NationalPosted at: Nov 22 2019 10:24PM Shareಎಲೆಕ್ಟ್ರಾನಿಕ್ ಸಿಗರೇಟ್ ಉತ್ಪಾದನೆ, ಮಾರಾಟ ನಿಷೇಧ ಮಸೂದೆ: ಲೋಕಸಭೆಯಲ್ಲಿ ಮಂಡನೆನವದೆಹಲಿ, ನವೆಂಬರ್ 22 (ಯುಎನ್ಐ) ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಲೆಕ್ಟ್ರಾನಿಕ್ ಸಿಗರೆಟ್ಗಳ , ಉತ್ಪಾದನೆ, ಆಮದು, ರಫ್ತು, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು ನಿಷೇಧಿಸುವ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ (ಉತ್ಪಾದನೆ, , ಆಮದು, ರಫ್ತು, ಸಾರಿಗೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು) ಮಸೂದೆ, 2019 ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ್ ವರ್ಧನ್ ಅವರು ಸದನದಲ್ಲಿ ಮಂಡಿಸಿದರು. ಮಸೂದೆಯು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧವನ್ನು (ಉತ್ಪಾದನೆ, ಉತ್ಪಾದನೆ, ಆಮದು,ರಫ್ತು, ಸಾರಿಗೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು ನಿಷೇಧಿಸುವ ಸುಗ್ರೀವಾಜ್ಞೆ, 2019 ಯನ್ನುಹಿಂದಕ್ಕೆ ಪಡೆಯಲಿದೆ ಈ ಸುಗ್ರಿವಾಜ್ಞೆಯನ್ನು ಸೆಪ್ಟೆಂಬರ್ 18 ರಂದು ಘೋಷಣೆ ಮಾಡಲಾಗಿತ್ತು.ಎಲೆಕ್ಟ್ರಾನಿಕ್ ಸಿಗರೆಟ್ಗಳ ಪ್ಯಾಕೇಜ್ಗಳನ್ನು ಹೊಂದಿರುವ ಆವರಣಕ್ಕೆ ಪ್ರವೇಶಿಸಲು ಮತ್ತು ಹುಡುಕಲು ಮತ್ತು ಅಂತಹ ಸ್ಟಾಕ್ಗಳು ಅಥವಾ ಅದರ ಯಾವುದೇ ಘಟಕಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳುವ ಅಧಿಕೃತ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲು ಮಸೂದೆ ಸಹಕಾರಿಯಾಗಲಿದೆ . ಕಾಯಿದೆಯ ಉಲ್ಲಂಘನೆ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸುವ ಅವಕಾಶವನ್ನೂ ಹೊಂದಿದೆ. ಯುಎನ್ಐ ಕೆಎಸ್ಆರ್ 2225