Wednesday, Dec 11 2019 | Time 02:23 Hrs(IST)
  • ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್ ಅಶೋಕ್ ಲೇವಡಿ
business economy Share

ಆದಾಯ ತೆರಿಗೆ ಜಾಲತಾಣ ಮಾಹಿತಿ ಹಂಚಿಕೆ ವೇದಿಕೆ

ನವದೆಹಲಿ, ನ 22 (ಯುಎನ್ಐ) ಆದಾಯ ತೆರಿಗೆ ಜಾಲತಾಣದಲ್ಲಿ ಮಾಹಿತಿ ಹಂಚಿಕೆಗೆ ವೆಬ್ ಪೋರ್ಟಲ್ ಅನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಸಿಬಿಡಿಟಿ ಅಧ್ಯಕ್ಷ ಪಿ ಸಿ ಮೋಡಿ ಶುಕ್ರವಾರ ಅರ್ಪಣೆ ಮಾಡಿದ್ದಾರೆ.ಎಲ್ಲಾ ಸಂಬಂಧಿತ ಸ್ವಯಂಚಾಲಿತ ಮಾಹಿತಿ ಹಂಚಿಕೆ ಸಂಬಂಧಿತ ಮಾಹಿತಿ ಒಂದೆಡೆ ದೊರೆಯುವಂತಾಗಲು ಈ ಪೋರ್ಟಲ್ ಮಾಹಿತಿ ಕ್ರೋಢೀಕರಿಸಿ ಹಣಕಾಸು ಸಂಸ್ಥೆಗಳಿಗೆ, ಇಲಾಖಾ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿಯ ಸುಲಭ ಲಭ್ಯತೆ ಖಾತರಿಪಡಿಸಲಿದೆ.ಸಿಬಿಡಿಟಿ ಕಾಲಕಾಲಕ್ಕೆ ಬಿಡುಗಡೆ ಮಾಡುವ ನೀತಿ ನಿರೂಪಣೆಗಳು ಮತ್ತು ತಾಂತ್ರಿಕ ಸುತ್ತೋಲೆಗಳ ಆಗರವಾಗಿರಲಿದೆ ಈ ವೆಬ್ ಪೋರ್ಟಲ್. ಅಲ್ಲದೇ ಇದರಲ್ಲಿ ಸಂಬಂಧಿತ ಸುತ್ತೋಲೆ, ಮಾರ್ಗಸೂಚಿಗಳಿಗೆ ಕೊಂಡಿ / ಲಿಂಕ್ ಕೂಡ ಇರಲಿದೆ.ಅಲ್ಲದೇ ಇದು ದೇಶೀಯ ಹಣಕಾಸು ಸಂಸ್ಥೆಗಳಿಗೂ ಉಪಯುಕ್ತವಾಗಿರಲಿದೆ, ವಿದೇಶಿ ತೆರಿಗೆ ಪ್ರಾಧಿಕಾರಗಳಿಗೆ ಭಾರತೀಯ ನ್ಯಾಯ, ನಿಯಮಗಳು ಮತ್ತು ಇತರ ಮಾಹಿತಿ ಸಿಗಲಿದೆ.2017 ರಿಂದ ಸಿ ಆರ್ ಎಸ್ ಅಡಿ ಸ್ವಯಂಚಾಲಿತ ಮಾಹಿತಿ ಹಂಚಿಕೆಗೆ ಭಾರತ ಬದ್ಧವಾಗಿದೆ. ಭಾರತದ ಮಾನದಂಡಗಳಿಗೆ ಆಧಾರವಾಗಿ ಹಣಕಾಸು ಸಂಸ್ಥೆಗಳು ವಾರ್ಷಿಕವಾಗಿ ಸಲ್ಲಿಸುವ ವರದಿಯನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗನುಗುಣವಾಗಿ ಹಂಚಿಕೊಳ್ಳಬಹುದಾಗಿದೆ.ಭಾರತೀಯ ಆದಾಯ ತೆರಿಗೆ ನಿಯಮಾವಳಿಗಳಡಿ ಅನುಸರಿಸಬೇಕಾದ ನಿಯಮಗಳ ಕುರಿತು 2015 ರ ಆಗಸ್ಟ್ 31 ರಂದು ಸಮಗ್ರ ಮಾರ್ಗದರ್ಶಿ ಹೊತ್ತಿಗೆಯನ್ನು ಬಿಡುಗಡೆ ಮಾಡಲಾಗಿತ್ತು.ಯುಎನ್ಐ ಜಿಎಸ್ಆರ್ 1955