Friday, Nov 15 2019 | Time 12:55 Hrs(IST)
  • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
  • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
  • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
  • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
  • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
  • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
Sports Share

ಐಎಸ್‌ಎಲ್: ಡ್ರಾಗೆ ತೃಪ್ತಿಗೊಂಡ ಬಿಎಫ್‌ಸಿ

ಬೆಂಗಳೂರು, ಅ 21 (ಯುಎನ್‌ಐ) ಸಮಬಲದ ಹೋರಾಟ ನಡೆಸಿದ ಬೆಂಗಳೂರು ಎಫ್‌ಸಿ ಹಾಗೂ ನಾರ್ಥ್‌ಈಸ್ಟ್‌ ಯುನೈಟೆಡ್ ಎಫ್‌ಸಿ ತಂಡಗಳ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡನೇ ಪಂದ್ಯ 0-0 ಡ್ರಾನಲ್ಲಿ ಅಂತ್ಯವಾಯಿತು.
ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತವರು ಅಭಿಮಾನಿಗಳ ಬೆಂಬಲದೊಂದಿಗೆ ಐಎಸ್‌ಎಲ್ ಟೂರ್ನಿಯ ಮೊದಲನೇ ಪಂದ್ಯ ಗೆದ್ದು ಪ್ರಸಕ್ತ ಆವೃತ್ತಿಯ ಅಭಿಯಾನದಲ್ಲಿ ಶುಭಾರಂಭ ಕಾಣುವ ಹೊಸ್ತಿಲಲ್ಲಿದ್ದ ಬಿಎಫ್‌ಸಿ ತಂಡದ ಕನಸಿಗೆ ನಾರ್ಥ್‌ಈಸ್ಟ್‌ ತಂಡ ತಣ್ಣೀರೆರಚಿತು.
ಪಂದ್ಯದ ಆರಂಭದಲ್ಲಿ ನಿಯಂತ್ರಣ ಸಾಧಿಸಿದ್ದ ಬಿಎಫ್‌ಸಿ ತಂಡ, ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿತ್ತು. ಮೊಟ್ಟ ಮೊದಲ ಬಾರಿ ನಾರ್ಥ್ ಈಸ್ಟ್‌ ಯುನೈಟೆಡ್ ತಂಡದಿಂದ ಮೂಡಿಬಂದ ರಭಸದ ಶಾಟ್ ಅನ್ನು ಗುರುಪ್ರೀತ್ ಸಂಧು ತಡೆಯುವಲ್ಲಿ ಯಶಸ್ವಿಯಾದರು. ಬಿಎಫ್‌ಸಿ ಪರ ನಾಯಕ ಸುನೀಲ್ ಚೆಟ್ರಿ ಮೊದಲಾವಧಿಗೂ ಮುನ್ನ ಗೋಲು ಪಟ್ಟಿಯತ್ತ ಚೆಂಡನ್ನು ಅಟ್ಟಿದ್ದರು. ಆದರೆ, ಚೆಂಡನ್ನು ಗೋಲು ಪಟ್ಟಿಯಿಂದ ಹೊರಕ್ಕೆೆ ತಳ್ಳುವಲ್ಲಿ ಎದುರಾಳಿ ತಂಡದ ಹೀರಿಂಗ್ಸ್‌ ಕಾಯ್ ಸಫಲರಾದರು.
ಎರಡನೇ ಅವಧಿಯಲ್ಲೂ ಉಭಯ ತಂಡಗಳ ನಡುವೆ ಕಠಿಣ ಹೋರಾಟ ನಡೆಯಿತು. ಆದರೆ, ಗೋಲು ಗಳಿಸುವಲ್ಲಿ ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಂಡವು.
ಯುಎನ್‌ಐ ಆರ್ ಕೆ 2203