Sunday, Jan 19 2020 | Time 19:53 Hrs(IST)
 • ಗೊಟಬಯಾ ರಾಜಪಕ್ಸೆ ಭೇಟಿಯಾದ ಅಜಿತ್ ದೋವಲ್: 50 ಮಿಲಿಯನ್ ಅಮೆರಿಕನ್ ಡಾಲರ್ ನೆರವಿನ ವಾಗ್ದಾನ
 • ವಿಮಾನ ನಿಲ್ದಾಣದಲ್ಲಿ ಸಿಎಎ ವಿರುದ್ಧ ಘೋಷಣೆ ಕೂಗಿದ ವ್ಯಕ್ತಿ ಬಂಧನ
 • ಪರಿಸರ ಸಂರಕ್ಷಣೆಗೆ ಬಿಹಾರದಲ್ಲಿ ಐತಿಹಾಸಿಕ ಮಾನವ ಸರಪಳಿ- ನಿತೀಶ್ ಕುಮಾರ್
 • ಮಹಾರಾಷ್ಟ್ರದಲ್ಲಿ ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡುವುದಿಲ್ಲ: ಎನ್‌ಸಿಪಿ ನಾಯಕ ಜಿತೇಂದ್ರ
 • ಕಪ್ಪು ಪಟ್ಟಿ ಕಟ್ಟುವ ಮೂಲಕ ಬಾಪು ನಾಡಕರ್ಣಿಗೆ ಗೌರವ ಸಲ್ಲಿಸಿದ ಭಾರತ
 • ಸ್ಮಿತ್ ಅಬ್ಬರದ ಶತಕ : ಭಾರತಕ್ಕೆ 287 ರನ್ ಗುರಿ ನೀಡಿದ ಆಸ್ಟ್ರೇಲಿಯಾ
 • ಪಂದ್ಯದ ವೇಳೆಯೇ ಎಕ್ಸ್ ರೆಗೆ ತೆರಳಿದ ಶಿಖರ್ ಧವನ್
 • ಚಹಾ ಉತ್ಪಾದನೆ ಕಾರ್ಮಿಕರ ಮೇಲೆ ಅವಲಂಭಿತ: ಐಟಿಎ
 • ಸಿಎಎ ಜಾರಿ ಅಗತ್ಯವಿರಲಿಲ್ಲ : ಶೇಖ್ ಹಸೀನಾ
 • ಪೃಥ್ವಿ ಶಾ ಅಬ್ಬರದ ಶತಕ: ಭಾರತ ಎ ತಂಡಕ್ಕೆ ಎರಡನೇ ಗೆಲುವು
 • ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಅಗತ್ಯವಿರಲಿಲ್ಲ; ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ
 • ಭದ್ರತಾ ಕಾರಣ ನೀಡಿ ಸಾಹಿತ್ಯ ಉತ್ಸವ ಕಾರ್ಯಕ್ರಮಕ್ಕೆ ಬಾರದ ಕೇರಳ ರಾಜ್ಯಪಾಲ
 • ಪ್ಲಾಸ್ಟಿಕ್, ನಗರ ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ: ಡಾ ಎಂ ಎಂ ಕುಟ್ಟಿ
 • ಬಿನೋದಿನಿ ದಾಸಿ ಚಿತ್ರದಲ್ಲಿ ನಟಿಸಲು ದೀಪಿಕಾ ನಕಾರ
 • ಸಿಎಎ ಪೌರತ್ವ ನೀಡುತ್ತದೆಯೇ ಹೊರತು ಕಸಿದುಕೊಳ್ಳುವುದಿಲ್ಲ: ನಿರ್ಮಲಾ ಸೀತಾರಾಮನ್
Sports Share

ಐತಿಹಾಸಿಕ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ: ಮೊದಲನೇ ದಿನ ಭಾರತಕ್ಕೆೆ ಮೇಲುಗೈ

ಕೋಲ್ಕತಾ, ನ 22 (ಯುಎನ್‌ಐ) ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, ಐತಿಹಾಸಿಕ ಹೊನಲು ಬೆಳಕಿನ ಟೆಸ್ಟ್‌ ಪಂದ್ಯದ ಮೊದಲನೇ ದಿನ ಬಾಂಗ್ಲಾದೇಶ ವಿರುದ್ಧ ಮೇಲುಗೈ ಸಾಧಿಸಿದೆ.
