Saturday, Nov 23 2019 | Time 05:15 Hrs(IST)
  • ಜಾರ್ಖಂಡ್: ಲತೇಹಾರ್‌ನಲ್ಲಿ ನಕ್ಸಲರೊಂದಿಗೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್‌ ಹುತಾತ್ಮ
  • ಆಸ್ಟ್ರೇಲಿಯಾದ ಇಬ್ಬರು ಸಚಿವರೊಂದಿಗೆ ಪೋಖ್ರಿಯಾಲ್‍ ದ್ವಿಪಕ್ಷೀಯ ಮಾತುಕತೆ
Sports Share

ಐಎಸ್ಎಲ್: ಅಂಕ ಹಂಚಿಕೊಂಡ ಬಿ.ಎಫ್.ಸಿ

ಬೆಂಗಳೂರು, ಅ.21 (ಯುಎನ್ಐ)- ಹಾಲಿ ಚಾಂಪಿಯನ್ ಬೆಂಗಳೂರು ಎಫ್.ಸಿ ಇಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ನಾರ್ತ್ ಈಸ್ಟ್ ವಿರುದ್ಧ ಡ್ರಾ ಸಾಧಿಸಿದ್ದು, ಅಂಕಗಳನ್ನು ಹಂಚಿಕೊಂಡಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿ.ಎಫ್.ಸಿ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿತು. ಪಂದ್ಯದಲ್ಲಿ ಬೆಂಗಳೂರು ತಂಡ ಸೊಗಸಾದ ಪಾಸ್ ಗಳನ್ನು ಮಾಡಿತು. 12ನೇ ನಿಮಿಷದಲ್ಲಿ ಬೆಂಗಳೂರು ತಂಡ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವಲ್ಲಿ ವಿಫಲವಾಯಿತು. 19ನೇ ನಿಮಿಷದಲ್ಲಿ ಸುನಿಲ್ ಛೆಟ್ರಿ ಗೋಲು ಬಾರಿಸುವ ಅವಕಾಶ ಹಾಳು ಮಾಡಿಕೊಂಡರು.

35ನೇ ನಿಮಿಷದಲ್ಲಿ ನಾರ್ತ್ ಈಸ್ಟ್ ತಂಡ ಸಹ ಗೋಲು ಬಾರಿಸುವ ಪ್ರಯತ್ನದಲ್ಲಿ ವಿಫಲವಾಯಿತು. ಈ ಅವಧಿಯಲ್ಲಿ ಎರಡೂ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು.

ಬೆಂಗಳೂರು ತಂಡದ ರಕ್ಷಣಾತ್ಮಕ ಆಟಕ್ಕೆ ಪೆಟ್ಟು ನೀಡಿ ಅಂಕಗಳಿಸುವ ನಾರ್ತ್ ಈಸ್ಟ್ ಆಸೆ ಫಲಿಸಲಿಲ್ಲ. ಕೊನೆಯ ಕ್ಷಣದವರೆಗೂ ಗೋಲು ಬಾರಿಸುವ ಯೋಜನೆ ಫಲಿಸಲಿಲ್ಲ.
ಯುಎನ್ಐ ವಿಎನ್ಎಲ್ 2206