Friday, Dec 4 2020 | Time 04:43 Hrs(IST)
National Share

ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ

ಬಾರಾಮುಲ್ಲಾ, ಅ 22(ಯುಎನ್ಐ)- ಉತ್ತರ ಕಾಶ್ಮೀರದ ಸೇಬು ಪಟ್ಟಣವಾದ ಸೊಪೋರ್ ನಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ, ರಾಷ್ಟ್ರೀಯ ರೈಫಲ್ಸ್, ಜಮ್ಮು-ಕಾಶ್ಮೀರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಸೊಪೋರ್ ನ ತುಜ್ಜರ್ ಶರೀಫ್ ನಲ್ಲಿ ಗುರುವಾರ ಬೆಳಿಗ್ಗೆ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದವು
ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಮನೆ-ಮನೆಯಲ್ಲಿ ಶೋಧ ನಡೆಸಿದ್ದರು. ಈ ವೇಳೆ, ಅಲ್ ಬದರ್ ನ ಇಬ್ಬರು ಉಗ್ರರ ಕುಟುಂಬದವರು ಶರಣಾಗುವಂತೆ ಅವರ ಮನವೊಲಿಸಿದ್ದಾರೆ.
ಭದ್ರತಾ ಪಡೆಗಳು ಸಹ ಧ್ವನಿವರ್ಧಕ ಮೂಲಕ ಶರಣಾಗುವಂತೆ ಉಗ್ರರಿಗೆ ಪದೇ ಪದೇ ಮನವಿ ಮಾಡಿದ್ದಾರೆ. ಶರಣಾಗುವುದರಿಂದ ಉಗ್ರರು ಮತ್ತು ಕುಟುಂಬಗಳ ಜೊತೆ ಸೇರಿ ಎಂದಿನಂತೆ ಜೀವನ ಸಾಗಿಸಬಹುದು ಎಂದು ಕಿವಿಮಾತು ಹೇಳಿದ್ದಾರೆ.
ನಂತರ, ಇಬ್ಬರೂ ಉಗರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ.

ಕಳೆದ ವಾರ ಬಡ್ಗಾಮ್ ನಲ್ಲಿ ಓರ್ವ ಉಗ್ರ ಶರಣಾಗಿದ್ದ. ಕಳೆದ ಕೆಲ ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮುಂದೆ ಆರು ಉಗ್ರರು ಶರಣಾಗಿದ್ದಾರೆ.

ಯುಎನ್ಐ ಎಸ್ಎಲ್ಎಸ್ 1439
More News
ಸೂಕ್ತ ಸಮಯದಲ್ಲಿ ಭಾರತ, ಚೀನಾ ನಡುವೆ ಕಮಾಂಡರ್‌ ಹಂತ ಸಭೆ; ವಿದೇಶಾಂಗ ಸಚಿವಾಲಯ

ಸೂಕ್ತ ಸಮಯದಲ್ಲಿ ಭಾರತ, ಚೀನಾ ನಡುವೆ ಕಮಾಂಡರ್‌ ಹಂತ ಸಭೆ; ವಿದೇಶಾಂಗ ಸಚಿವಾಲಯ

03 Dec 2020 | 8:45 PM

ನವದೆಹಲಿ, ಡಿ 3 (ಯುಎನ್ಐ) ಶೀಘ್ರದಲ್ಲೇ ಭಾರತ ಮತ್ತು ಚೀನಾ ಸೇನೆಯ ಹಿರಿಯ ಕಮಾಂಡರ್‌ಗಳ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

 Sharesee more..