ಅಹಮದಾಬಾದ್, ಜ 20 (ಯುಎನ್ಐ) ವಿವಾದಾತ್ಮಕ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು ರಾಷ್ಟ್ರವ್ಯಾಪಿ ನಿಷೇಧಿಸುವ ಬೇಡಿಕೆಯನ್ನು ಪುನರುಚ್ಚರಿಸಿರುವ ಸೂಫಿ ಇಸ್ಲಾಮಿಕ್ ಮಂಡಳಿ ಬುಧವಾರ, ಭಯೋತ್ಪಾದಕ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮತ್ತು ಮುಸ್ಲಿಂ ಯುವಕರನ್ನು ತೀವ್ರಗಾಮಿಗೊಳಿಸುವ ಸಂಘಟನೆಯನ್ನು ಕೇಂದ್ರ ನಿಷೇಧಿಸದಿದ್ದರೆ, ಅದಕ್ಕಾಗಿ ಆನ್-ರೋಡ್ ಅಭಿಯಾನವನ್ನು ಪ್ರಾರಂಭಿಸಲು ಮಂಡಳಿ ಎಚ್ಚರಿಕೆ ನೀಡಿದೆ.
ಮಂಡಳಿಯ ಗುಜರಾತ್ ಘಟಕದ ಅಧ್ಯಕ್ಷ ಪಿರ್ ಸೂಫಿ ಸೈಯಾದ್ ಖಾಲಿದ್ ನಕ್ವಿ ಅಲ್ ಹುಸೇನಿ, ತಮ್ಮ ಸಂಸ್ಥೆ ಈಗಾಗಲೇ 'ಬ್ಯಾನ್ ಪಿಎಫ್ಐ' ಅಭಿಯಾನ ನಡೆಸುತ್ತಿದೆ. ಸರ್ಕಾರ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವಿವಿಧ ವರದಿಗಳು ಪಿಎಫ್ಐ ಮತ್ತು ಟರ್ಕಿಯಂತಹ ಭಾರತ ವಿರೋಧಿ ದೇಶಗಳ ನಡುವಿನ ಸಂಬಂಧವನ್ನು ತೋರಿಸುತ್ತವೆ. ಅಲ್ ಖೈದಾ ಮತ್ತು ಐಸಿಸ್ ಅನ್ನು ಬೆಂಬಲಿಸುವ ಟರ್ಕಿಯ ಭಯೋತ್ಪಾದಕ ಸಂಘಟನೆಯ ಐಎಚ್ಎಚ್ ಅವರೊಂದಿಗೆ ಪಿಎಫ್ಐನ ಉನ್ನತ ನಾಯಕರ ನಡುವಿನ ಸಭೆ ಗಂಭೀರ ಕಳವಳಕಾರಿ ವಿಷಯವಾಗಿದೆ ಎಂದರು.
ಇದಲ್ಲದೆ, ಪಿಎಫ್ಐ ಜನರ ವಿರುದ್ಧ ನೂರಾರು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಮತ್ತು ಅವರಲ್ಲಿ ಹಲವರು ಶಿಕ್ಷೆಗೊಳಗಾಗಿದ್ದಾರೆ. ಮಾನವ ವಿರೋಧಿ ಕೃತ್ಯಗಳಿಂದಾಗಿ, ಜಾರ್ಖಂಡ್ ಸರ್ಕಾರ ಈಗಾಗಲೇ ಇದನ್ನು ನಿಷೇಧಿಸಿದೆ. ಪಿಎಫ್ಐ ಮುಸ್ಲಿಂ ಯುವಕರನ್ನು ದಾರಿ ತಪ್ಪಿಸುತ್ತದೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಸೇರಲು ಅವರನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ, ಹತ್ರಾಸ್ ಘಟನೆ ಮತ್ತು ಇಂತಹ ಇತರ ಘಟನೆಗಳ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಇದರ ಪಾತ್ರವೂ ಮುನ್ನೆಲೆಗೆ ಬಂದಿದೆ. ಕೇಂದ್ರ ಸರ್ಕಾರ ಇದನ್ನು ದೇಶಾದ್ಯಂತ ಬೇಗನೆ ನಿಷೇಧಿಸದಿದ್ದರೆ, ಅದು ರಾಷ್ಟ್ರಕ್ಕೆ ದೊಡ್ಡ ಹಾನಿ ಮಾಡುತ್ತದೆ. ಟರ್ಕಿ ಮತ್ತು ಪಾಕಿಸ್ತಾನ ಕಾಶ್ಮೀರದಲ್ಲಿ ಐಸಿಸ್ ಭಯೋತ್ಪಾದಕರನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದವು ಮತ್ತು ಅಂತಹ ಸನ್ನಿವೇಶದಲ್ಲಿ ಪಿಎಫ್ಐ ಕೂಡ ಅಲ್ಲಿ ಹಾನಿಕಾರಕ ಪಾತ್ರವನ್ನು ವಹಿಸುತ್ತದೆ ಎಂದರು.
ಯುಎನ್ಐ ಎಸ್ಎಚ್ 1957