Sunday, Dec 6 2020 | Time 00:01 Hrs(IST)
Karnataka Share

ಉತ್ತರ ಕರ್ನಾಟಕಕ್ಕೆ ಅನ್ಯಾಯ, ತಾರತಮ್ಯ ಸಹಿಸಲಾಗದು: ಹೊರಟ್ಟಿ

ಬೆಂಗಳೂರು, ಅ 22 (ಯುಎನ್ಐ ) ಬೆಂಗಳೂರಿನಲ್ಲಿ ಕುಳಿತಿತ ಅಧಿಕಾರಿಗಳಿಗೆ ಉತ್ತರ ಕರ್ನಾಟಕವೆಂದರೆ ಅಲರ್ಜಿ. ಕಛೇರಿಗಳನ್ನು ಸ್ಥಳಾಂತರಿಸುವುದಾಗಲೀ ಉಪಕುಲಪತಿಗಳನ್ನು ನೇಮಕವಾಗಲಿ, ಅಭಿವೃದ್ದಿ ಕೆಲಸಗಳನ್ನು ಮಾಡದೆ ಕಡೆಗಣಿಸಲಾಗುತ್ತಿದೆ ಹೀಗೆಯೇ ತಾರತಮ್ಯ, ಅನ್ಯಾಯ ಮಾಡುತ್ತಿರುವುದನ್ನು ಬಹಳ ಕಾಲ ಸಹಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ, ಮಾಜಿ ಸಚಿವ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಉತ್ತರ ಕರ್ನಾಟಕ ದವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ಪಟ್ಟ ಕಟ್ಟಬೇಕು ಎಂಬ ಕೂಗು ಕೇಳಿ ಬರುತ್ತಿರುವ ಸಮಯದಲ್ಲೇ ಹೊರಟ್ಟಿ ಅವರು, ಗೃಹಸಚಿವರಿಗೆ ದೀರ್ಘ ಪತ್ರ ಬರೆದು ತಮ್ಮ ನೋವು ,ತೋಡಿಕೊಂಡು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಧಾರವಾಡದ ಉಚ್ಛ ನ್ಯಾಯಾಲಯಕ್ಕೆ ನೇಮಕ ಮಾಡುವದಾಗಲಿ; ಬೋರ್ಡ್, ಕಾರ್ಪೋರೇಶನ್ನಿಗೆ ನೇಮಕ ಮಾಡುವುದಾಗಲಿ, ಕೆ.ಪಿ.ಎಸ್.ಸಿ ಸದಸ್ಯರನ್ನು ನೇಮಿಸುವುದಾಗಲೀ, ಕೆ.ಪಿ.ಎಸ್.ಸಿ. ಯಿಂದ ಕೆ.ಎ.ಎಸ್. ಅಧಿಕಾರಿಗಳನ್ನು ನೇಮಕ ಮಾಡುವುದಾಗಲೀ ಯಾವುದಕ್ಕೂ ಸ್ಪಂದನೆಯೇ ಇಲ್ಲ.ಇದೆ ಕಾರಣಕ್ಕಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲೆಂದು ಅನೇಕ ಜನರ ಹೋರಾಟದ ಕೂಗು ಹುಟ್ಟಲು ಸರ್ಕಾರ ಮತ್ತು ಜಡ್ಡಗಟ್ಟಿದ ಅಧಿಕಾರಿಗಳ ವರ್ತನೆಯೇ ಕಾರಣ ಎಂದು ಅವರು ದೂರಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮಾದರಿಯಾದ ಪೋಲೀಸ್ ವಸತಿ ಶಾಲೆ ಪೋಲೀಸ್ ಮಕ್ಕಳಿಗೆ ಒಂದು ವಿದ್ಯೆ ಕೊಡುವ ಸಂಸ್ಥೆಯಾಗಿದೆ
ನೀವು ಸಚಿವರಾಗಿ ಬಂದ ನಂತರ ಈ ಶಾಲೆಯನ್ನು ಸುಧಾರಿಸಬೇಕು ಮತ್ತು ಒಂದು ಉತ್ತಮವಾದ ಸಂಸ್ಥೆ ಮಾಡಬೇಕೆಂದು ಹಲವು ಭಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರೂ ಯಾವ ಅಧಿಕಾರಿಯೂ ಪ್ರಾಮಾಣಿಕತನದಿಂದ ಸರಿಯಾಗಿ ಕರ್ತವ್ಯವನ್ನು ಮಾಡಿಲ್ಲ ಎಂಬುದು ಬಹಳ ನೋವಿನ ಸಂಗತಿ.
