Tuesday, Oct 15 2019 | Time 19:32 Hrs(IST)
 • ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂಗೆ ಸ್ಪೆಷಲ್ ಕೋರ್ಟ್ ಶಾಕ್
 • ಆರ್ಥಿಕ ಪರಿಸ್ಥಿತಿ ಬಣ್ಣಿಸುವ ಹಣಕಾಸು ಸಚಿವರ ಪತಿಯ ಪತ್ರ ;ಕಾಂಗ್ರೆಸ್ ಟೀಕೆ
 • ಐಟಿಎಫ್ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ: ಮಹೇಶ್ ಭೂಪತಿ
 • ಹೊಟ್ಟೆಪಾಡಿಗೆ ವ್ಯಾನ್ ಚಾಲಕನಾದ ಪಾಕ್ ಕ್ರಿಕೆಟಿಗ !
 • ಡೆನ್ಮಾಕ್ ಓಪನ್: ಎರಡನೇ ಸುತ್ತಿಗೆ ಸಿಂಧು , ಕಶ್ಯಪ್ ಗೆ ನಿರಾಸೆ
 • ವೇತನ ಪರಿಷ್ಕರಣೆ ಸರಿಯಿದೆ; ಎಚ್ ಎಎಲ್ ಸಮರ್ಥನೆ, ನೌಕರರಿಂದ ಮುಷ್ಕರ ಮುಂದುವರಿಕೆಯ ಬೆದರಿಕೆ
 • ಮಹಿಳಾ ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಿಂದ ಕುಸಿದ ಸ್ಮತಿ ಮಂಧಾನ
 • ಅಯೋಧ್ಯಾ ಭೂ ವಿವಾದ: ನಾಳೆಯೇ ವಿಚಾರಣೆ ಅಂತ್ಯ ಸಾಧ್ಯತೆ
 • ಡೆನ್ಮಾಕ್ ಓಪನ್: ಎರಡನೇ ಸುತ್ತಿಗೆ ಪ್ರವೇಶಿಸಿದ ಸಿಂಧು, ಕಶ್ಯಪ್
 • ಐಟಿ ವಿಚಾರಣೆಗೆ ಹಾಜರು: ರಮೇಶ್ ಸಾವಿನ ಬಗ್ಗೆ ವಿಶೇಷ ತನಿಖೆಗೆ ಆಗ್ರಹಿಸಿದ ಡಾ ಜಿ ಪರಮೇಶ್ವರ್
 • ಹೈಕಮಾಂಡ್ ಭೇಟಿಗಾಗಿ ಸಿದ್ದರಾಮಯ್ಯ ಮಂಗಳವಾರ ದೆಹಲಿಗೆ
 • ನಿವೃತ್ತ ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಸ್ಪೀಕರ್ ಸಲಹೆಗಾರರಾಗಿ ನೇಮಕ: ಹೊಸ ಸಂಪ್ರದಾಯಕ್ಕೆ ನಾಂದಿ
 • ಕಲಾಂ ಹುಟ್ಟುಹಬ್ಬ: ವಿಶ್ವ ವಿದ್ಯಾರ್ಥಿಗಳ ದಿನವಾಗಿಯೂ ಆಚರಣೆ
 • ತಿಹಾರ್ ಜೈಲುವಾಸ, ಪೊಲೀಸರ ಬರ್ಬರತೆ ನೆನಪು ಮಾಡಿಕೊಂಡ ಅಭಿಜಿತ್ ಬ್ಯಾನರ್ಜಿ
 • ಕರ್ನಾಟಕ – ಕೇರಳದಲ್ಲಿ ಇಂದು ಭಾರಿ ಮಳೆ ಸಂಭವ
Sports Share

ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌

ಸೌಥ್‌ಹ್ಯಾಮ್ಟನ್‌ ಜೂ 25 (ಯುಎನ್‌ಐ) ಐಸಿಸಿ ವಿಶ್ವಕಪ್‌ ಆರಂಭಕ್ಕೂ ಮೊದಲು ನಡೆಸಿದ ತಯಾರಿ, ಕಠಿಣ ಪರಿಶ್ರಮ ಹಾಗೂ ಅಭ್ಯಾಸದ ಫಲವಾಗಿ ಇದೀಗ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿದೆ ಎಂದು ಬಾಂಗ್ಲಾದೇಶ ತಂಡದ ಹಿರಿಯ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ತಿಳಿಸಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 262 ರನ್‌ ದಾಖಲಿಸಿತು. ಬಳಿಕ 263 ರನ್‌ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ 47 ಓವರ್‌ಗಳಿಗೆ 200 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 62 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.

