Tuesday, Jul 7 2020 | Time 05:34 Hrs(IST)
Karnataka Share

ಇಸ್ರೋ ನಿರ್ಮಿತ ‘ಜಿಸ್ಯಾಟ್-30’ ಉಪಗ್ರಹ 17 ರಂದು ಉಡಾವಣೆ

ಇಸ್ರೋ ನಿರ್ಮಿತ ‘ಜಿಸ್ಯಾಟ್-30’ ಉಪಗ್ರಹ    17 ರಂದು ಉಡಾವಣೆ
ಇಸ್ರೋ ನಿರ್ಮಿತ ‘ಜಿಸ್ಯಾಟ್-30’ ಉಪಗ್ರಹ 17 ರಂದು ಉಡಾವಣೆ

ಬೆಂಗಳೂರು, ಜನವರಿ 14 (ಯುಎನ್ಐ) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವದೇಶಿ ತಂತ್ರಜ್ಞಾನದ ಮೂಲಕ ನಿರ್ಮಿಸಿರುವ ‘ಜಿಸ್ಯಾಟ್-30’ ಉಪಗ್ರಹ ಇದೇ 17ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದ್ದು, ಸಿದ್ದತೆ ಭರದಿಂದ ಸಾಗಿದೆ.

ಅಂದು, ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 2.35ರ ಹೊತ್ತಿಗೆ ಎರೇನ್ ಲಾಂಚ್ ಕಾಂಪ್ಲೆಕ್ಸ್ ಉಡ್ಡಯನ ಕೇಂದ್ರದಿಂದ ‘ಎರೇನ್ 5’ ಎಂಬ ರಾಕೆಟ್ ವಾಹಕದ ಮೂಲಕ ಉಪಗ್ರಹ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಹೇಳಿದೆ.

3,357 ಕೆಜಿ ತೂಕದ ಈ ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್ಲಿಂಕಿಂಗ್, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ (ಡಿಎಸ್ಎನ್ಜಿ), ಸೆಲ್ಯೂರಲ್ ಬ್ಯಾಕ್ಹೌಲ್ ಕನೆಕ್ಟಿವಿಟಿ ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಸಿ-ಬ್ಯಾಂಡ್ ಮೂಲಕ ಮುಂದಿನ 15 ವರ್ಷಗಳವರೆಗೆ ಒದಗಿಸಲಿದೆ ಎಂದೂ ಇಸ್ರೋ ಮೂಲಗಳು ಹೇಳಿವೆ.

ಯುಎನ್ಐ ಕೆಎಸ್ಆರ್ 1038

More News

ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 1699ಕ್ಕೆ ಏರಿಕೆ

06 Jul 2020 | 9:42 PM

 Sharesee more..
200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಬೆಂಗಳೂರಿಗೆ ಕರೆ ತಂದ ಇನ್ಫೋಸಿಸ್

200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಬೆಂಗಳೂರಿಗೆ ಕರೆ ತಂದ ಇನ್ಫೋಸಿಸ್

06 Jul 2020 | 9:24 PM

ಬೆಂಗಳೂರು, ಜು 6 (ಯುಎನ್ಐ) ಕೊರೊನಾ ಭಯ, ಸಂಕಷ್ಟದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಅಮೆರಿಕದಿಂದ ತನ್ನ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮತ್ತು ಅವರ ಕುಟುಂಬದವರನ್ನು ವಿಶೇಷ ಬಾಡಿಗೆ ವಿಮಾನದಲ್ಲಿ ಭಾರತಕ್ಕೆ ವಾಪಸ್ ಕರೆ ತಂದಿದೆ.

 Sharesee more..