ಇದು ಉತ್ತಮ ಶಾಲೆಯಾಗಿದ್ದುಶೇಕಡ 100ಕ್ಕೆ ನೂರು ಫಲಿತಾಂಶ ಕೊಡುತ್ತಿದೆ ಎಲ್ಲ ರೀತಿಯಿಂದ ರಾಜ್ಯಕ್ಕೆ ಮಾದರಿಯಾದ ಶಾಲೆಯನ್ನು ಮುಚ್ಚುವ ಹುನ್ನಾರ ಮಾಡಿರುವುದು ಕೆಲ ಭ್ರಷ್ಟ ಪೋಲೀಸ್ ಅಧಿಕಾರಿಗಳು ಇದಕ್ಕೆ ಕಾರಣರಾಗಿದ್ದಾರೆ. ಅಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಸರಕಾರ ಕ್ರಮ ತೆಗೆದುಕೊಳ್ಳದೆ, ನೆಗಡಿಯಾದರೆ ಮೂಗನ್ನೇ ಕತ್ತರಿಸುವ ಕೆಟ್ಟ ಪ್ರವೃತ್ತಿಯ ಭ್ರಷ್ಟ ಅಧಿಕಾರಿಗಳು ನಿಮಗೆ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ತರಲು ಹಾಗೂ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಲು ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ನಿಮ್ಮ ಮನೆಗೆ ಬಂದು ವಿವರಿಸಿದ್ದು, ಎರಡು ಸಲ ನಿಮ್ಮ ಕಚೇರಿಗೂ ಬಂದು ಹೇಳಿದ್ದೇನೆ ಇದರ ಜೊತೆಗೆ ಮುಖ್ಯ ಮಂತ್ರಿಗಳಿಗೂ ಈ ವಿಷಯ ತಿಳಿಸಿದ್ದೇನೆ .
ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದೇನೆ ನಾನೊಬ್ಬ ವಿಧಾನ ಪರಿಷತ್ತಿನ ಹಿರಿಯ ಸದಸ್ಯ, ಮಾಜಿ ಮಂತ್ರಿ, ಮಾಜಿ ಸಭಾಪತಿ ಅಧಿಕಾರಿಗಳ ಕಛೇರಿಗೆ ಪದೇ ಪದೇ ಹೋಗುವದು, ಸರಿಯಲ್ಲ . ಸೂಕ್ತವೂ ಅಲ್ಲ. ಆದರೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮತ್ತು ಅಲ್ಲಿಯ ಸಿಬ್ಬಂದಿಗೆ ಹಾಗೂ ಮಕ್ಕಳಿಗೆ ತೊಂದರೆ ಮಾಡುತ್ತಿರುವುದನ್ನು ಬಹಳ ಕಾಲ ಸಹಿಸಲು ಆಗುವುದಿಲ್ಲ ಉತ್ತರ ಕರ್ನಾಟಕವನ್ನು ಎಲ್ಲ ರೀತಿಯಿಂದ ನಿಷ್ಕಾಳಜಿ ಮಾಡುತ್ತಿರುವದರ ಬಗ್ಗೆ ಅನೇಕ ಸಲ ನಾನು ಸರಕಾರಕ್ಕೆ ಎಚ್ಚರಿಕೆ ಕೊಡುತ್ತಲೆ ಬರಲಾಗಿದೆ. ಇನ್ನು ಸಹಿಸಲು ಆಗುವುದಿಲ್ಲ ಜನರ ತಾಳ್ಮೆಗೂ ಮಿತಿಯಿದೆ. ಬೆಂಗಳೂರಿನಲ್ಲಿ ಕುಳಿತಿರುವ ಅಧಿಕಾರಿಗಳಿಗೆ ಉತ್ತರ ಕರ್ನಾಟಕವೆಂದರೆ ಬಹಳ ಅಸಡ್ಡೆ ಅಲರ್ಜಿಯಾಗಿದೆ.