ಅದ್ಭುತ ಲಯದಲ್ಲಿರುವ ಶಕೀಬ್‌ ಅಲ್‌ ಹಸನ್‌ ಅವರು ಮೊದಲ ಇನಿಂಗ್ಸ್‌ 69 ಎಸೆತಗಳಿಗೆ 51 ರನ್‌ ಗಳಿಸಿದ್ದರು. ಜತೆಗೆ ಬೌಲಿಂಗ್‌ನಲ್ಲೂ ಗಮನಾರ್ಹ ಪ್ರದರ್ಶನ ತೋರಿದರು. 10 ಓವರ್‌ಗಳಿಗೆ 29 ರನ್‌ ನೀಡಿ 5 ವಿಕೆಟ್‌ ಕಬಳಿಸಿ ಗೆಲುವಿಗೆ ಕಾರಣರಾದರು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆಡಿರುವ ಆರು ಇನಿಂಗ್ಸ್‌ಗಳಲ್ಲಿ ಶಕೀಬ್‌ 476 ರನ್‌ ಗಳಿಸಿದ್ದು, ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ಪಂದ್ಯದ ಬಳಿಕ ಈ ಕುರಿತು ಪ್ರತಿಕ್ರಿಯಿಸಿ ಅವರು, ವಿಶ್ವಕಪ್‌ ಆರಂಭಕ್ಕೂ ಮುನ್ನ ಪೂರ್ವ ತಯಾರಿ ನಡೆಸಿದ್ದೆ. ಆದರೆ, ಅದನ್ನು ಸಾಬೀತುಪಡಿಸಿಲು ನನ್ನ ಬಳಿ ಯಾವುದೇ ಅಂಶವಿಲ್ಲ. ಇದು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಲು ಸಹಾಯವಾಗಿದೆ. ವೈಯಕ್ತಿಕ ಪ್ರದರ್ಶನದ ಬಗ್ಗೆ ನಾನೆಂದೂ ಶ್ರೇಣಿ ನೀಡಲಿಲ್ಲ. ಆದರೆ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ತಂಡದ ಗೆಲುವಿಗೆ ಕೊಡುಗೆ ನೀಡಿದಾಗ ಮಾತ್ರ ನನಗೆ ಹೆಚ್ಚು ತೃಪ್ತಿ ಸಿಗುತ್ತದೆ ಎಂದು ಹೇಳಿಕೊಂಡರು.

ವಿಶ್ವಕಪ್‌ ಆರಂಭಕ್ಕೂ ಮುನ್ನ ಮಧ್ಯಮ ಕ್ರಮಾಂಕದಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಯಸಿದ್ದೆ. ಅದೇ ರೀತಿ ತಂಡ ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವುದರಿಂದ ಉತ್ತಮ ಹೊಡೆತಗಳನ್ನು ಬಾರಿಸಲು ನೆರವಾಗುತ್ತದೆ. ಅಫ್ಘಾನಿಸ್ತಾನದ ಸ್ಪಿನ್ನರ್‌ಗಳು ಈ ಪಂದ್ಯದಲ್ಲಿ ಕಠಿಣ ಸವಾಲು ನಿಡಿದರು. ಆದರೂ, ಎಲ್ಲ ಒತ್ತಡವನ್ನು ನಿಬಾಯಿಸಿ ತಾಳ್ಮೆಯಿಂದ ಬ್ಯಾಟಿಂಗ್‌ ಮಾಡಿದೆ ಎಂದರು.

ಮಹತ್ವದ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಒಂದೂವರೆ ತಿಂಗಳು ಮಾಡಿದ ಫಿಟ್ನೆಸ್‌ ಸಾಕಷ್ಟು ಸಹಕಾರಿ ನೀಡಿದೆ. ಇಂದು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಉತ್ತಮ ಪ್ರದರ್ಶನ ಮೂಡಿಬರುತ್ತಿದೆ ಎಂದರೆ ಒಂದೂವರೆ ತಿಂಗಳಿನಿಂದ ಮಾಡಿದ ಫಿಟ್ನೆಸ್‌ ಕಾರಣ. ತೀವ್ರ ಒತ್ತಡದ ಸನ್ನಿವೇಶಗಳಲ್ಲೂ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಸಾಮಾರ್ಥ್ಯ ವೃದ್ಧಿಯಾಗಲು ಫಿಟ್ನೆಸ್‌ ಪ್ರಮುಖ ಪಾತ್ರವಹಿಸಿದೆ ಎಂದು ಶಕೀಬ್‌ ಉಲ್ಲೇಖಿಸಿದರು.
ಯುಎನ್‌ಐ ಆರ್‌ಕೆ ಎಎಚ್‌ 1009