Wednesday, Oct 28 2020 | Time 17:39 Hrs(IST)
 • 25 ವರ್ಷದ ಹಿಂದೆ ತೀರಿ ಹೋದ ತಾಯಿಯನ್ನು ಹೇಗೆ ಮಾರಾಟ ಮಾಡಲಿ? ಮುನಿರತ್ನ ಕಣ್ಣೀರು
 • ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ
 • ಕೋವಿಡ್‍-19: 4 39 ಕೋಟಿ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ರಾಜ್ಯದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾವ ಸಲ್ಲಿಕೆ
 • ಕಾಶ್ಮೀರದಲ್ಲಿ 370ನೇವಿಧಿ ರದ್ದಾದ ಮೇಲೆ ಏನು ಬದಲಾಗಿದೆ: ಶಿವಸೇನೆ ಪ್ರಶ್ನೆ
 • ‘ಮೊಲಾವೆ’ ಚಂಡಮಾರುತ ಅಬ್ಬರ: ವಿಯೆಟ್ನಾಂನಲ್ಲಿ 26 ಮೀನುಗಾರರು ನಾಪತ್ತೆ
 • ಶ್ರೀನಗರದಲ್ಲಿನ 9 ಸ್ಥಳಗಳಲ್ಲಿ ಎನ್ಐಎ ದಾಳಿ
 • ತೇಜಸ್ವಿ ಯಾದವ್ ಬಿಹಾರ ಭವಿಷ್ಯದ ನಾಯಕನಲ್ಲ, ‘ಜಂಗಲ್ ರಾಜ್’ ರಾಜ ಕುಮಾರ : ಮೋದಿ ಲೇವಡಿ
 • ಮಧ್ಯ ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಉಗ್ರರು ಹತ
 • ಸಾನಿಯಾ ಮಿರ್ಜಾ ವಿರುದ್ದ ಬಿಜೆಪಿ ಶಾಸಕನ ಗಂಭೀರ ಆರೋಪ
 • ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ
 • ಯಡಿಯೂರಪ್ಪ, ದೇವೇಗೌಡರು ಎಳೆ ಎತ್ತಾ? ; ಸಿದ್ದರಾಮಯ್ಯ
 • ನಿವೃತ್ತ ಪ್ರಾಂಶುಪಾಲರ ಕೊಲೆ; ಮೂವರು ಶಿಕ್ಷಕರು ಸೇರಿ ಐವರ ಬಂಧನ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು : ಎಚ್‌ ಡಿ ಕುಮಾರಸ್ವಾಮಿ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌ ಡಿ ಕುಮಾರಸ್ವಾಮಿ
Sports Share

