Friday, Apr 10 2020 | Time 09:38 Hrs(IST)
  • ನ್ಯೂಜಿಲೆಂಡ್ ನಲ್ಲಿ ಕೊರೊನಾ ಸೋಂಕಿನ ಎರಡನೇ ಸಾವಿನ ಪ್ರಕರಣ
  • ಅಸ್ಸಾಂನಲ್ಲಿ ಕೊರೊನಾ ಸೋಂಕಿನ ಮೊದಲ ಸಾವು
  • ಕೊರೊನಾ ಸಾಂಕ್ರಾಮಿಕ ರೋಗ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮೊದಲ ಸಭೆ
  • ಒಪೆಕ್ ಒಪ್ಪಂದದಿಂದ ಹಿಂದೆ ಸರಿದ ಮೆಕ್ಸಿಕೋ
  • ಒಪೆಕ್ ಮಾತುಕತೆ ಶುಕ್ರವಾರ ಮುಂದುವರಿಕೆ
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Special Share

ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ..?

ನವದೆಹಲಿ,ಫೆ ೨೬ (ಯುಎನ್‌ಐ) ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಖರೀದಿಯ ರೇಸ್ ಗೆ ಅದಾನಿ ಗುಂಪಿನ ಉದ್ಯಮ ಕೂಡಾ ಹೊಸದಾಗಿ ಸೇರಿಕೊಂಡಿದೆ.
ಬಿಡ್ಡಿಂಗ್ ದಾಖಲೆ ಪತ್ರಗಳನ್ನು ಅಧ್ಯಯನ ನಡೆಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕಂಪನಿ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಏರ್ ಇಂಡಿಯಾ ಖರೀದಿ ಅದಾನಿ ಗ್ರೂಪ್ ನ ಆಸಕ್ತಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ, ಏರ್ ಇಂಡಿಯಾ ಮೇಲಿರುವ ಸಾಲ, ಅನುಭವಿಸುತ್ತಿರುವ ನಷ್ಟವನ್ನು ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ನಡೆಸಿದ ನಂತರ ಬಿಡ್ ನಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೆ? ಎಂಬುದು ನಿರ್ಧಾರವಾಗಲಿದೆ. ಒಂದು ಪಕ್ಷ ಬಿಡ್ ನಲ್ಲಿ ಪಾಲ್ಗೊಂಡಿದ್ದೇ ಆದರೆ, ಟಾಟಾ ಗ್ರೂಪ್, ಹಿಂದೂಜಾ ಕುಟುಂಬ, ಇಂಡಿಗೊ ಮತ್ತು ಅಮೆರಿಕಾ ಮೂಲದ ಇಂಟರಪ್ಸ್ ಫಂಡ್‌ನೊಂದಿಗೆ ಅದಾನಿ ಗುಂಪು ಪೈಪೋಟಿ ನಡೆಸಬೇಕಾಗುತ್ತದೆ. ಎಎಐ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಅಥವಾ ವಿಮಾನಯಾನ ಹೊಂದಿರುವ ಉದ್ಯಮ ಗುಂಪುಗಳು . ಶೇ. ೨೭ ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿರಬಾರದು. ಈಗಾಗಲೇ ಆರು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್‌ಗೆ ಇದು ಅಡ್ಡಿಯಾಗುವ ನಿರೀಕ್ಷೆಯಿದೆ.
ಏರಿಂಡಿಯಾ ಬಿಡ್ಡಿಂಗ್ ನ ಮಾರ್ಚ್ ೧೭ ರ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಈ ವಾರ ನಡೆಯುವ ಅಂತರ ಸಚಿವಾಲಯ ಸಮಿತಿ ಸಭೆಯಲ್ಲಿ ಹೊಸ ಗಡುವಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.
ಯುಎನ್‌ಐ ಕೆವಿಆರ್ ೦೮ ೨೬
More News
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಭಾರತದ ತಕ್ಕ ಪ್ರತ್ಯುತ್ತರ

ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಭಾರತದ ತಕ್ಕ ಪ್ರತ್ಯುತ್ತರ

09 Apr 2020 | 10:18 PM

ಜಮ್ಮು, ಏ 9 (ಯುಎನ್ಐ) ಪಾಕಿಸ್ತಾನ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಗುರುವಾರ ಮತ್ತೆರಡು ಬಾರಿ ಕದನವಿರಾಮ ಉಲ್ಲಂಘಿಸಿದೆ.

 Sharesee more..
ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ಒಡಿಸ್ಸಾ ಸರ್ಕಾರ; ಜೂನ್ 17ರವರೆಗೆ ಶಿಕ್ಷಣ ಸಂಸ್ಥೆ ಬಂದ್‌

ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ಒಡಿಸ್ಸಾ ಸರ್ಕಾರ; ಜೂನ್ 17ರವರೆಗೆ ಶಿಕ್ಷಣ ಸಂಸ್ಥೆ ಬಂದ್‌

09 Apr 2020 | 3:51 PM

ಭುವನೇಶ್ವರ, ಏ.9 (ಯುಎನ್ಐ) ಒಡಿಸ್ಸಾ ಸರ್ಕಾರ ಕೋವಿಡ್‌ 19 ಲಾಕ್‌ಡೌನ್‌ ಅನ್ನು ಮತ್ತೆ ಏಪ್ರಿಲ್‌ 30ರವರೆಗೆ ವಿಸ್ತರಿಸಿದೆ. ಮಾತ್ರವಲ್ಲ ಏಪ್ರಿಲ್ 30ರವರೆಗೆ ವಿಮಾನ ಮತ್ತು ರೈಲು ಸೇವೆಯನ್ನು ಸ್ಥಗಿತಗೊಳಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

 Sharesee more..

J'khand records first COVID-19 death, positive cases reach 12

09 Apr 2020 | 9:53 AM

 Sharesee more..