SportsPosted at: Dec 1 2020 9:27PM Shareಆರಂಭಿಕನಾಗಿ ಕಣಕ್ಕೆ ಇಳಿಯುವ ಅವಕಾಶ ಸಿಕ್ಕರೆ ಆನಂದಿಸುವೆ: ಲಾಬುಷೇನ್ಸಿಡ್ನಿ, ಡಿ.1 (ಯುಎನ್ಐ)- ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಅವಕಾಶ ಸಿಕ್ಕರೆ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆರಂಭಿಸುವ ಆದ್ಯತೆ ನೀಡುವುದಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಮಾರ್ನಸ್ ಲಾಬುಷೇನ್ ಹೇಳಿದ್ದಾರೆ. ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಸಮಯದಲ್ಲಿ ವಾರ್ನರ್ ಗಾಯಗೊಂಡರು. ನಂತರ ಅವರು ಸೀಮಿತ ಓವರ್ಗಳ ಸರಣಿಯಿಂದ ಹೊರಗುಳಿದಿದ್ದರು. ಉಭಯ ತಂಡಗಳ ನಡುವಿನ ಸರಣಿಯ ಕೊನೆಯ ಏಕದಿನ ಪಂದ್ಯ ಬುಧವಾರ ನಡೆಯಲಿದೆ. ಅವರ ಅನುಪಸ್ಥಿತಿಯಲ್ಲಿ ಆರಂಭಿಸುವ ಅವಕಾಶ ಲಭಿಸಿದರೆ ಅದನ್ನು ಆನಂದಿಸುವುದಾಗಿ ಲಾಬುಷೇನ್ ಹೇಳಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಲಾಬುಶೆನ್ ನಾಲ್ಕನೇ ಸ್ಥಾನದಲ್ಲಿ 70 ರನ್ ಗಳಿಸಿದ್ದರು. “ನನಗೆ ಆ ಸ್ಥಳದಲ್ಲಿ ಬ್ಯಾಟಿಂಗ್ ಮಾಡಲು ಕೇಳಿದರೆ ಅದನ್ನು ನಾನು ಆನಂದಿಸುವ ಅವಕಾಶವಾಗಿರುತ್ತದೆ" ಎಂದು ಲಾಬುಷೇನ್ ಹೇಳಿದರು. ಮುಂದಿನ ಪಂದ್ಯಕ್ಕೆ ತಂಡದ ಸಂಯೋಜನೆ ಹೇಗೆ ಇರಲಿದೆ ಮತ್ತು ತಂಡದ ಸಮತೋಲನ ಹೇಗೆ ಎಂದು ನಾವು ನೋಡಬೇಕಾಗಿದೆ ಆದರೆ ಓಪನಿಂಗ್ ಖುಷಿಯಿಂದ ಒಪ್ಪಿಕೊಳ್ಳುತ್ತೇನೆ” ಎಂದಿದ್ದಾರೆ. "ನಮ್ಮಲ್ಲಿ ಸ್ಟೀವನ್ ಸ್ಮಿತ್ ಇದ್ದರು ಮತ್ತು ನಾನು ಕ್ರೀಸ್ನಲ್ಲಿ ಇದ್ದಾಗ ಅವರೊಂದಿಗೆ ಜೊತೆಯಾಟವನ್ನು ಬೆಳೆಸುವುದು ನನ್ನ ಗುರಿಯಾಗಿತ್ತು. ಲಯ ಬದ್ಧ ಬ್ಯಾಟಿಂಗ್ ಮಾಡಿದ್ದು ಸಂತಸ ತಂದಿದೆ. ಸ್ಮಿತ್ ಔಟ್ ಆದ ನಂತರ ನಾನು ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಜವಾಬ್ದಾರಿಯನ್ನು ವಹಿಸಿಕೊಂಡೆವು” ಎಂದು ತಿಳಿಸಿದ್ದಾರೆ. "ಆದರೆ ಈ ಸಮಯದಲ್ಲಿ ಟೆಸ್ಟ್ ಸರಣಿಯ ಮೊದಲು ಅನೇಕ ಪಂದ್ಯಗಳಿವೆ. ನಾವು ನಿರೀಕ್ಷಿಸಿದಂತೆ ಏಕದಿನ ಸರಣಿಯನ್ನು ಮುಗಿಸಬೇಕು ಮತ್ತು ನಂತರ ಟಿ 20 ಯನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಬೇಕು” ಎಂದು ಲ್ಯಾಬುಶೇನ್ ಹೇಳಿದ್ದಾರೆ. ಯುಎನ್ಐ ವಿಎನ್ಎಲ್ 2026