Thursday, Jan 21 2021 | Time 04:35 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
Special Share

ಉದ್ಭವ್ ಠಾಕ್ರೆ ಸಮ್ಮುಖದಲ್ಲಿ ‘ಶಿವಸೇನೆ’ ಸೇರಿದ ಉರ್ಮಿಳಾ

ಉದ್ಭವ್ ಠಾಕ್ರೆ ಸಮ್ಮುಖದಲ್ಲಿ ‘ಶಿವಸೇನೆ’ ಸೇರಿದ ಉರ್ಮಿಳಾ
ಉದ್ಭವ್ ಠಾಕ್ರೆ ಸಮ್ಮುಖದಲ್ಲಿ ‘ಶಿವಸೇನೆ’ ಸೇರಿದ ಉರ್ಮಿಳಾ

ನವದೆಹಲಿ, ಡಿ 1(ಯುಎನ್ಐ) ಸಿನಿಮಾದಿಂದ ರಾಜಕೀಯ ಪ್ರವೇಶಿಸಿದ್ದ ಬಾಲಿವುಡ್ ನಾಯಕಿ ನಟಿ ಉರ್ಮಿಳಾ ಮಾತೋಂಡ್ಕರ್ ಮಂಗಳವಾರ ಶಿವಸೇನೆ ಪಕ್ಷ ಸೇರ್ಪಡೆಗೊಂಡರು. ಪಕ್ಷದ ಪರಮೋಚ್ಛನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಉರ್ಮಿಳಾ ಶಿವಸೇನೆ ಪಕ್ಷವನ್ನು ಅಧಿಕೃತ ಸೇರ್ಪಡೆಗೊಂಡರು.

ಪ್ರಸ್ತುತ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಮೈತ್ರಿಕೂಟ ಸರ್ಕಾರದ ಪ್ರಮುಖ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಉರ್ಮಿಳಾ ಮಾತೋಂಡ್ಕರ್ ಕಳೆದ ವರ್ಷ ರಾಜೀನಾಮೆ ನೀಡಿದ್ದರು.

2019 ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉರ್ಮಿಳಾ ಸ್ಪರ್ಧಿಸಿ ಸೋತಿದ್ದರು. ಪಕ್ಷದ ನಾಯಕರ ಅಸಹಕಾರ, ಸ್ವಾರ್ಥದಿಂದಾಗಿ ತಾವು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಅಸಮಧಾನ ವ್ಯಕ್ತಪಡಿಸಿ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಉರ್ಮಿಳಾ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಶಿವಸೇನೆಗೆ ಉರ್ಮಿಳಾ ಸೇರ್ಪಡೆಗೆ ಪಕ್ಷದ ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಸಂತಸ ವ್ಯಕ್ತಪಡಿಸಿದ್ದಾರೆ. ಆಕೆ ಇನ್ನೂ ಶಿವಸೈನಿಕೆಯಾಗಲಿದ್ದು, ಆಕೆಯ ಆಗಮನದೊಂದಿಗೆ ಪಕ್ಷದ ಮಹಿಳಾ ವಿಭಾಗವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುಎನ್ಐ ಕೆವಿಆರ್ 1510

.

More News
ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

20 Jan 2021 | 3:56 PM

ನವದೆಹಲಿ, ಜ 20(ಯುಎನ್ಐ)- ಸ್ವಯಂ ಘೋಷಿತ ಆಧ್ಯಾತ್ಮಿಕ ಗುರುಗಳು ನಡೆಸುತ್ತಿರುವ ಆಶ್ರಮಗಳ ವಿರುದ್ಧ ಕ್ರಮ ಜರುಗಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಖಟ್ಲೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

 Sharesee more..