Friday, Feb 28 2020 | Time 11:55 Hrs(IST)
 • ಸೆನ್ಸೆಕ್ಸ್ 1,101 ಅಂಕ ಪತನ: 11,300 ರ ಮಟ್ಟಕ್ಕಿಂತ ಕೆಳಗಿಳಿದ ನಿಫ್ಟಿ
 • ಟಿ20 ವಿಶ್ವಕಪ್: ಭಾರತ ದಾಖಲೆ ಮುರಿದ ಆಫ್ರಿಕಾ ವನಿತೆಯರು
 • ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ, ಬೆಚ್ಚಿಬೀಳಿಸಿದ ಮರಣೋತ್ತರ ಪರೀಕ್ಷಾ ವರದಿ
 • ಮಾರ್ಚ್ 31 ಕ್ಕೆ ತಜಕೀಸ್ತಾನ್-ಭಾರತ ನಡುವೆ ಫುಟ್ಬಾಲ್ ಸೌಹಾರ್ಧಯುತ ಪಂದ್ಯ
 • ಟೆಸ್ಟ್‌, ಟಿ20 ಕ್ರಿಕೆಟ್‌ ನಮಗೆ ನಂ 1 ಆದ್ಯತೆ: ರವಿ ಶಾಸ್ತ್ರಿ
 • ವರದಕ್ಷಿಣೆ ಗಾಗಿ ಪತ್ನಿಗೆ ಬೆಂಕಿ ಹಚ್ಚಿದ ಪತಿ
 • ಪುಡಿ ರೌಡಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
 • ರೈಲಿಗೆ ತಲೆಕೊಟ್ಟು ಪ್ರಿಯಕರ ಆತ್ಮಹತ್ಯೆ
 • ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಸುಧಾರಣೆಯಾಗಬೇಕು: ರವಿಶಾಸ್ತ್ರಿ
 • ಪ್ರಕಾಶ್ ರಾಜ್ ಗೆ ಮದ್ರಾಸ್ ಹೈಕೋರ್ಟ್ ನಿಂದ ನೋಟೀಸ್ ಜಾರಿ
 • ಜಪಾನ್, ದಕ್ಷಿಣ ಕೋರಿಯಾ ಆಗಮನ ವೀಸಾ ಸೌಲಭ್ಯ ತಾತ್ಕಾಲಿಕ ರದ್ದು; ಭಾರತ ನಿರ್ಧಾರ
 • ಕೇರಳದ ಇಡುಕ್ಕಿಯಲ್ಲಿ ಲಘು ಭೂಕಂಪ
 • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
 • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
 • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
Karnataka Share

ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ

ಬೆಂಗಳೂರು, ಜ 21 (ಯುಎನ್ಐ) ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಪರಸ್ಪರ ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಂಡಿರುವ ಶಾಸಕರಾದ ಆನಂದ್ ಸಿಂಗ್ ಮತ್ತು ಜೆ.ಎನ್. ಗಣೇಶ್ ಖುದ್ದು ಹಾಜರಾಗಿ ಹೇಳಿಕೆ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣ ರದ್ದು ಕೋರಿ ಗಣೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಏಸಕದಸ್ಯ ಪೀಠ ಈ ಆದೇಶ ನೀಡಿದೆ.
ಮಂಗಳವಾರ ಅರ್ಜಿ ವಿಚಾರಣೆಗೆ ಬಂದಾಗ, ಆನಂದ್ ಸಿಂಗ್ ಪರ ವಕೀಲರು, ಸಿಂಗ್ ಪರವಾಗಿ ಪ್ರಮಾಣಪತ್ರ ಸಲ್ಲಿಸಿದರು.ಅಲ್ಲದೆ, ಮಾತುಕತೆ ಮೂಲಕ ಜಗಳ ಪರಿಹರಿಸಿಕೊಳ್ಳಲಾಗುವುದು,ತಾವು ದೂರು ಮುಂದುವರಿಸಲು ಬಯಸುವುದಿಲ್ಲ ಎಂದರು.
ಆಗ ನ್ಯಾಯಪೀಠ, ದೂರುದಾರರು ಹಾಗೂ ಪ್ರತಿವಾದಿ ಇಬ್ಬರೂ ಹಾಜರಿದ್ದಾರೆಯೇ ಎಂದು ಕೇಳಿತು. ಗಣೇಶ್ ಪರ ವಕೀಲರು, ಇಲ್ಲ, ಆದರೆ ದೂರುದಾರರೇ ಪ್ರಮಾನಪತ್ರ ಸಲ್ಲಿಸಿದ್ದಾರೆ ಎಂದರು. ಆದನ್ನು ಒಪ್ಪದ ನ್ಯಾಯಪೀಠ, ಇಬ್ಬರೂ ಖುದ್ದು ಹಾಜರಾಗಲೇಬೇಕು, ಪ್ರಮಾಣತ್ರಕ್ಕೆ ಅವರೇ ಸಹಿ ಹಾಕಿದ್ದಾರೆನ್ನುವುದಕ್ಕೆ ಖಾತ್ರಿ ಏನು ಎಂದು ಕೇಳಿದರು.
ಈ ಕಾಲದಲ್ಲಿ ಏನು ಬೇಕಾದರೂ ಆಗಬಹುದು? ಯಾವುದನ್ನೂ ನಂಬಲು ಸಾಧ್ಯವಿಲ್ಲ , ಹಾಗಾಗಿ ಸೋಮವಾರವೇ ನಾನು ಇಬ್ಬರನ್ನೂ ಖುದ್ದು ಹಾಜರುಪಡಿಸಲೇಬೇಕು ಎಂದು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ತಾವು ಯಾರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿಲ್ಲ. ಗಲಾಟೆ ನಡೆದ ಸಂದರ್ಭದಲ್ಲಿ ಆತ್ಮರಕ್ಷಣೆಗಷ್ಟೇ ಯತ್ನಿಸಿದ್ದೇನೆ. ಆದ್ದರಿಂದ, ಬಿಡದಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಗಣೇಶ್ ಅರ್ಜಿಯಲ್ಲಿ ಕೋರಿದ್ದರು.
ಯುಎನ್ಐ ಎಸ್ಎಚ್ 1909