Saturday, Nov 23 2019 | Time 04:32 Hrs(IST)
  • ಜಾರ್ಖಂಡ್: ಲತೇಹಾರ್‌ನಲ್ಲಿ ನಕ್ಸಲರೊಂದಿಗೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್‌ ಹುತಾತ್ಮ
  • ಆಸ್ಟ್ರೇಲಿಯಾದ ಇಬ್ಬರು ಸಚಿವರೊಂದಿಗೆ ಪೋಖ್ರಿಯಾಲ್‍ ದ್ವಿಪಕ್ಷೀಯ ಮಾತುಕತೆ
Entertainment Share

ಆಯುಷ್ಮಾನ್‌ಭವ ಆಡಿಯೊ ಲಾಂಚ್ : ಶತಕ ಬಾರಿಸಿದ ಗುರುಕಿರಣ್

ಬೆಂಗಳೂರು, ಅ ೨೧ (ಯುಎನ್‌ಐ) ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಸೇರಿದಂತೆ ದೊಡ್ಡ ತಾರಾಗಣದ ಆಯುಷ್ಮಾನ್‌ಭವ ಚಿತ್ರದ ಆಡಿಯೊ ಲಾಂಚ್ ಆಗಿದೆ ಇದು ಖ್ಯಾತ ಸಂಗೀತ ಸಂಯೋಜಕ ಗುರುಕಿರಣ್ ರಾಗ ಸಂಯೋಜನೆಯ ೧೦೦ನೇ ಚಿತ್ರ ಎಂಬುದು ವಿಶೇಷ ಅಲ್ಲದೆ ಈ ಚಿತ್ರ ನಿರ್ಮಿಸಿರುವ ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆ ೫೦ ವರ್ಷ ಪೂರೈಸಿದ ಸಂಭ್ರಮದಲ್ಲಿದೆ ಎಂಬುದು ಮತ್ತೊಂದು ವಿಶೇಷ
ಆಯುಷ್ಮಾನ್‌ಭವ ಚಿತ್ರ ಧ್ವನಿಸುರುಳಿ ಸಮಾರಂಭಕ್ಕೆ ಆಗಮಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್, ನಟ ಉಪೇಂದ್ರ ಚಿತ್ರತಂಡಕ್ಕೆ ಹಾಗೂ ಗುರುಕಿರಣ್ ಅವರಿಗೆ ಶುಭ ಕೋರಿ ಅಭಿನಂದನೆ ಸಲ್ಲಿಸಿದರು
ಮನೋಹರ್ ಮಾತನಾಡಿ, ಗುರುಕಿರಣ್ ಅವರಿಗೆ ತಮ್ಮ ಶಕ್ತಿಯ ಅರಿವಿರಲಿಲ್ಲ. ೧೯೮೬ರಲ್ಲಿ ಒಂದು ಆಲ್ಬಮ್ ಮಾಡಿದ್ದ ಅವರಿಗೆ ’ಎ’ ಚಿತ್ರದಲ್ಲಿ ಅವಕಾಶ ಪಡೆದ ನಂತರ ಹಿಂತಿರುಗಿ ನೋಡಿಲ್ಲ. ಅವರು ಸಾವಿರ ಚಿತ್ರಗಳ ಸರದಾರನಾಗಲಿ ಎಂದರು
ರಿಯಲ್ ಸ್ಟಾರ್ ಉಪೇಂದ್ರ, ಶಿವರಾಜ್ ಕುಮಾರ್ ಒಂಥರಾ ಲಕ್ಕಿ. ಅವರ ಜತೆ ಸಿನಿಮಾ ಮಾಡಿದ ಎಲ್ಲರಿಗೂ ಲಕ್ ಸಿಕ್ಕಿದೆ ಪಿ. ವಾಸು ನಿರ್ದೇಶನದ ಆಯುಷ್ಮಾನ್‌ಭವ ಚಿತ್ರ ಯಶಸ್ವಿಯಾಗಲಿ ಎಂದರು.
ಪಿ. ವಾಸು ನಿರ್ದೇಶನದ ಆಯುಷ್ಮಾನ್ ಭವ ಚಿತ್ರದ ತಾರಾಗಣದಲ್ಲಿ ಶಿವರಾಜ್ ಕುಮಾರ್, ರಚಿತಾರಾಮ್, ಅನಂತನಾಗ್, ನಿಧಿ ಸುಬ್ಬಯ್ಯ, ಸಾಧು ಕೋಕಿಲ ಮೊದಲಾದವರಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೦೨೪