Sunday, Apr 18 2021 | Time 09:08 Hrs(IST)
Special Share

ಅಂಬಾನಿ ನಿವಾಸದ ಬಳಿ ಜಿಲೆಟಿನ್ , ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಸಂಘಟನೆ

ಮುಂಬೈ, ಫೆ 28 (ಯುಎನ್ಐ) ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ತುಂಬಿದ್ದ ಕಾರನ್ನು ತಂದು ನಿಲ್ಲಿಸಿದ್ದು ನಮ್ಮದೇ ಹೊಣೆ ಎಂದು ನಿಷೇಧಿತ ಜೈಶ್-ಉಲ್-ಹಿಂದ್ ಸಂಘಟನೆ ಹೇಳಿ ಕೊಂಡಿದೆ.
ಮುಂಬೈ ಪೊಲೀಸರಿಗೆ ಟೆಲಿಗ್ರಾಂ ಆಯಪ್ ಮೂಲಕ ಕಳುಹಿಸಲಾಗಿರುವ ಸಂದೇಶದಲ್ಲಿ ಈ ವಿಚಾರವನ್ನು ಸಂಘಟನೆ ತಿಳಿಸಿದ್ದು, “ಇದು ಕೇವಲ ಟ್ರಯಲ್ ಅಷ್ಟೇ. ದೊಡ್ಡ ಚಿತ್ರ ಮುಂದೆ ಬರಲಿದೆ’ ಎಂಬ ಬೆದರಿಕೆ ಹಾಕಲಾಗಿದೆ. ಕಾರು ತಂದು ನಿಲ್ಲಿಸಿದ ನಮ್ಮ ಸಹೋದರ, ಈಗ ಸುರಕ್ಷಿತ ಸ್ಥಳಕ್ಕೆ ತಲುಪಿಯಾಗಿದೆ ಎಂದು ಹೇಳಲಾಗಿದೆ.
ಸಂದೇಶದಲ್ಲಿ, ಜ. 29ರಂದು ಸಂಭವಿಸಿದ್ದ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿನ ಸ್ಫೋಟ ಕೂಡ ನಮ್ಮದೇ ಕೆಲಸ ಎಂದು ಜೈಶ್-ಉಲ್-ಹಿಂದ್ ಹೇಳಿಕೊಂಡಿದ್ದು ,ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಇಸ್ರೇಲ್ ಗುಪ್ತಚರ ಸಂಸ್ಥೆ ಜಂಟಿಯಾಗಿ ಪ್ರಕರಣದ ತನಿಖೆ ನಡೆಸಿದರೂ ಆರೋಪಿಗಳನ್ನು ಪತ್ತೆ ಹಚ್ಚಲಾಗಲಿಲ್ಲ ಎಂದೂ ಅಣಕವಾಡಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಸಂದೇಶದ ಮೂಲ ಪತ್ತೆಗೆ ಪೊಲೀಸರು ಕೈ ಹಾಕಿದ್ದಾರೆ.
ಯುಎನ್ಐ ಕೆಎಸ್ಆರ್ 2227
More News
ದೇಶದಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಎರಡು ಪ್ರಮುಖ ಕಾರಣಗಳು; ಏಮ್ಸ್‌ ಮುಖ್ಯಸ್ಥ ಡಾ|| ಗುಲೇರಿಯಾ

ದೇಶದಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಎರಡು ಪ್ರಮುಖ ಕಾರಣಗಳು; ಏಮ್ಸ್‌ ಮುಖ್ಯಸ್ಥ ಡಾ|| ಗುಲೇರಿಯಾ

17 Apr 2021 | 9:04 PM

ನವದೆಹಲಿ, ಏ 17( ಯುಎನ್ಐ) ದೇಶದಲ್ಲಿ ಕೋವಿಡ್ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಿಸಲು ಎರಡು ಪ್ರಮುಖ ಕಾರಣಗಳಿವೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಶನಿವಾರ ಹೇಳಿದ್ದಾರೆ.

 Sharesee more..
ಕುಂಭ ಮೇಳ ಸಮಾಪನೆಗೊಂಡಿದೆ; ಸ್ವಾಮಿ ಅವಧೇಶಾನಂದ ಗಿರಿ ಘೋಷಣೆ

ಕುಂಭ ಮೇಳ ಸಮಾಪನೆಗೊಂಡಿದೆ; ಸ್ವಾಮಿ ಅವಧೇಶಾನಂದ ಗಿರಿ ಘೋಷಣೆ

17 Apr 2021 | 8:07 PM

ಹರಿದ್ವಾರ, ಏ 17( ಯುಎನ್ ಐ) ಕುಂಭ ಮೇಳ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಲಹೆಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂಭ ಮೇಳ ಶನಿವಾರ ಕೊನೆಗೊಂಡಿದೆ ಎಂದು ಜುನಾ ಅಖಾಡಾದ ಸ್ವಾಮಿ ಅವಧೇಶಾನಂದ ಗಿರಿ ಘೋಷಿಸಿದ್ದಾರೆ.

 Sharesee more..

ಕೋವಿಡ್‌ ಎಫೆಕ್ಟ್:‌ ಕರೆನ್ಸಿ ಮುದ್ರಣ ಸ್ಥಗಿತ

16 Apr 2021 | 5:54 PM

 Sharesee more..

ಪವನ್‌ ಕಲ್ಯಾಣ್‌ಗೆ ಕೋವಿಡ್‌ ದೃಢ

16 Apr 2021 | 5:38 PM

 Sharesee more..