ಇಲ್ಲಿನ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಬಾಂಗ್ಲಾಾದೇಶ ತಂಡ, ಇಶಾಂತ್ ಶರ್ಮಾ (22 ಕ್ಕೆೆ 5) ಅವರ ಮಾರಕ ದಾಳಿಗೆ ನಲುಗಿ 30.3 ಓವರ್ ಗಳಿಗೆ 106 ರನ್ ಗಳಿಗೆ ಆಲೌಟ್ ಆಯಿತು. ನಂತರ, ಪ್ರಥಮ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ, ಚೇತೇಶ್ವರ ಪೂಜಾರ (55 ರನ್) ಹಾಗೂ ನಾಯಕ ವಿರಾಟ್ ಕೊಹ್ಲಿ(ಔಟಾಗದೆ 59 ರನ್) ಅವರ ಅರ್ಧ ಶತಕಗಳ ಬಲದಿಂದ 46 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 174 ರನ್ ದಾಖಲಿಸಿದೆ. ಇದರೊಂದಿಗೆ 68 ರನ್ ಮುನ್ನಡೆ ಗಳಿಸಿದೆ.
ರೋಚಕತೆ ಗಳಿಸಿದ್ದ ಪಿಂಕ್ ಚೆಂಡಿನ ಆಟದಲ್ಲಿ ಮೊದಲು ಬ್ಯಾಾಟಿಂಗ್ ಮಾಡಿದ್ದ ಬಾಂಗ್ಲಾದೇಶದ ಮೇಲೆ ಭಾರತದ ತ್ರಿ ವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ಸವಾರಿ ಮಾಡಿದರು. ನಾಯಕ ಮೊಮಿನುಲ್ ಹಕ್ ಟಾಸ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಭಾರತದ ವೇಗಿಗಳು ತಲೆ ಕೆಳಗಾಗುವಂತೆ ಮಾಡಿದರು. ಇಂದೋರ್ ಟೆಸ್ಟ್‌ ನಲ್ಲಿ ಇದೇ ತಪ್ಪು ಮಾಡಿದ್ದ ಮೊಮಿನುಲ್ ಹಕ್ ಎರಡನೇ ಪಂದ್ಯದಲ್ಲೂ ಅದೇ ತಪ್ಪು ಮಾಡಿದರು.
ಮಾರಕ ದಾಳಿ ನಡೆಸಿದ ಇಶಾಂತ್ ಶರ್ಮಾ ಅವರು ಪ್ರವಾಸಿ ತಂಡವನ್ನು 106 ರನ್ ಗಳಿಗೆ ಆಲೌಟ್ ಮಾಡಲು ನೆರವಾದರು. ಇವರು 12 ಓವರ್ ಬೌಲಿಂಗ್ ಮಾಡಿ ನಾಲ್ಕು ಮೇಡಿನ್ 22 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು. ಪಿಂಕ್ ಟೆಸ್‌ಟ್‌ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ವೇಗಿ ಎಂಬ ಸಾಧನೆಗೆ ಬಲಗೈ ವೇಗಿ ಭಾಜನರಾದರು.
