Monday, Nov 30 2020 | Time 10:36 Hrs(IST)
  • ವಾಯುಭಾರ ಕುಸಿತ: ಇನ್ನೂ ಕೆಲ ದಿನ ಕಾಡಲಿದೆ ಮಳೆ ಕಾಟ !!
  • ವಾರಾಣಸಿಗೆ ಇಂದು ಪ್ರಧಾನಿ ಭೇಟಿ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ
  • ನೈಜೀರಿಯಾದಲ್ಲಿ ನರಮೇಧ: ಕನಿಷ್ಠ 110 ನಾಗರಿಕರು ಬಲಿ
  • ಎಫ್ ಬಿ ಐ ವಿರುದ್ದ ಡೊನಾಲ್ಡ್ ಟ್ರಂಪ್ ಆಕ್ರೋಶ
  • ನಾಯಿಯೊಂದಿಗೆ ಆಟ- ಬೈಡೆನ್ ಕಾಲಿನ ಮೂಳೆ ಮುರಿತ !!
  • ಸಾಕು ನಾಯಿ ಜೊತೆ ಆಟವಾಡುವಾಗ ಜಾರಿ ಬಿದ್ದು ಗಾಯಗೊಂಡ ಜೋ ಬೈಡನ್
  • ಶಿವಸೇನೆಗೆ ಉರ್ಮಿಳಾ ಮಾತೋಂಡ್ಕರ್ ?
  • ನ್ಯೂಯಾರ್ಕ್ ನಲ್ಲಿ ಡಿಸೆಂಬರ್ 7ರಿಂದ ಶಾಲೆಗಳು ಪುನರಾರಂಭ
  • ಇಂದು ವಾರಣಾಸಿಗೆ ಪ್ರಧಾನಿ ಮೋದಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ
National Share

ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಚೇತರಿಕೆ, ಅತಿ ಕಡಿಮೆ ಸಾವು : ರಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನದಲ್ಲಿ

ನವದೆಹಲಿ, ಸೆ 3 [ಯುಎನ್ಐ] ಕೊರೋನಾ ಸೋಂಕು ಚೇತರಿಕೆ ಮತ್ತು ಕಡಿಮೆ ಮರಣ ಪ್ರಮಾಣದ ರಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ.

ಅತ್ಯಂತ ಕಡಿಮೆ ಮರಣ ಪ್ರಮಾಣದ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಕೊಟ್ಟಿದೆ.

ಒಟ್ಟಾರೆ ಜಾಗತಿಕ ಸೋಂಕಿನ ಪ್ರಮಾಣದಲ್ಲಿ ದೇಶದ ಕೊಡುಗೆ ಶೇ 18.6ರಷ್ಟಿದ್ದು, ಚೇತರಿಕೆ ದರ ಶೇ 21ರಷ್ಟಿದೆ. ಅಮೆರಿಕದಲ್ಲಿ ಶೇಕಡ 21.7 ರಷ್ಟು ಸೋಂಕಿತರಿದ್ದು, ಚೇತರಿಕೆ ಪ್ರಮಾಣ 18.4ರಷ್ಟಿದೆ. ಶೇಕಡ 14ರಷ್ಟು ಸೋಂಕಿತರನ್ನು ಹೊಂದಿರುವ ಬ್ರೆಜಿಲ್ ನಲ್ಲಿ ಶೇಕಡ 13.3 ರಷ್ಟು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಜಾಗತಿಕವಾಗಿ ಶೇಕಡ 2.97ರಷ್ಟು ಮಂದಿ ಸಾವಿಗೀಡಾಗುತ್ತಿದ್ದು, ದೇಶದಲ್ಲಿ ಶೇಕಡ 1.56ರಷ್ಟು ಮರಣ ಪ್ರಮಾಣವಿದೆ. ಇಂಗ್ಲೆಂಡ್ ನಲ್ಲಿ ಅತಿ ಹೆಚ್ಚು ಅಂದರೆ ಶೇಕಡ 9.17ರಷ್ಟು ಮಂದಿ ಸಾವಿಗೀಡಾಗುತ್ತಿದ್ದಾರೆ. ಫ್ರಾನ್ಸ್ ನಲ್ಲಿ ಶೇಕಡ 5.7ರಷ್ಟು, ಸ್ಪೇನ್ ನಲ್ಲಿ 4.11ರಷ್ಟು, ಬ್ರೆಜಿಲ್ ನಲ್ಲಿ ಶೇಕಡ 2.99, ಅಮೆರಿಕಾದಲ್ಲಿ 2.87ರಷ್ಟು ಮಂದಿ ಮೃತಪಟ್ಟಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 79,476 ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ದೇಶದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 64,73,544 ಕ್ಕೆ ಏರಿಕೆಯಾಗಿದೆ. ಈವರೆಗೆ 54, 27,706 ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಸುಮಾರು 9 ಲಕ್ಷ 44 ಸಾವಿರದ 996 ಸಕ್ರಿಯ ಪ್ರಕರಣಗಳಿವೆ.

ಯುಎನ್ಐ ವಿಎನ್ 1535
More News
ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ಘರ್ಷಣೆ: 30 ತಾಲಿಬಾನ್ ಉಗ್ರರು ಹತ

ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ಘರ್ಷಣೆ: 30 ತಾಲಿಬಾನ್ ಉಗ್ರರು ಹತ

29 Nov 2020 | 8:35 PM

ಕಾಬೂಲ್, ನ 29 (ಯುಎನ್‍ಐ)- ಆಫ್ಥಾನಿಸ್ತಾನದ ಪೂರ್ವ ಪ್ರಾಂತ್ಯವಾದ ಲಾಗ್ಮಾನ್‌ನಲ್ಲಿ ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಆರು ಕಮಾಂಡರ್‌ಗಳು ಸೇರಿದಂತೆ 30 ತಾಲಿಬಾನ್ ಉಗ್ರರು ಹತರಾಗಿದ್ದು, ಇತರ 17 ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘಾನಿಸ್ತಾನ ಸೇನೆಯ ಪೂರ್ವ ವಿಭಾಗ ಭಾನುವಾರ ತಿಳಿಸಿದೆ.

 Sharesee more..