Tuesday, Sep 29 2020 | Time 13:50 Hrs(IST)
 • ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸಲು ಮಮತಾ ಕಿಚನ್ ರೆಡಿ
 • ಪಾಕ್ ರಡಾರ್ ನಲ್ಲಿ ಶ್ರೀನಗರ: ದಾರಿ ತಪ್ಪಿರುವ ಯುವಕರನ್ನು ವಾಪಸ್ ಕರೆ ತರಲು ಕ್ರಮ- ಡಿಜಿಪಿ ದಿಲ್‍ಬಾಗ್ ಸಿಂಗ್
 • ಗಾಂಜಾ ಮಾರಾಟ ಯತ್ನಿಸುತ್ತಿದ್ದವರ ಬಂಧನ
 • ಪೂಜಿಸುತ್ತಿದ್ದ ಕೃಷಿ ಉಪಕರಣಗಳಿಗೆ ಬೆಂಕಿ ಹಚ್ಚುವುದು ರೈತರನ್ನು ಅವಮಾನಿಸಿದಂತೆ: ಮೋದಿ
 • ಬಾಬ್ರಿ ಮಸೀದಿ ದ್ವಂಸ ಪ್ರಕರಣ: ನಾಳೆ ಅಂತಿಮ ತೀರ್ಪು, ಭದ್ರತೆ ಬಿಗಿ ಗೊಳಿಸಲು ರಾಜ್ಯಗಳಿಗೆ ಕೇಂದ್ರ ಆದೇಶ
 • ಮೂವರು ದರೋಡೆಕೋರರು ಬಂಧನ
 • ದೇಶದಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
National Share

ಎಲ್‌ಎಸಿ: ಯಥಾಸ್ಥಿತಿಯಲ್ಲಿನ ಬದಲಾವಣೆಯನ್ನು ಭಾರತ ಸ್ವೀಕರಿಸುವುದಿಲ್ಲ-ರಾಜನಾಥ್ ಸಿಂಗ್

ಎಲ್‌ಎಸಿ: ಯಥಾಸ್ಥಿತಿಯಲ್ಲಿನ ಬದಲಾವಣೆಯನ್ನು ಭಾರತ ಸ್ವೀಕರಿಸುವುದಿಲ್ಲ-ರಾಜನಾಥ್ ಸಿಂಗ್
ಎಲ್‌ಎಸಿ: ಯಥಾಸ್ಥಿತಿಯಲ್ಲಿನ ಬದಲಾವಣೆಯನ್ನು ಭಾರತ ಸ್ವೀಕರಿಸುವುದಿಲ್ಲ-ರಾಜನಾಥ್ ಸಿಂಗ್

ನವದೆಹಲಿ, ಸೆ 15 (ಯುಎನ್‌ಐ) ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದೊಡನೆ ವಾಸ್ತವಿಕ ಗಡಿ ರೇಖೆಯ ಯಥಾಸ್ಥಿತಿಯಲ್ಲಿನ ಬದಲಾವಣೆಯನ್ನು ಭಾರತ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಲಡಾಕ್‌ ಗಡಿಯಲ್ಲಿನ ಉದ್ವಿಗ್ನತೆ ಹಾಗೂ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ಲೋಕಸಭೆಯಲ್ಲಿ ಹೇಳಿಕೆ ನೀಡಿದ ರಕ್ಷಣಾ ಸಚಿವರು, , ಈ ತಿಂಗಳ ಆರಂಭದಲ್ಲಿ ಮಾಸ್ಕೋದಲ್ಲಿ ತಮ್ಮ ಚೀನಾದ ಸಹವರ್ತಿಯೊಂದಿಗೆ ನಡೆದ ಸಭೆಯಲ್ಲಿ ಭಾರತದ ಸಾರ್ವಭೌಮತ್ವದ ಬಗ್ಗೆ ಸ್ಪಷ್ಟಪಡಿಸಿದ್ದನ್ನು ಹಂಚಿಕೊಂಡಿದ್ದಾರೆ.

ಚೀನಾದ ಎಲ್ಲಾ ಹುನ್ನಾರಗಳನ್ನು ಸೋಲಿಸಲು ನಮ್ಮ ರಕ್ಷಣಾ ಪಡೆಗಳು ಸರ್ವ ಸನ್ನದ್ಧವಾಗಿವೆ. ಭಾರತದ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ದೇಶದ ಸಾರ್ವಭೌಮತೆ ಮೇಲೆ ದಾಳಿ ಮಾಡಲು ಯಾರಿಗೂ ಬಿಡುವುದಿಲ್ಲ ಎಂದು ಹೇಳಿದರು.

ಜೂನ್ 15 ರಂದು ಚೀನಾದ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆ ನೆನಪಿಸಿಕೊಂಡ ಅವರು, ಗಾಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯಲ್ಲಿ ನಮ್ಮ ಧೈರ್ಯಶಾಲಿ ಸೈನಿಕರು ಅತ್ಯುನ್ನತ ತ್ಯಾಗ ಮಾಡಿದ್ದು, ಶತ್ರು ಪಾಳಯಕ್ಕೆ ಸಾಕಷ್ಟು ನಷ್ಟವನ್ನುಂಟುಮಾಡಿದ್ದಾರೆ ಎಂದು ಹೇಳಿದರು.

ಗಡಿ ಪ್ರದೇಶಗಳನ್ನು ಸುರಕ್ಷಿತವಾಗಿಡುವಲ್ಲಿ ಭಾರತದ ದೃಢ ನಿಶ್ಚಯದ ಬಗ್ಗೆ ಯಾವುದೇ ಸಂದೇಹವಿಲ್ಲ, ಶಾಂತಿಯುತ ವಿಧಾನಗಳು ಮತ್ತು ಸಂಭಾಷಣೆಯ ಮೂಲಕ ಭಾರತವು ನಿರ್ಣಯವನ್ನು ಬಯಸಿದೆ ಎಂದರು.

ಎಲ್‌ಎಸಿಯನ್ನು ಗೌರವಿಸುವುದು, ಯಥಾಸ್ಥಿತಿಯನ್ನು ಬದಲಾಯಿಸಬಾರದು ಮತ್ತು ಎಲ್ಲಾ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಗೌರವಿಸಬೇಕು ಎಂಬ ಮೂರು ಪ್ರಮುಖ ತತ್ವಗಳೊಂದಿಗೆ ನಿರ್ಣಯಕ್ಕೆ ಬರಲು ಸಿದ್ಧ ಎಂದಿದ್ದಾರೆ.

ಯುಎನ್ಐ ಎಸ್‍ಎ 1630