Friday, Dec 4 2020 | Time 05:02 Hrs(IST)
National Share

ಎಚ್ ಐ ಎಲ್ ಕಂಪನಿಯ ಉತ್ಪಾದನಾ ಸಾಧನೆಗೆ ಸದಾನಂದಗೌಡ ಪ್ರಶಂಸೆ

ವದೆಹಲಿ, ಅ 22 [ಯುಎನ್ಐ] ಮೆಲಾಥಿಯನ್ ಉತ್ಪಾದನೆ ಹೆಚ್ಚಳ ಮಾಡುವ ಮೂಲಕ ಅದ್ಭುತ ಸಾಧನೆ ಮಾಡಿರುವ ಎಚ್ಐಎಲ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅಭಿನಂದಿಸಿದ್ದಾರೆ.
ಎಚ್ ಐ ಎಲ್ (ಇಂಡಿಯಾ) ಲಿಮಿಟೆಡ್ ಕಂಪನಿಯು ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ಎಚ್ಐಎಲ್ ಕಂಪನಿಯು 2020-21ನೇ ಸಾಲಿನ ಮೊದಲ ಎರಡು ತ್ರೈಮಾಸಿಕ ಅವಧಿಯಲ್ಲಿ ಹಿಂದೆಂದಿಗಿಂತ ಅಧಿಕ ಪ್ರಮಾಣದ `ಮೆಲಾಥಿಯನ್ ಟೆಕ್ನಿಕಲ್’ ಕ್ರಿಮಿನಾಶಕವನ್ನು ಉತ್ಪಾದಿಸಿ, ದಾಖಲೆ ನಿರ್ಮಿಸಿದೆ.
ಹಣ್ಣು, ತರಕಾರಿ ಸೇರಿದಂತೆ ನಾನಾ ಕೃಷಿ ಬೆಳೆಗಳಿಗೆ ತಗುಲುವ ಮಿಡತೆ ಸೇರಿ ವಿವಿಧ ಕೀಟ ಬಾಧೆಗಳನ್ನು ನಿಯಂತ್ರಣಕ್ಕೆ ತರಲು `ಆರ್ಗ್ಯಾನೊ ಫಾಸ್ಪರಸ್’ ರಾಸಾಯನಿಕ ಆಧರಿತ ಮೆಲಾಥಿಯನ್ ಕ್ರಿಮಿನಾಶಕವನ್ನು ಕೃಷಿ ವಲಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕೋವಿಡ್-19 ನಿರ್ಬಂಧಗಳ ಹೊರತಾಗಿಯೂ, ಎಚ್ಐಎಲ್ ಕಂಪನಿಯು ಪ್ರಸಕ್ತ ಸಾಲಿನ ಮೊದಲ 6 ತಿಂಗಳಲ್ಲಿ 530.10 ಮೆಟ್ರಿಕ್ ಟನ್ `ಮೆಲಾಥಿಯನ್ ಟಿಕ್ನಿಕಲ್’ ಕ್ರಿಮಿನಾಶಕ ಉತ್ಪಾದಿಸಿದೆ.
ಕಳೆದ ಆರ್ಥಿಕ ಸಾಲಿನ ಇದೇ ಅವಧಿಯಲ್ಲಿ ಕಂಪನಿಯು 375.5 ಮೆಟ್ರಿಕ್ ಟನ್ ಮೆಲಾಥಿಯನ್ ಉತ್ಪಾದಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇ 41 ರಷ್ಟು ಪ್ರಗತಿ ದಾಖಲಾಗಿದೆ. ಈ ವರ್ಷದ ಮೊದಲ 2 ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು ಮೆಲಾಥಿಯನ್ ಕ್ರಿಮಿನಾಶಕವನ್ನು ಗರಿಷ್ಠ ಪ್ರಮಾಣದಲ್ಲಿ ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ.
