Monday, Mar 1 2021 | Time 04:01 Hrs(IST)
Karnataka Share

ಇಬ್ಬರು ಅಂತಾರಾಜ್ಯ ಕನ್ನಕಳವು ಆರೋಪಿಗಳ ಬಂಧನ; 75 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಜ.22 (ಯುಎನ್ಐ) ಸರಣಿ ಕನ್ನಕಳವು ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 75 ಲಕ್ಷ ರೂ.ಮೌಲ್ಯದ 1 ಕೆ.ಜಿ.500 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು 10 ಪ್ರಕರಣಗಳನ್ನು ಭೇದಿಸಿದ್ದಾರೆ.
ಫಯೂಮ್ ಅಲಿಯಾಸ್ ಎಟಿಎಂ ಫಯೂಮ್ (35), ಮುರಸಲೀಂ ಮುಹಮ್ಮದ್ ಅಲಿಯಾಸ್ ಸಲೀಂ (42) ಬಂಧಿತ ಆರೋಪಿಗಳು.
ಆರೋಪಿಗಳು ಉತ್ತರ ಪ್ರದೇಶ, ದೆಹಲಿ, ಹರಿಯಾಣ ರಾಜ್ಯಗಳಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮನೆ ಕನ್ನ ಕಳವು ಮಾಡಿ ಬೆಂಗಳೂರು ನಗರದ ನಾಗರಿಕರನ್ನು ಬೆಚ್ಚಿ ಬೀಳಿಸಿದ್ದರು.
ಆರೋಪಿಗಳಿಂದ ಮೊದಲು 4 ಕೆ.ಜಿ. ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದು, ನಂತರ ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದಾಗ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಆರೋಪಿಗಳ ಮಾಹಿತಿ ಮೇರೆಗೆ ಪುನಃ ತಂಡದೊಂದಿಗೆ ಉತ್ತರ ಪ್ರದೇಶದ ಚಂದೋಸಿ ಗ್ರಾಮದಲ್ಲಿ ಸತತ ಒಂದು ವಾರ ಪರಿಶ್ರಮ ಪಟ್ಟು 1 ಕೆ.ಜಿ. 500 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳೊಂದಿಗೆ ಉತ್ತರ ಪ್ರದೇಶ ರಾಜ್ಯದ ಚಂದೋಸಿ ಊರಿಗೆ ಹೋಗಿ ಸತತ 5 ದಿನಗಳವರೆಗೆ ತನಿಖೆ ಕೈಗೊಂಡು 1 ಕೆ.ಜಿ.500 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ಸುಮಾರು 75 ಲಕ್ಷ ರೂ.ಮೌಲ್ಯದ 1 ಕೆ.ಜಿ.500 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಬಂಧನದಿಂದ ನಗರದ ಸುಮಾರು 10 ಪ್ರಕರಣಗಳು ಬೆಳಕಿಗೆ ಬಂದಿವೆ.
ಆರೋಪಿಗಳ ಬಂಧನದಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 2, ಬೇಗೂರು ಪೊಲೀಸ್ ಠಾಣೆ, ಹೆಣ್ಣೂರು ಪೊಲೀಸ್ ಠಾಣೆ, ಆಡುಗೋಡಿ ಪೊಲೀಸ್ ಠಾಣೆ, ಕಾಟನ್ ಪೇಟೆ, ಸಿದ್ದಾಪುರ, ಜೆ.ಜೆ.ನಗರ, ರಾಜಾಜಿನಗರ, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ಸಿಸಿಬಿ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರು ರವಿಕುಮಾರ್, ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಬಿ ನಾಗರಾಜ್ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಯುಎನ್ಐ ಎಎಚ್ 1021