Monday, Jun 21 2021 | Time 07:05 Hrs(IST)
National Share

ಇಂದು ವಿಶ್ವ ಅಂಚೆ ದಿನ: ಒಂದು ವಾರ ಅಂಚೆ ಸಾಪ್ತಾಹ: ಮೋದಿ ಶುಭ ಹಾರೈಕೆ

ನವದೆಹಲಿ, ಸೆ 9 [ಯುಎನ್ಐ] ಮನೆಗಳಿಗೆ ಕಾಗದ ಪತ್ರಗಳು, ಪಾರ್ಸೆಲ್ ಗಳನ್ನು ಕೊಂಡೊಯ್ಯುವ, ತಲ ತಲಾಂತಗಳಿಂದಲೂ ಜನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂಚೆಯಣ್ಣನನ್ನು ಸ್ಮರಿಸುವ ದಿನ. ಇಂದು ವಿಶ್ವ ಅಂಚೆ ದಿನ.

ಈ ಹಿನ್ನೆಲೆಯಲ್ಲಿ ಇಂದಿನಿಂದ ಇದೇ 15ರವರೆಗೆ ರಾಷ್ಟ್ರೀಯ ಅಂಚೆ ಸಪ್ತಾಹ ಆಯೋಜಿಸಲಾಗಿದೆ. ಶನಿವಾರ ಅಂಚೆ ಇಲಾಖೆಯಲ್ಲಿ ಬ್ಯಾಂಕಿಂಗ್ ದಿನ ಆಚರಿಸುತ್ತಿದ್ದು, 12ರ ಸೋಮವಾರದಂದು ಅಂಚೆ ಜೀವ ವಿಮಾ ದಿನ, 13ರಂದು ಅಂಚೆ ಚೀಟಿ ದಿನ, 14ರಂದು ವ್ಯಾಪಾರ ಅಭಿವೃದ್ಧಿ ದಿನ ಹಾಗೂ 15ರಂದು ಟಪಾಲು ದಿನವನ್ನಾಗಿ ಆಚರಿಸಲಾಗುತ್ತಿದೆ.

ಸಂಪರ್ಕದ ಪ್ರಮುಖ ಕೊಂಡಿಯಾದ ಅಂಚೆ ಇಲಾಖೆ ನಾಗರಿಕ ಸಮಾಜದ ಅವಿಭಾಜ್ಯ ಅಂಗವಾಗಿದೆ. ಕಾಗದ ಪತ್ರ, ಪಾರ್ಸಲ್ ಗಳನ್ನು ತಂದುಕೊಡುವ ಅಂಚೆ ಅಣ್ಣನಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಪಿಂಚಣಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಅಂಚೆ ಇಲಾಖೆ ಒದಗಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅಂಚೆ ಇಲಾಖೆ ಆಧುನೀಕರಣಗೊಂಡಿದ್ದು, ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದೆ. ಬ್ಯಾಂಕಿಂಗ್ ಸೇವೆಯನ್ನು ಸಹ ಆರಂಭಿಸಿದ್ದು, ಎಟಿಎಂ ವ್ಯವಸ್ಥೆ ಕಲ್ಪಿಸಿ, ನಗರ ಹಾಗೂ ಗ್ರಾಮೀಣ ಭಾಗದ ಜನತೆಗೆ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಬೇಟಿ ಬಚಾವೋ, ಬೇಟಿ ಫಡಾವೋ ನಂತಹ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.

ಕೊರೋನಾ ಸಂಕಷ್ಟ ಸಂದರ್ಭದಲ್ಲೂ ಜನ ಸಾಮಾನ್ಯರಿಗೆ ಸೇವೆ ಒದಗಿಸುತ್ತಿದೆ. ರಾಖಿ ಹಬ್ಬ ಸಂದರ್ಭದಲ್ಲಿ ಅಂಚೆ ಮೂಲಕ ರಾಖಿ ತಲುಪಿಸಿದ್ದು, ಶಿಕ್ಷಕರ ದಿನಗಳಂದು ಗುರುಗಳಿಗೆ ಶುಭಾಶಯ ಪತ್ರವನ್ನು ಸಹ ಪೂರೈಸಿದೆ.

ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಹೊರ ಬರುವ ಅಂಚೆ ಚೀಟಿಗಳು ಇತಿಹಾಸದ ಭಾಗವಾಗಿದೆ. ಅಂಚೆ ಚೀಟಿಗಳು ಅಂದು, ಇಂದು, ಎಂದೆಂದಿಗೂ ನಾಗರಿಕ ಸಮಾಜಕ್ಕೆ ಅಪ್ಯಾಯಮಾನವಾದ ವಸ್ತುವಾಗಿದೆ.

ಅಂಚೆ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದು, ಅಂಚೆ ದೇಶವನ್ನು ಸಂಪರ್ಕಿಸುತ್ತದೆ. ಅಸಂಖ್ಯಾತ ಜನರಲ್ಲಿ ಸಂತಸ ಮೂಡಿಸಿದೆ. ಈ ಸುದಿನದಂದು ಅಂಚೆ ಸಿಬ್ಬಂದಿ, ಅವರ ಕುಟುಂಬಕ್ಕೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಯುಎನ್ಐ ವಿಎನ್ 1440
More News
ಉತ್ತರ ಪ್ರದೇಶದಲ್ಲಿ ಜುಲೈ 9 ರಿಂದ ಆರ್‌ಎಸ್‌ಎಸ್ ನ ಮಹತ್ವದ ಸಭೆ

ಉತ್ತರ ಪ್ರದೇಶದಲ್ಲಿ ಜುಲೈ 9 ರಿಂದ ಆರ್‌ಎಸ್‌ಎಸ್ ನ ಮಹತ್ವದ ಸಭೆ

20 Jun 2021 | 4:38 PM

ಚಿತ್ರಕೂಟ, ಜೂನ್ 20 (ಯುಎನ್‌ಐ) -ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಆರ್ ಎಸ್ ಎಸ್‍ ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ಆರಂಭಿಸಿದ್ದು, ಜುಲೈ 9 ರಿಂದ 5 ದಿನಗಳ ಕಾಲ ಇಲ್ಲಿ ಚಿಂತನ-ಮಂಥನ ಸಭೆ ನಡೆಸಲು ನಿರ್ಧರಿಸಲಾಗಿದೆ.

 Sharesee more..

ದೆಹಲಿ ರಾಜಧಾನಿ ವಲಯದಲ್ಲಿ ಭೂಕಂಪನ

20 Jun 2021 | 1:29 PM

 Sharesee more..
ಜಮ್ಮು ಕಾಶ್ಮೀರ: ಪ್ರಧಾನಿ  ಅಧ್ಯಕ್ಷತೆಯಲ್ಲಿ 24 ರಂದು ಸರ್ವ ಪಕ್ಷ ಸಭೆ

ಜಮ್ಮು ಕಾಶ್ಮೀರ: ಪ್ರಧಾನಿ ಅಧ್ಯಕ್ಷತೆಯಲ್ಲಿ 24 ರಂದು ಸರ್ವ ಪಕ್ಷ ಸಭೆ

19 Jun 2021 | 7:21 PM

ನವದೆಹಲಿ, ಜೂನ್ 19 (ಯುಎನ್ಐ) ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಸೇರಿದಂತೆ ರಾಜಕೀಯ ಪ್ರಕ್ರಿಯೆ ಚುರುಕುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಇದೆ 24 ರಂದು ಜಮ್ಮು-ಕಾಶ್ಮೀರದ ಎಲ್ಲಾ ಪ್ರಾದೇಶಿಕ ಪಕ್ಷಗಳೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.

 Sharesee more..