ಎಚ್ಐಎಲ್ ಕಂಪನಿಯು ಕೃಷಿ ಸಚಿವಾಲಯದ ಮಿಡತೆ ಹಾವಳಿನಿಯಂತ್ರಣ ಕಾರ್ಯಕ್ರಮ, ದೇಶಾದ್ಯಂತ ಮುನಿಸಿಪಲ್ ಕಾರ್ಪೊರೇಷನ್ ಗಳು ಮತ್ತು ನಾನಾ ಸಂಸ್ಥೆಗಳಿಗೆ ಈ ಕ್ರಿಮಿನಾಶಕವನ್ನು ಮಿಡತೆಗಳ ಹಾವಳಿ ನಿಯಂತ್ರಿಸುವ ಉದ್ದೇಶಕ್ಕಾಗಿ ಪೂರೈಸುತ್ತಾ ಬಂದಿದೆ.
ಗಮನಾರ್ಹ ಸಂಗತಿ ಎಂದರೆ, ಕಂಪನಿಯು ಮೊದಲೆರಡು ತ್ರೈಮಾಸಿಕ ಅವಧಿಯಲ್ಲಿ ಇರಾನ್ ಗೆ `ಮೆಲಾಥಿಯನ್ ಟೆಕ್ನಿಕಲ್’ ಕ್ರಿಮಿನಾಶಕವನ್ನು ರಫ್ತು ಮಾಡಿದೆ. ವಿದೇಶಾಂಗ ಸಚಿವಾಲಯದ ಮೂಲಕ ಸರಕಾರದ ಮಟ್ಟದಲ್ಲಿ ಈ ರಫ್ತು ವಹಿವಾಟು ನಡೆದಿದೆ. ವಿವಿಧ ಸೂತ್ರೀಕರಣ ಮತ್ತು ತಾಂತ್ರಕ ಆಧರಿತ ಕೀಟನಾಶಕಗಳ ಉತ್ಪಾದನೆಯಲ್ಲಿ ಎಚ್ಐಎಲ್ ತೊಡಗಿಸಿಕೊಂಡಿದೆ. ಕೋವಿಡ್-19 ಸೋಂಕು ವ್ಯಾಪಿಸಿದ ಬೆಳವಣಿಗೆಗಳ ಹೊರತಾಗಿಯೂ ಕಂಪನಿ, ಏಪ್ರಿಲ್ 20ರಿಂದ ಸೀಮಿತ ನೌಕರ ಪಡೆ ಮತ್ತು ಪೂರೈಕೆ ಸರಪಳಿಯ ಅಸ್ತವ್ಯಸ್ತದ ನಡುವೆ ಉತ್ಪಾದನೆ ಆರಂಭಿಸಿದೆ.
ಎಲ್ಲಾ ಅಡೆತಡೆಗಳ ನಡುವೆ ಕಂಪನಿಯು ವಿವಿಧ ಸರಕಾರಗಳ ನಾನಾ ಕೀಟನಾಶಕ ನಿಯಂತ್ರಣ ಕಾರ್ಯಕ್ರಮಗಳಿಗೆ ಔಷಧಗಳನ್ನು ಪೂರೈಸುವ ಬದ್ಧತೆಯನ್ನು ಮುಂದುವರಿಕೊಂಡು ಬಂದಿದೆ. ಜತೆಗೆ, ದೇಶದ ಕೃಷಿ ವಲಯಕ್ಕೆ ಮತ್ತು ರೈತಾಪಿ ಬಂಧುಗಳಿಗೆ ಕೃಷಿ ರಾಸಾಯನಿಕಗಳನ್ನು ನಿರಂತರವಾಗಿ ಒದಗಿಸುತ್ತಾ ಬಂದಿದೆ.
ಯುಎನ್ಐ ವಿಎನ್ 1544
More News
ಸೂಕ್ತ ಸಮಯದಲ್ಲಿ ಭಾರತ, ಚೀನಾ ನಡುವೆ ಕಮಾಂಡರ್‌ ಹಂತ ಸಭೆ; ವಿದೇಶಾಂಗ ಸಚಿವಾಲಯ

ಸೂಕ್ತ ಸಮಯದಲ್ಲಿ ಭಾರತ, ಚೀನಾ ನಡುವೆ ಕಮಾಂಡರ್‌ ಹಂತ ಸಭೆ; ವಿದೇಶಾಂಗ ಸಚಿವಾಲಯ

03 Dec 2020 | 8:45 PM

ನವದೆಹಲಿ, ಡಿ 3 (ಯುಎನ್ಐ) ಶೀಘ್ರದಲ್ಲೇ ಭಾರತ ಮತ್ತು ಚೀನಾ ಸೇನೆಯ ಹಿರಿಯ ಕಮಾಂಡರ್‌ಗಳ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

 Sharesee more..