Wednesday, Jul 15 2020 | Time 03:26 Hrs(IST)
National Share

ಆಸ್ಟ್ರೇಲಿಯಾದ ಇಬ್ಬರು ಸಚಿವರೊಂದಿಗೆ ಪೋಖ್ರಿಯಾಲ್‍ ದ್ವಿಪಕ್ಷೀಯ ಮಾತುಕತೆ

ನವದೆಹಲಿ, ನ 22 (ಯುಎನ್‌ಐ) ಶಿಕ್ಷಣ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಭವಿಷ್ಯದ ದ್ವಿಪಕ್ಷೀಯ ಸಹಕಾರದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಡಾನ್ ತೆಹನ್ ಅವರೊಂದಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೋಖ್ರಿಯಲ್ ‘ನಿಶಾಂಕ್’ ಅವರು ಶುಕ್ರವಾರ ಇಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಉನ್ನತ ಶಿಕ್ಷಣದಲ್ಲಿ ಮೌಲ್ಯವರ್ಧಿತ ಸಹಕಾರದೊಂದಿಗೆ ಎರಡೂ ದೇಶಗಳು ತಮ್ಮ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುತ್ತವೆ ಎಂದು ಪೋಖ್ರಿಯಾಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಕರಣದ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅನೇಕ ಯೋಜನೆಗಳನ್ನು ಆರಂಭಿಸಿದೆ. ಈ ಮೂಲಕ ಸಂಶೋಧನೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜಂಟಿ ಸಂಶೋಧನಾ ಕಾರ್ಯಕ್ರಮಗಳ ಮೂಲಕ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಸುಧಾರಿಸಲು ಕಳೆದ ವರ್ಷ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಶೈಕ್ಷಣಿಕ ಸಂಶೋಧನೆ ಮತ್ತು ಸಹಯೋಗವನ್ನು ಉತ್ತೇಜಿಸುವ ಯೋಜನೆಯನ್ನುಆರಂಭಿಸಿದೆ. ಈ ಯೋಜನೆ ಆರಂಭಿಸಿದ ಒಂದು ವರ್ಷದೊಳಗೆ 54 ಜಂಟಿ ಯೋಜನೆಗಳು ಆಸ್ಟ್ರೇಲಿಯಾ ಮತ್ತು ಭಾರತೀಯ ಸಂಸ್ಥೆಗಳಿಂದ ಆರಂಭಿಸಲ್ಪಟ್ಟಿವೆ ಎಂದು ಅವರು ಹೇಳಿದ್ದಾರೆ.
ಯುಎನ್‍ಐ ಎಸ್ಎಲ್‍ಎಸ್ 0001
More News
ಕರೋನ ನಿಯಂತ್ರಣ: ಸರ್ಕಾರ  ಹೇಳುತ್ತಿರುವುದೇನು? ಮಾಡುತ್ತಿರುವುದೇನು?

ಕರೋನ ನಿಯಂತ್ರಣ: ಸರ್ಕಾರ ಹೇಳುತ್ತಿರುವುದೇನು? ಮಾಡುತ್ತಿರುವುದೇನು?

14 Jul 2020 | 8:55 PM

ನವದೆಹಲಿ,ಜುಲೈ 14 (ಯುಎನ್ಐ) ಸರಕಾರ ಕರೋನ ನಿಯಂತ್ರಣ ವಿಚಾರದಲ್ಲಿ ಹೇಳುತ್ತಿರುವುದೇನು? ಮಾಡುತ್ತಿರುವುದೇನು? ಸ್ಯಾನಿಟೈಜರ್ ಗಳಿಗೆ ಶೇಕಡ 18 ರಷ್ಟು ತೆರಿಗೆ ಹಾಕಲು ಹೊರಟಿರುವುದು ಯಾವ ನ್ಯಾಯ ? ನಿಜಕ್ಕೂ ಈಗಿನ ಸನ್ನಿವೇಶದಲ್ಲಿ ಈ ತೀರ್ಮಾನ ಸೂಕ್ತವೇ? ಸಮಜಂಸವೆ??.

 Sharesee more..