Monday, Mar 1 2021 | Time 03:59 Hrs(IST)
Sports Share

ಎಬಿಡಿ, ಕೊಹ್ಲಿಯನ್ನು ಉಳಿಸಿಕೊಂಡ ಆರ್ ಸಿಬಿ

ಎಬಿಡಿ, ಕೊಹ್ಲಿಯನ್ನು ಉಳಿಸಿಕೊಂಡ ಆರ್ ಸಿಬಿ
ಎಬಿಡಿ, ಕೊಹ್ಲಿಯನ್ನು ಉಳಿಸಿಕೊಂಡ ಆರ್ ಸಿಬಿ

ಬೆಂಗಳೂರು, ಜ.20 (ಯುಎನ್ಐ) ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರನ್ನು ಮುಂದಿನ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡಿದೆ.



ಕ್ರಿಸ್ ಮೋರಿಸ್, ಆರನ್ ಫಿಂಚ್ ಮತ್ತು ಡೇಲ್ ಸ್ಟೇನ್ ಅವರನ್ನು ಬಿಡುಗಡೆ ಮಾಡಿದೆ. ಐಪಿಎಲ್ 2021 ಋತುವಿನಿಂದ ಹೊರಗುಳಿಯಲು ಸ್ಟೇನ್ ಈಗಾಗಲೇ ನಿರ್ಧರಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ಬೆಂಗಳೂರಿನಲ್ಲಿ 35 ಕೋಟಿ ಏಳು ಲಕ್ಷ ರೂಪಾಯಿಗಳಿದ್ದು, ಗರಿಷ್ಠ ನಾಲ್ಕು ವಿದೇಶಿಯರು ಸೇರಿದಂತೆ ಒಟ್ಟು 13 ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.



ಬಿಡುಗಡೆಯಾದ ಆಟಗಾರರು:



ಕ್ರಿಸ್ ಮೋರಿಸ್, ಆರನ್ ಫಿಂಚ್, ಮೊಯಿನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್ ಮತ್ತು ಪಾರ್ಥಿವ್ ಪಟೇಲ್



ಉಳಿಸಿಕೊಂಡ ಆಟಗಾರರು:



ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ತ ಪಡಿಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಜೋಶೆಫ್ ಫಿಲಿಪ್, ಪವನ್ ದೇಶಪಾಂಡೆ, ಶಹಾಬಾದ್ ಅಹ್ಮದ್, ಆಡಮ್ ಜಂಪಾ ಮತ್ತು ಕೇನ್ ರಿಚರ್ಡ್ಸನ್.



ಯುಎನ್ಐ ವಿಎನ್ಎಲ್ 2020

More News

ವಿಜಯ್ ಹಜಾರೆ: ಸಮರ್ಥ್, ದೇವದತ್ ಶತಕದ ವೈಭವ

28 Feb 2021 | 6:30 PM

 Sharesee more..

ಶೂಟಿಂಗ್ ಸ್ಕೀಟ್: ಭಾರತಕ್ಕೆ ಕಂಚು

28 Feb 2021 | 6:08 PM

 Sharesee more..
ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅಲಭ್ಯ

ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅಲಭ್ಯ

27 Feb 2021 | 9:14 PM

ನವದೆಹಲಿ, ಫೆ.27 (ಯುಎನ್ಐ)- ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ.

 Sharesee more..

ಶ್ರೇಯಸ್ ಶತಕ: ಮುಂಬೈ ಅಗ್ರ ಸ್ಥಾನ ಭದ್ರ

27 Feb 2021 | 8:50 PM

 Sharesee more..