Wednesday, Dec 2 2020 | Time 08:37 Hrs(IST)
business economy Share

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ
ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ

ನವದೆಹಲಿ, ಅ 24 (ಯುಎನ್‍ಐ)- ಪ್ರಸಕ್ತ ಸಾಲಿನ (2019-20) ಆದಾಯ ತೆರಿಗೆ ವಿವರ ಸಲ್ಲಿಕೆ(ಐಟಿಆರ್) ಗೆ ತೆರಿಗೆ ಪಾವತಿದಾರರಿಗೆ ಈ ವರ್ಷದ ಡಿಸೆಂಬರ್ 31ರವರೆಗೆ ಗಡುವು ವಿಸ್ತರಿಸಲಾಗಿದೆ.

ಪ್ರಸ್ತಕ್ತ ಸಾಲಿನಲ್ಲಿ ಗಡುವು ವಿಸ್ತರಿಸುತ್ತಿರುವುದು ಇದು ಎರಡನೇ ಸಲವಾಗಿದೆ. ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಐಟಿಆರ್ ಸಲ್ಲಿಸಲು ಹೆಚ್ಚಿನ ಗಡುವು ನೀಡಲು ನಿರ್ಧರಿಸಲಾಗಿದೆ ಎಂದು ಶನಿವಾರ ಬಿಡುಗಡೆ ಮಾಡಿದ ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಸಲ್ಲಿಕೆ ನೀಡುವ ದಿನಾಂಕವನ್ನು ಈ ವರ್ಷದ ಡಿಸೆಂಬರ್ 31 ಕ್ಕೆ ವಿಸ್ತರಿಸಲಾಗಿದೆ. ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆಗೆ ಒಳಪಡಬೇಕಾದ ತೆರಿಗೆದಾರರಿಗೆ (ಅವರ ಪಾಲುದಾರರನ್ನು ಒಳಗೊಂಡಂತೆ) ಆದಾಯ ತೆರಿಗೆ ಸಲ್ಲಿಕೆ ನೀಡುವ ದಿನಾಂಕವನ್ನು ಸಹ ಡಿ 31ರವರೆಗೆ ವಿಸ್ತರಿಸಲಾಗಿದೆ.ಅಂತಾರಾಷ್ಟ್ರೀಯ/ ನಿಗದಿತ ದೇಶೀಯ ವಹಿವಾಟುಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಬೇಕಾದ ತೆರಿಗೆದಾರರಿಗೆ ಆದಾಯ ತೆರಿಗೆ ಸಲ್ಲಿಕೆ ವಿವರ ನೀಡಲು ಅಂತಿಮ ದಿನಾಂಕವನ್ನು 2021ರ ಜನವರಿ 31 ಕ್ಕೆ ವಿಸ್ತರಿಸಲಾಗಿದೆ.

ಇದಲ್ಲದೆ, ಸ್ವಯಂ-ಮೌಲ್ಯಮಾಪನ ತೆರಿಗೆಯನ್ನು ಪಾವತಿಸುವ ವಿಷಯದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆದಾರರಿಗೆ ಪರಿಹಾರವನ್ನು ಒದಗಿಸಲಾಗುತ್ತಿದೆ. ಸ್ವಯಂ-ಮೌಲ್ಯಮಾಪನ ತೆರಿಗೆ ದಿನಾಂಕವನ್ನು ಪಾವತಿಸಲು ನಿಗದಿತ ದಿನಾಂಕವನ್ನು ಈ ಮೂಲಕ ಮತ್ತೆ ವಿಸ್ತರಿಸಲಾಗುತ್ತಿದೆ.

ಅದರಂತೆ, ಒಂದು ಲಕ್ಷ ರೂ.ಗಳವರೆಗೆ ಸ್ವಯಂಮೌಲ್ಯಮಾಪನ ತೆರಿಗೆ ಹೊಣೆಗಾರಿಕೆಯನ್ನು ಹೊಂದಿರುವ ತೆರಿಗೆದಾರರಿಗೆ ತೆರಿಗೆ ಪಾವತಿಸುವ ದಿನಾಂಕವನ್ನು 2021ರ ಜನವರಿ 31 ಕ್ಕೆ ವಿಸ್ತರಿಸಲಾಗಿದೆ.

ಯುಎನ್‍ಐ ಎಸ್ಎಲ್ಎಸ್ 1715

More News
27 ದಿನಗಳ ಗೇಮಿಂಗ್ ಟೂರ್ನಮೆಂಟ್‌ ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

27 ದಿನಗಳ ಗೇಮಿಂಗ್ ಟೂರ್ನಮೆಂಟ್‌ ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

01 Dec 2020 | 4:31 PM

ಮುಂಬೈ, ಡಿ.1 (ಯುಎನ್ಐ) ಜಿಯೋ ಗೇಮ್ಸ್ 27 ದಿನಗಳ ಕ್ಲಾಷ್ ರಾಯಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ವಿಜೇತರಿಗೆ ‘ಇಂಡಿಯಾ ಕಾ ಗೇಮಿಂಗ್ ಚಾಂಪಿಯನ್’ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

 Sharesee more..

ಸೆಕೆಂಡ್‌ ಹ್ಯಾಂಡ್‌ ಕಾರುಗಳ ದಾಖಲೆ ಮಾರಾಟ

01 Dec 2020 | 11:23 AM

 Sharesee more..