ನಿಮ್ಮ ತಂದೆಯವರು ಮುಖ್ಯ ಮಂತ್ರಿಯಾಗಿದ್ದಾಗ ಈ ಶಾಲೆ ಪ್ರಾರಂಭವಾಗಿದೆ. ನೀವು ಗೃಹ ಮಂತ್ರಿಗಳಾದಾಗ ಇದನ್ನು ಮುಚ್ಚಿದ ಕೆಟ್ಟ ಕೀರ್ತಿ ಬರಬಾರದು ಶಾಲೆಯ ಶಿಕ್ಷಕರಿಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ . ಒಬ್ಬ ಶಿಕ್ಷಕರಿಗೆ ಮೂರು ಜನ ಬುದ್ಧಿಮಾಂದ್ಯ ಹೆಣ್ಣು ಮಕ್ಕಳಿದ್ದು ವೇತನವಿಲ್ಲದ್ದರಿಂದ ಅವರ ಪಾಲನೆ ಪೋಷಣೆಗೆ ಆಸ್ಪತ್ರೆಗೆ ಖರ್ಚಿಗೆ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದಾರೆ. ಒಬ್ಬ ಶಿಕ್ಷಕರ ಪತ್ನಿ ಮನೆ ನಡೆಸುವದು ಕಷ್ಟವಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮತ್ತೊಬ್ಬ ಶಿಕ್ಷಕ ವೈದ್ಯಕೀಯ ವೆಚ್ಚ ಭರಿಸಲಾರದ ಪರಿಸ್ಥಿತಿಯಲ್ಲಿ ಕೇವಲ 12 ದಿನಗಳ ಹಿಂದೆ ಮೃತಪಟ್ಟಿದ್ದಾರೆ.
ಇಷ್ಟೆಲ್ಲ ಅನಾಹುತವಾದರೂ ಮಾತೆತ್ತಿದರೆ ಈ ಶಾಲೆಯನ್ನು ಮುಚ್ಚುತ್ತೇವೆ ಎಂದು ಹಣಕಾಸಿನ ಹಾಗೂ ಕೆಲ ಪೋಲೀಸ್ ಅಧಿಕಾರಿಗಳು ಪದೇ ಪದೇ ಹೇಳುತ್ತಿದ್ದಾರೆ ಇದನ್ನು ಯಾವ ರಿತಿ ಬಗೆಹರಿಸುತ್ತಿರೋ ಎಂಬುದನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ ಮುಂದಿನ ವಿಷಯ ನಿಮಗೆ ಬಿಟ್ಟಿದ್ದು.ಇಲ್ಲಿನ ಸಿಬ್ಬಂದಿಗಳ ಕರುಣಾಜನಕ ಪರಿಸ್ಥಿತಿ ಸರಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ? ಶಾಲೆಯನ್ನು ಮುಚ್ಚುವುದನ್ನೇ ಹೇಳಿಕೊಂಡು ಅದಕ್ಕೆ ಬೇಕಾದ ಸೌಲಭ್ಯ ಕೊಡದೆ ಮೊಂಡುತನ ಮಾಡುತ್ತಿರುವುದು ಯಾವ ನ್ಯಾಯ.? ಅಧಿಕಾರಿಗಳೇನು ಮನೆಯಿಂದ ಹಣ ತರುತ್ತಾರೆಯೇ? ಈ ದಿಸೆಯಲ್ಲಿ ನಾನು ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕೆಂದಿರುವೆ ಅನ್ನುವದನ್ನು ನಿಮಗೆ ಹಾಗೂ ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಿದ್ದೇನೆ .
ಇದರ ಮೇಲೆ ತಾವು ಕ್ರಮ ತೆಗೆದುಕೊಳ್ಳುವದು ಬಿಡುವದು ನಿಮಗೆ ಬಿಟ್ಟ ವಿಚಾರ. ಈ ಶಾಲೆಯನ್ನು ಮುಚ್ಚುವುದರಿಂದ ನನಗೆ ವೈಯಕ್ತಿಕವಾಗಿ ನಷ್ಟವಿಲ್ಲ ಈ ವಿಚಾರದಲ್ಲಿ ಯಾವುದೇ ರೀತಿಯಿಂದ ಪತ್ರ ಬರೆಯುವುದಾಗಲೀ, ಪ್ರಸ್ತಾಪಿಸುವುದಾಗಲಿ ಮಾಡುವದಿಲ್ಲ.ಕೊನೆದಾಗಿ ಉತ್ತರ ಕರ್ನಾಟಕ ಜನರಿಗೆ ಅನ್ಯಾಯ ಮಾಡಿದರೆ ಅದರ ಫಲವನ್ನು ಉಣ್ಣಬೇಕಾಗುತ್ತದೆ ಎಂದೂ ಹೊರಟ್ಟಿ ಪತ್ರದಲ್ಲಿ ವಿವರಿಸಿದ್ದಾರೆ.
ಯುಎನ್ಐ ಕೆಎಸ್ಆರ್ ವಿಎನ್ 1139