Monday, Feb 24 2020 | Time 05:49 Hrs(IST)
International Share

ಉತ್ತರ ಅಫ್ಘಾನಿಸ್ತಾನ: ವಾಯುದಾಳಿಯಲ್ಲಿ 18 ಉಗ್ರರು ಹತ

ತಾಲ್ಲೂಕುನ್, ಅಫ್ಘಾನಿಸ್ತಾನ, ಆ 21 (ಕ್ಸಿನುವಾ) ಉತ್ತರ ತಖಾರ್ ಪ್ರಾಂತ್ಯದಲ್ಲಿ ತಾಲಿಬಾನ್ ಭಾಗಗಳನ್ನು ಗುರಿಯಾಗಿಸಿ ಅಫ್ಘಾನಿಸ್ತಾನ ಸೇನೆ ನಡೆಸಿದ ವಾಯುದಾಳಿಯಲ್ಲಿ 18 ಉಗ್ರರು ಹತರಾಗಿದ್ದಾರೆ ಎಂದು ಸದರಿ ಪ್ರಾಂತ್ಯದ ಗವರ್ನರ್ ಅವರ ವಕ್ತಾರ ಮೊಹಮ್ಮದ ಜಾವೆದ್ ಹಜಾರಿ ಬುಧವಾರ ಮಾಹಿತಿ ನೀಡಿದ್ದಾರೆ
ಮಂಗಳವಾರ ತಡರಾತ್ರಿ ಕೈಗೊಂಡ ಕಾರ್ಯಾಚರಣೆಯಲ್ಲಿ 10ಕ್ಕೂ ಹೆಚ್ಚು ದಂಗೆಕೋರರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ
ತಾಲಿಬಾನ್ ಭಯೋತ್ಪಾದಕರ ಅಡಗುದಾಣಗಳನ್ನು ಗುರಿಯಾಗಿ ಸೇನಾಪಡೆ ವಾಯುದಾಳಿ ಮುಂದುವರಿಸಿದೆ ಎಶ್ಕಾಮಿಶ್ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿದ್ದ ಉಗ್ರರನ್ನು ಭದ್ರತಾ ಪಡೆಯ ಯೋಧರು ಹೊರಹಾಕಿದ್ದಾರೆ ಎಂದು ಜಾವೆದ್ ಹಜಾರಿ ತಿಳಿಸಿದ್ದಾರೆ
ಈ ದಾಳಿ ಹಾಗೂ ಸಾವು ನೋವಿನ ಕುರಿತು ತಾಲಿಬಾನ್ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಯುಎನ್ಐ ಎಸ್ಎ ವಿಎನ್ 1224
More News
ಬಿಲ್ ಗೇಟ್ ಔದಾರ್ಯಕ್ಕೆ  ವಿಶ್ವ ನಾಯಕರ ಮೆಚ್ಚುಗೆ

ಬಿಲ್ ಗೇಟ್ ಔದಾರ್ಯಕ್ಕೆ ವಿಶ್ವ ನಾಯಕರ ಮೆಚ್ಚುಗೆ

23 Feb 2020 | 8:18 PM

ಬೀಜಿಂಗ್, ಫೆ 23(ಯುಎನ್ಐ ) ಕೊರೋನವೈರಸ್ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸುವ ಜಾಗತಿಕ ಕಾರ್ಯತಂತ್ರಕ್ಕಾಗಿ ವಿಶ್ವದ ಕುಬೇರ ಎಂದೇ ಗುರುತಿಸಿಕೊಂಡಿರುವ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯ ಡಾಲರ್ ಸುಮಾರು 718 ಕೋಟಿ ರೂಪಾಯಿ ದೇಣಿಗೆ ನೀಡಿ ಔದಾರ್ಯ ಮೆರೆದಿದೆ.

 Sharesee more..

ಟರ್ಕಿಯಲ್ಲಿ ಭೂಕಂಪನ: 7 ಮಂದಿ ಸಾವು

23 Feb 2020 | 4:07 PM

 Sharesee more..