InternationalPosted at: Jan 21 2021 4:34PM Shareಎರಡನೇ ಪ್ರಪಂಚ ಯುದ್ಧದಲ್ಲಿ ಸಾವನ್ನಪ್ಪಿದವರಿಗಿಂತ ಹೆಚ್ಚು..!ವಾಷಿಂಗ್ಟನ್, ಜ 21(ಯುಎನ್ಐ) ಕೊರೊನಾ ವೈರಸ್ ದಾಳಿಗೆ ಅಗ್ರರಾಷ್ಟ್ರ ಅಮೆರಿಕಾ ಇನ್ನಲ್ಲದಂತೆ ತತ್ತರಿಸಿಹೋಗಿದೆ. ವಿಶ್ವದಲ್ಲೇ ಸೋಂಕಿನ ಅತಿ ಹೆಚ್ಚು ತೀವ್ರತೆ ಹೊಂದಿರುವ ಅಮೆರಿಕಾದಲ್ಲಿ, ಕೊರೊನಾ ಸಾವಿನ ಸಂಖ್ಯೆ ಎರಡನೇ ಮಹಾಯುದ್ಧದಲ್ಲಿ ಮರಣ ಹೊಂದಿದ ಅಮೆರಿಕನ್ನರ ಸಂಖ್ಯೆಯನ್ನು ಮೀರಿದೆ. ಆದರೂ, ಅಮೆರಿಕಾದಲ್ಲಿ ಕೊರೊನಾ ಸಾಂಕ್ರಾಮಿಕದ ಬೆದರಿಕೆ ಇನ್ನು ಇಳಿಮುಖಗೊಂಡಿಲ್ಲ .. ಮುಂದಿನ ದಿನಗಳಲ್ಲಿ ಸಾಂಕ್ರಾಮಿಕದ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಮೆರಿಕಾ ಹೊಸ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಮೊದಲ ದಿನ ಶ್ವೇತ ಭವನದಲ್ಲಿ ಕೊರೊನಾ ವೈರಸ್ ವಿರುದ್ದ ಹೋರಾಟದ ಕಾರ್ಯತಂತ್ರ ಕುರಿತು ಜೋ ಬೈಡನ್ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಪ್ರಕಾರ, ಅಮೆರಿಕಾದಲ್ಲಿ 4,05,400 ಮಂದಿ ಸಾವನ್ನಪ್ಪಿದ್ದಾರೆ. ಇದು ಎರಡನೆಯ ಮಹಾಯುದ್ಧದಲ್ಲಿ ಮರಣ ಹೊಂದಿದ ಅಮೆರಿಕನ್ನರ ಸಂಖ್ಯೆ (4,05,399) ಕ್ಕಿಂತ ಹೆಚ್ಚು. ಪ್ರಸ್ತುತ ಕೊರೊನಾ ತೀವ್ರತೆ ಹೆಚ್ಚಿನ ಪ್ರಮಾಣದಲ್ಲಿಯೇ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಅಪಾಯಕಾರಿ ಸಮಯಕ್ಕೆ ಕಾಲಿಡುತ್ತಿದ್ದೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಈ ಕರಾಳ ಸಮಯವನ್ನು ಎದುರಿಸಬೇಕಾಗಿದೆ "ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕಾ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು. ಇನ್ನೂ ಗುರುವಾರ ನಡೆಯಲಿರುವ ಡಬ್ಲ್ಯುಎಚ್ ಓ ಮಂಡಳಿಯ ಕಾರ್ಯಕಾರಿ ಸಭೆಯಲ್ಲಿ ಆಂಥೋನಿ ಫೌಚಿ ನೇತೃತ್ವದ ತಂಡ ಭಾಗವಹಿಸಲಿದೆ ಎಂದು ಬೈಡೆನ್ ಹೇಳಿದ್ದಾರೆ.ಇನ್ನೂ ಕೊರೊನಾ ವೈರಸ್ ವಿರುದ್ದ ಸಮರ ಸಾರಲು ಸಾಧ್ಯವಾದಷ್ಟು ಹೆಚ್ಚು ಜನರಿಗೆ ಲಸಿಕೆ ನೀಡಲು ಬೈಡೆನ್ ಸರ್ಕಾರ ತಯಾರಿ ನಡೆಸುತ್ತಿದೆ. ಕೇವಲ ನೂರು ದಿನಗಳಲ್ಲಿ ಸುಮಾರು 10 ಕೋಟಿ ಜನರಿಗೆ ಲಸಿಕೆ ವಿತರಿಸುವ ಮೂಲಕ ವೈರಸ್ ಹರಡುವುದನ್ನು ತಡೆಯಲು ವ್ಯೂಹ ರಚಿಸಲಾಗುತ್ತಿದೆ. ಇದರ ಭಾಗವಾಗಿ, ಅಮೆಜಾನ್ನಂತಹ ಸಂಸ್ಥೆಗಳು ಲಸಿಕೆ ಪೂರೈಸಲು ಬೇಕಾದ ಸಾಗಾಣಿಕೆ ವ್ಯವಸ್ಥೆ ಒದಗಿಸಲು ಮುಂದೆಬಂದಿವೆ. ಏತನ್ಮಧ್ಯೆ, ವಿಶ್ವಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 9 ಕೋಟಿ 60 ಲಕ್ಷ ತಲುಪಿದ್ದು.. ಈ ಪೈಕಿ 20 ಲಕ್ಷ 75 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕಾ ದೇಶವೊಂದರಲ್ಲೇ ಅತ್ಯಧಿಕ 2 ಕೋಟಿ 44 ಲಕ್ಷ ಮಂದಿಗೆ ವೈರಸ್ ತಗುಲಿದ್ದು, ನಾಲ್ಕು ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಬ್ರಿಟನ್ನಲ್ಲಿ ವರದಿಯಾಗಿರುವ ರೂಪಾಂತರಿ ವೈರಸ್ ಈಗಾಗಲೇ 60 ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದ್ದು. ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಹೊಸ ರೀತಿಯ ಕೊರೊನಾ ವೈರಸ್ ಸುಮಾರು 23 ದೇಶಗಳಿಗೆ ಹರಡಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಲಸಿಕೆ ವಿತರಣೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ವಿಶ್ವದ ರಾಷ್ಟ್ರಗಳು ಕಾರ್ಯ ಪ್ರವೃತ್ತವಾಗಿವೆ.ಯುಎನ್ಐ ಕೆವಿಆರ್ 1630