Monday, Mar 1 2021 | Time 03:29 Hrs(IST)
International Share

ಇಂಡೋನೇಷ್ಯಾ ಭೂಕಂಪ : ಮೃತರ ಸಂಖ್ಯೆ 91ಕ್ಕೆ ಏರಿಕೆ

ಜಕಾರ್ತ, ಜ 21 (ಯುಎನ್‍ಐ) ಇಂಡೋನೇಷ್ಯಾದ ಪಶ್ಚಿಮ ಸುಲವೇಸಿಯಲ್ಲಿ ಸಂಭವಿಸಿದ 6.2 ತೀವ್ರತೆಯ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 91 ಕ್ಕೆ ಏರಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ನೈಸರ್ಗಿಕ ವಿಕೋಪದಿಂದ ಕನಿಷ್ಠ 1,172 ಜನರು ಗಾಯಗೊಂಡಿದ್ದಾರೆ ಎಂದು ಸಂಸ್ಥೆಯ ವಕ್ತಾರ ರಾಡಿತ್ಯ ಜಾಟಿ ಗುರುವಾರ ಮಾಹಿತಿ ನೀಡಿದ್ದಾರೆ., ಭೂಕಂಪದಿಂದಾಗಿ 9,910 ಜನರು ತಮ್ಮ ಮನೆಗಳಿಂದ ಪಲಾಯನ ಮಾಡಬೇಕಾಯಿತು ಎಂದು ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಕಳೆದ ಶುಕ್ರವಾರದಿಂದ ಪಶ್ಚಿಮ ಸುಲವೆಸಿಯಲ್ಲಿ 14 ದಿನಗಳ ಕಾಲ ವಿಪತ್ತು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೋ ಇತ್ತೀಚೆಗೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳಾಂತರಿಸುವವರ ಪರಿಸ್ಥಿತಿಗಳು ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ವೀಕ್ಷಿಸಿದ್ದಾರೆ.
ಭೂಕಂಪದಿಂದ ಕುಸಿದ ಸರ್ಕಾರಿ ಕಟ್ಟಡಗಳನ್ನು ಪುನರ್ನಿರ್ಮಿಸಲಾಗುವುದು ಇದರಿಂದ ಸಾರ್ವಜನಿಕ ಸೇವೆಗಳು ತಕ್ಷಣ ಪುನರಾರಂಭಗೊಳ್ಳುತ್ತವೆ ಎಂದು ಅಧ್ಯಕ್ಷರು ಹೇಳಿದ್ದು, ಹಾನಿಗೊಳಗಾದ ಮನೆಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.
ಯುಎನ್ಐ ಎಸ್ಎ 1352
More News

ಅಮೆರಿಕಾದ ಸಾಲವೆಷ್ಟು ಗೊತ್ತಾ ?

27 Feb 2021 | 3:48 PM

 Sharesee more..
ಭಾರತೀಯರಿಗೆ ಸಿಹಿ ಸುದ್ದಿ:  ಗ್ರೀನ್ ಕಾರ್ಡ್  ನಿರ್ಬಂಧ ತೆರವುಗೊಳಿಸಿದ ಬೈಡೆನ್

ಭಾರತೀಯರಿಗೆ ಸಿಹಿ ಸುದ್ದಿ: ಗ್ರೀನ್ ಕಾರ್ಡ್ ನಿರ್ಬಂಧ ತೆರವುಗೊಳಿಸಿದ ಬೈಡೆನ್

26 Feb 2021 | 2:33 PM

ವಾಷಿಂಗ್ಟನ್ , ಫೆ 26 (ಯುಎನ್ಐ ) ಅಮೆರಿಕಾದಲ್ಲಿ ಕೆಲಸ ಮಾಡಬಯಸುವ ಲಕ್ಷಾಂತರ ಭಾರತೀಯರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಡಳಿತ ಅನುಕೂಲ ಕಲ್ಪಿಸುವ ಹೊಸ ತೀರ್ಮಾನ ತೆಗೆದುಕೊಂಡಿದೆ.

 Sharesee more..