ಈ ವರ್ಷದ ಐಪಿಎಲ್‌ ಟೂರ್ನಿ ತುಂಬಾ ವಿಶೇಷತೆಯಿಂದ ಕೂಡಿದೆ: ವಿರೇಂದ್ರ ಸೆಹ್ವಾಗ್‌

ಮುಂಬೈ, ಸೆ 18 (ಯುಎನ್‌ಐ) ದೀರ್ಘ ಕಾಲ ಅಂಗಳದಿಂದ ದೂರ ಉಳಿದಿದ್ದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಅವರು ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ ಮರಳುತ್ತಿದ್ದರಿಂದ ಈ ಬಾರಿ ಶ್ರೀಮಂತ ಫ್ರಾಂಚೈಸಿ ಲೀಗ್‌ 'ಹೆಚ್ಚುವರಿ ವಿಶೇಷತೆ'ಯಿಂದ ಕೂಡಿರುತ್ತದೆ," ಎಂದು ಟೀಮ್‌ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಹೇಳಿದ್ದಾರೆ.
ಸೆ.19 ರಿಂದ ಯುಎಇಯಲ್ಲಿ 2020ರ ಐಪಿಎಲ್‌ ಟೂರ್ನಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಹಾಗೂ ಕಳೆದ ಆವೃತ್ತಿಯ ರನ್ನರ್‌ ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮುಖಾಮುಖಿಯಾಗುತ್ತಿವೆ. ಈಗಾಗಲೇ ಈ ಎರಡು ತಂಡಗಳ ಬಗ್ಗೆ ಕೆಲ ಪ್ರಮುಖ ಸಂಗತಿಗಳನ್ನು ಹಲವು ಕ್ರಿಕೆಟ್‌ ದಿಗ್ಗಜರು ವಿವರಿಸಿದ್ದಾರೆ. ಇದೀಗ ವಿರೇಂದ್ರ ಸೆಹ್ವಾಗ್‌ ಕೂಡ ತಿಳಿಸಿದ್ದಾರೆ.
"ಈ ಬಾರಿ ಐಪಿಎಲ್‌ ಟೂರ್ನಿಯು ಪ್ರತಿಯೊಬ್ಬ ಆಟಗಾರನಿಗೂ, ಅಭಿಮಾನಿಗಳಿಗೆ ವಿಶೇಷವಾಗಿದೆ. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿರುವ ಎಂಎಸ್ ಧೋನಿ ಫ್ರಾಂಚೈಸಿ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ," ಎಂದು ಅವರು ಹೇಳಿದರು.
ಕಳೆದ ಆಗಸ್ಟ್‌ 15 ರಂದು ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರನೆ ವಿದಾಯ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದರು. ಇದೀಗ ಅವರು ಸೆ.19 ರಿಂದ ಆರಂಭವಾಗುವ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಧೋನಿ ಜತೆಯಲ್ಲಿಯೇ ಸುರೇಶ್‌ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಭಾರತೀಯರ ಪಾಲಿಗೆ ಕ್ರಿಕೆಟ್‌ ಅವಿಭಾಜ್ಯ ಅಂಗವಾಗಿದೆ ಹಾಗೂ ಅಭಿಮಾನಿಗಳು ಸ್ಪರ್ಧಾತ್ಮಕ ಕ್ರಿಕೆಟ್‌ ನೋಡಲು ದೀರ್ಘ ಕಾಲದಿಂದ ಕಾದಿದ್ದಾರೆ ಎಂದು ಸೆಹ್ವಾಗ್‌ ತಿಳಿಸಿದ್ದಾರೆ.
"ಕೊರೊನಾ ವೈರಸ್‌ ಲಾಕ್‌ಡೌನ್‌ ಸಮಯದಲ್ಲಿ ನಾನು ಸಾಕಷ್ಟು ಸಮಯವನ್ನು ನನ್ನ ಹಳೆಯ ಪಂದ್ಯಗಳು ಸೇರಿದಂತೆ ಅನೇಕ ಇನಿಂಗ್ಸ್‌ಗಳನ್ನು ವೀಕ್ಷಿಸಿದ್ದೇನೆ ಹಾಗೂ ವಿಶ್ಲೇಷಣೆ ಮಾಡಿದ್ದೇನೆ. ಭಾರತೀಯರ ಪಾಲಿಗೆ ಕ್ರಿಕೆಟ್‌ ಅತ್ಯಂತ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಹಾಗಾಗಿ, ದೀರ್ಘ ಅವಧಿಯಿಂದ ಕ್ರಿಕೆಟ್‌ ಮರಳುವಿಕೆಗಾಗಿ ಕಾಯುತ್ತಿದ್ದೇವೆ," ಎಂದು ವಿರೇಂದ್ರ ಸೆಹ್ವಾಗ್‌ ಹೇಳಿದ್ದಾರೆ.
ಯುಎನ್‌ಐ ಆರ್‌ಕೆ 1451
More News

ಕೋಲ್ಕೊತಾಗೆ "ಮಾಡು ಇಲ್ಲವೇ ಮಡಿ" ಹಣಾಹಣಿ

28 Oct 2020 | 11:07 AM

 Sharesee more..

ಪಿಂಕ್ ಬಾಲ್ ಟೆಸ್ಟ್ ಗೆ ಅಡಿಲೇಡ್ ಆತಿಥ್ಯ

28 Oct 2020 | 10:36 AM

 Sharesee more..