Monday, Jan 20 2020 | Time 23:41 Hrs(IST)
 • ಚಲೋ ಅಸೆಂಬ್ಲಿ ಪ್ರತಿಭಟನೆ: ಪೂರ್ವ ಗೋದಾವರಿಯಲ್ಲಿ 64 ಟಿಡಿಪಿ ನಾಯಕರ ಗೃಹಬಂಧನ
 • ವಿಪಕ್ಷಗಳ ನಡೆ ಕುರಿತು ಮೋದಿ ವಾಗ್ದಾಳಿ
 • ರಣಜಿ ಟ್ರೋಫಿ : ವೇಗಿ ಇಶಾಂತ್‌ ಶರ್ಮಾಗೆ ಗಾಯ
 • ಸಿಎಎ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ: ಸರ್ಕಾರದ ವಿವರಣೆ ತಿರಸ್ಕರಿಸಿದ ರಾಜ್ಯಪಾಲ
 • ರಣಜಿ ಟ್ರೋಫಿ: ಮನೋಜ್ ತಿವಾರಿ ಚೊಚ್ಚಲ ತ್ರಿಶತಕ
 • ಸೇನಾ ನೆಲೆಗಳ ಮೇಲೆ ಉಗ್ರರ ಗ್ರೆನೇಡ್ ದಾಳಿ
 • ಸಜೀವ ಬಾಂಬ್ ಪ್ರಕರಣ ಶೀಘ್ರ ತನಿಖೆಯಾಗಲಿ, ಇಲ್ಲದಿದ್ದರೆ ಕತೆ ಕಟ್ಟುವ ಸಾಧ್ಯತೆ; ಎಚ್‌ ಡಿ ಕುಮಾರಸ್ವಾಮಿ
 • ಜಮ್ಮು ಕಾಶ್ಮೀರ ಸಮಗ್ರ ಅಭಿವೃದ್ಧಿಗೆ ಕೇಂದ್ರ ಬದ್ಧ : ಸಾರಂಗಿ
 • ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ, ಸತ್ಯಾಸತ್ಯತೆ ಬಯಲಿಗೆಳೆಯಲು ಎಸ್ ಡಿ ಪಿ ಐ ಆಗ್ರಹ
 • ಸಾಯಿ ಬಾಬಾ ಜನ್ಮಸ್ಥಳದ ಕುರಿತ ವಿವಾದಿತ ಹೇಳಿಕೆ ಹಿಂಪಡೆದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
 • ರೋಡ್ ಷೋ ವಿಳಂಬ, ನಾಮಪತ್ರ ಸಲ್ಲಿಸಲು ವಿಫಲರಾದ ಕೇಜ್ರಿವಾಲ್
 • ಕೆಪಿಸಿಸಿ ನಾಯಕತ್ವ: ಸಿದ್ದರಾಮಯ್ಯ ವಿರುದ್ಧವೇ ಸ್ವಪಕ್ಷ ಕಾರ್ಯಕರ್ತರ ಪ್ರತಿಭಟನೆ
 • ದೇಶದಲ್ಲಿ 3 ಕೋಟಿ ನಕಲಿ ಪಡಿತರ ಚೀಟಿ ಪತ್ತೆ : ಪಾಸ್ವಾನ್
 • ನಿರ್ಭಯ ಪ್ರಕರಣ: ಅಪ್ರಾಪ್ತ ಮನವಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್
 • ಜೆ ಪಿ ನಡ್ಡಾಗೆ ಮಧ್ಯ ಪ್ರದೇಶ ಸಿಎಂ ಕಮಲನಾಥ್ ಅಭಿನಂಧನೆ !
Sports Share

ಆಸ್ಟ್ರೇಲಿಯಾ ವಿರುದ್ಧ ಸಾವಿರ ರನ್ ಪೂರೈಸಿದ ಶಿಖರ ಧವನ್

ಆಸ್ಟ್ರೇಲಿಯಾ ವಿರುದ್ಧ ಸಾವಿರ ರನ್ ಪೂರೈಸಿದ ಶಿಖರ ಧವನ್
ಆಸ್ಟ್ರೇಲಿಯಾ ವಿರುದ್ಧ ಸಾವಿರ ರನ್ ಪೂರೈಸಿದ ಶಿಖರ ಧವನ್

ಮುಂಬೈ, ಜ 13 (ಯುಎನ್ಐ) ಭಾರತ ತಂಡದ ಆರಂಭಿಕ ಬ್ಯಾಟ್ಸ್‌ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ಸಾವಿರ ರನ್‌ಗಳ ಸಾಧನೆ ಮಾಡಿದ್ದಾರೆ. ಮಂಗಳವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಏಕದಿನ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌‌ಮನ್ ಈ ಸಾಧನೆಗೆ ಭಾಜನರಾದರು.

ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕನಾಗಿ ಕಣಕ್ಕೆೆ ಇಳಿದ ಶಿಖರ್ ಧವನ್ 91 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳೊಂದಿಗೆ 74 ರನ ಗಳಿಸಿದರು. ನಂತರ, ಪ್ಯಾಟ್ ಕಮಿನ್ಸ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಈ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಕ್ಲಬ್‌ಗೆ ಇದೀಗ ಧವನ್ ಸೇರ್ಪಡೆಯಾದರು.

ದೆಹಲಿಯ ಆಟಗಾರ ಆಸ್ಟ್ರೇಲಿಯಾ ವಿರುದ್ಧ 25 ಇನಿಂಗ್‌ಸ್‌‌ಗಳಲ್ಲಿ 43.86ರ ಸರಾಸರಿಯಲ್ಲಿ ಸಹಸ್ರ ರನ್ ಸಾಧನೆ ಮಾಡಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ ಐದು ಅರ್ಧಶತಕಗಳು ಒಳಗೊಂಡಿವೆ. ಜತೆಗೆ, ಏಕದಿನ ಕ್ರಿಕೆಟ್ ನಲ್ಲಿ ಇವರ 28ನೇ ಅರ್ಧಶತಕ ಇದಾಯಿತು.

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯು ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ ಒಟ್ಟು 3077 ರನ್ ಪೇರಿಸಿದ್ದಾರೆ. ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹಂಚಿದ್ದಾರೆ. ಇವರಿಬ್ಬರು ಅನುಕ್ರಮವಾಗಿ 2047 ಹಾಗೂ 1727 ರನ್ ಪೇರಿಸಿದ್ದಾರೆ. ಇನ್ನು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 1660 ರನ್ ಪೇರಿಸಿ ಪಟ್ಟಿಯಲ್ಲಿ ನಾಲ್ಕನೇ ಸ್ಧಾನದಲ್ಲಿದ್ದಾರೆ.

ಯುಎನ್‌ಐ ಆರ್ ಆರ್‌ಕೆ 1613