Monday, Sep 16 2019 | Time 19:36 Hrs(IST)
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
 • ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ: ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ
 • ಐಸಿಸಿ ಟೆಸ್ಟ್ ಶ್ರೇಯಾಂಕ: ಸ್ಮಿತ್‌ಗೆ ಅಗ್ರಸ್ಥಾನ, ದ್ವಿತೀಯ ಸ್ಥಾನದಲ್ಲಿ ಕೊಹ್ಲಿ
 • ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾ ಬಂಧನ: ಕೇಂದ್ರ ಸರ್ಕಾರ
 • ರೈಲು ನಿಲ್ದಾಣಗಳ ಮೇಲಿನ ಯಾವುದೇ ದಾಳಿ ತಡೆಯಲು ಹೆಚ್ಚಿನ ಭದ್ರತಾ ವ್ಯವಸ್ಥೆ
 • “ಶಕುಂತಲಾ ದೇವಿ” ಚಿತ್ರೀಕರಣ ಆರಂಭ
Karnataka Share

ಎತ್ತಿನ ಹೊಳೆ: ಹಸಿರು ನ್ಯಾಯಪೀಠದ ಹಸಿರು ನಿಶಾನೆ - ವೀರಪ್ಪ ಮೊಯ್ಲಿ ಸ್ವಾಗತ

ಎತ್ತಿನ ಹೊಳೆ: ಹಸಿರು ನ್ಯಾಯಪೀಠದ ಹಸಿರು ನಿಶಾನೆ - ವೀರಪ್ಪ ಮೊಯ್ಲಿ ಸ್ವಾಗತ
ಎತ್ತಿನ ಹೊಳೆ: ಹಸಿರು ನ್ಯಾಯಪೀಠದ ಹಸಿರು ನಿಶಾನೆ - ವೀರಪ್ಪ ಮೊಯ್ಲಿ ಸ್ವಾಗತ

ಬೆಂಗಳೂರು, ಮೇ 26 [ಯುಎನ್ಐ] ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ ಹಸಿರು ನಿಶಾನೆ ತೋರಿರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಬಯಲು ಸೀಮೆ ಪ್ರದೇಶಕ್ಕೆ ನ್ಯಾಯ ಒದಗಿಸಿದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾಮಗಾರಿಯನ್ನು ಚುರುಕುಗೊಳಿಸಿ 7 ಜಿಲ್ಲೆಗಳ ನೀರಿನ ಬವಣೆಯನ್ನು ನಿವಾರಿಸಲು ಕ್ರಮಕೈಗೊಳ್ಳಬೇಕು. ಈ ಯೋಜನೆ ಬಗ್ಗೆ ಕರಾವಳಿ ಜನರು ಆತಂಕಪಡುವ ಅಗತ್ಯವಿಲ್ಲ. ಯೋಜನೆ ಜಾರಿಯಾಗುವುದರಿಂದ ಕರಾವಳಿಯ ಜನರಿಗೆ ತೊಂದರೆಯಾಗುವುದಿಲ್ಲ. ಇಷ್ಟಕ್ಕೂಇದು ನೇತ್ರಾವತಿ ತಿರುವು ಯೋಜನೆ ಅಲ್ಲ, ಸಕಲೇಶಪುರದ ಕೆಲವು ಹಳ್ಳಿಗಳಿಂದ ಮಳೆಗಾಲದಲ್ಲಿ 4 ತಿಂಗಳ ಕಾಲ ಸಂಗ್ರಹವಾಗುವ ನೀರು ಸಮುದ್ರ ಸೇರುವ ಬದಲು ಕುಡಿಯುವ ನೀರಿಗಾಗಿ ಬಳಕೆ ಮಾಡುವುದರಿಂದ ಪರಿಸರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡರು.

ಎತ್ತಿನ ಹೊಳೆ ಯೋಜನೆಯ ಜೊತೆಗೆ ಪಶ್ಚಿಮ ವಾಹಿನಿ ಯೋಜನೆಯನ್ನೂ ರಾಜ್ಯಸರ್ಕಾರ ಅನುಷ್ಠಾನಗೊಳಿಸಬೇಕು. ಇದರಿಂದ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಕರಾವಳಿಯಿಂದ ಸಮುದ್ರಕ್ಕೆ ಸೇರುವ ಎರಡು ಸಾವಿರ ಟಿಎಂಸಿ ನೀರನ್ನು ಉಪಯೋಗಿಸಿಕೊಳ್ಳಲು ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ವೀರಪ್ಪ ಮೊಯ್ಲಿ ಸಲಹೆ ಮಾಡಿದರು.

ಯುಎನ್ಐ ವಿಎನ್ 1654

More News
ಬಿದಿರು ಉತ್ಸವ

ಬಿದಿರು ಉತ್ಸವ

16 Sep 2019 | 7:25 PM

ಬೆಂಗಳೂರು, ಸೆ 16(ಯುಎನ್‍ಐ) ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

 Sharesee more..
ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ: ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ

ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ: ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ

16 Sep 2019 | 7:22 PM

ಬೆಂಗಳೂರು, ಸೆ16(ಯುಎನ್‍ಐ) ಉಪಚುನಾವಣೆಗೆ ಕಾಂಗ್ರೆಸ್‍ ಜೊತೆ ಮೈತ್ರಿಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ವಿಧಾನಸಭೆ ಮಧ್ಯಂತರ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

 Sharesee more..