೋ ಕಾರು ಮತ್ತು ಒಂದು ಹೋಂಡಾ ಡಿಯೋ ದ್ವಿಚಕ್ರ ವಾಹನ ವಶಪಡಿಸಿಕೊಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿ ಮನೋಹರ ಎಂಬಾತ ಜೈಲಿನಲ್ಲಿರುವಾಗ ಈ ಮೊದಲೇ ಗಾಂಜಾ ಪ್ರಕರಣದಲ್ಲಿ ಜೈಲು ಸೇರಿದ್ದನು. ವಿಶಾಖಪಟ್ಟಣ ಜಿಲ್ಲೆ ವಂತಡಪಲ್ಲಿ ಗ್ರಾಮದವರಾದ ಕೃಪಾನಂದ ಮತ್ತು ಪಾರ್ಥ ಎಂಬುವವರ ಪರಿಚಯವಾಗಿ ಬೈಕ್ ಕಳ್ಳತನಗಳಿಂದ ಕಡಿಮೆ ಹಣ ಸಿಗುತ್ತಿದೆ ಎಂದು ಬಂತರ ಗಾಂಜಾವನ್ನು ಮಾರಾಟ ಮಾಡಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂಬ ಯೋಚನೆಯಿಂದ ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಒಂದು ತಂಡವನ್ನು ರಚಿಸಿಕೊಂಡಿದ್ದನು. ವಿಶಾಖಪಟ್ಟಣ ಜಿಲ್ಲೆಯ ವಂತಡಪಲ್ಲಿ ಗ್ರಾಮದವರಾದ ಕೃಪಾನಂದ ಮತ್ತು ಪಾರ್ಥ ಎಂಬುವವರ ಬಳಿಯಿಂದ ಒಂದು ಕೆ.ಜಿ. ಗಾಂಜಾಗೆ 8,000 ರೂಗಳಂತೆ ಖರೀದಿಸಿಕೊಂಡು ಅದನ್ನುಬೆಂಗಳೂರಿನ ಸುತ್ತ-ಮುತ್ತಲ ಪ್ರದೇಶಗಳಲ್ಲಿ ಹಾಗೂ ತಮಿಳುನಾಡಿನ, ಹೊಸೂರು, ಕೃಷ್ಣಗಿರಿ ಮುಂತಾದ ಕಡೆ ಬಾಲರಾಜ್ ಮತ್ತು ಇತರರೊಂದಿಗೆ ಸೇರಿ ಕೆ.ಜಿ.ಗೆ 20,000 ರಿಂದ 30,000 ರೂ. ಗಳಂತೆ ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಗಳಿಗೆ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದನು. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ 141/2020 ಕಲಂ:20(ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಕೆ.ಕಿಶೋರ್ ಕುಮಾರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸಿಬ್ಬಂದಿಯ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಶ್ಲಾಘಿಸಿದ್ದಾರೆ.
ಯುಎನ್ಐ ಪಿಕೆ ಎಎಚ್ 1337
More News
ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

24 Oct 2020 | 5:33 PM

ಬೆಂಗಳೂರು,ಅ 24(ಯುಎನ್ಐ) ನಮಗೆ ಜಾತಿಯನ್ನು ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ. ತನ್ನನ್ನು ಬೆಳೆಸಿದ ಪಕ್ಷಕ್ಕೆ ಮೋಸ ಮಾಡಿದ್ದು,ಹೆತ್ತ ತಾಯಿಗೆ ದ್ರೋಹ ಬಗೆದಿದ್ದಾರೆ.ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

 Sharesee more..