ಶದ್ಮನ್ ಇಸ್ಲಾಮ್ 29 ರನ್ ಹಾಗೂ ಲಿಟನ್ ದಾಸ್ 24 ರನ್ ಗಳಿಸ್ದಿದು ಪ್ರವಾಸಿ ತಂಡದ ಪರ ವೈಯಕ್ತಿಕ ಗರಿಷ್ಠ ರನ್ ಆಯಿತು. ಆದರೆ, ನಾಯಕ ಮೊಮಿನುಲ್ ಹಕ್, ಮೊಹಮ್ಮದ್ ಮಿಥುನ್, ಮುಷ್ಫಿಕರ್ ರಹೀಮ್ ಪ್ರಮುಖ ಬ್ಯಾಾಟ್ಸ್‌‌ಮನ್‌ಗಳು ಸೇರಿ ಬಾಂಗ್ಲಾಾ ತಂಡದಲ್ಲಿ ಒಟ್ಟು ನಾಲ್ವರು ಶೂನ್ಯಕ್ಕೆೆ ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ಮೂರು ಹಾಗೂ ಮೊಹಮ್ಮದ್ ಶಮಿ ಎರಡು ವಿಕೆಟ್ ಕಿತ್ತರು.
ಭಾರತಕ್ಕೆೆ ಕೊಹ್ಲಿ ಆಸರೆ:
ಪ್ರಥಮ ಇನಿಂಗ್‌ಸ್‌ ಆರಂಭಿಸಿದ ಭಾರತಕ್ಕೆೆ ಆರಂಭಿಕರಾದ ಮಯಾಂಕ್ ಅಗರ್ವಾಲ್ (14) ಹಾಗೂ ರೋಹಿತ್ ಶರ್ಮಾ(21) ಬೇಗ ಔಟ್ ಆಗುವ ಮೂಲಕ ತಂಡಕ್ಕೆೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಆದರೆ, ಮೂರನೇ ವಿಕೆಟ್‌ಗೆ ಜತೆಯಾದ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿಿ ಜೋಡಿ ಅದ್ಭುತ ಬ್ಯಾಾಟಿಂಗ್ ಮಾಡಿತು. ಈ ಜೋಡಿ 94 ರನ್ ಗಳಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. 105 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ 55 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ 93 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರು. ಇವರ ಅರ್ಧಶತಕದಲ್ಲಿ ಎಂಟು ಬೌಂಡರಿಗಳಿದ್ದವು. ಅರ್ಧಶಕದ ಜತೆಗೆ, ಕೊಹ್ಲಿಿ ಟೆಸ್‌ಟ್‌ ವೃತ್ತಿ ಜೀವನದಲ್ಲಿ ಐದು ಸಾವಿರ ರನ್ ಪೂರೈಸಿದರು. ಅಜಿಂಕ್ಯ ರಹಾನೆ 23 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ವೃದ್ದಿಮನ್‌ಗೆ 100 ವಿಕೆಟ್:
ಭಾರತ ತಂಡದ ವಿಕೆಟ್ ಕೀಪರ್ ವೃದ್ದಿಮನ್ ಸಹಾ ಅವರು ಬಾಂಗ್ಲಾಾದೇಶ ಹಾಗೂ ಭಾರತ ನಡುವಿನ ಐತಿಹಾಸಿಕ ಟೆಸ್‌ಟ್‌ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಿದರು. ಟೆಸ್‌ಟ್‌ ಕ್ರಿಕೆಟ್ ನಲ್ಲಿ ವಿಕೆಟ್ ಹಿಂಬದಿ 100 ವಿಕೆಟ್ ಪಡೆದ ಭಾರತದ ಐದನೇ ವಿಕೆಟ್ ಕೀಪರ್ ಎಂಬ ಸಾಧನೆಗೆ ಸಹಾ ಭಾಜನರಾದರು. ಇದರೊಂದಿಗೆ ಧೋನಿ, ಸೈಯದ್ ಕಿರ್ಮಾನಿ, ಕಿರಣ್ ಮೋರೆ ಹಾಗೂ ನಯಾನ್ ಮೊಂಗಿಯ ಅವರ ಕ್ಲಬ್‌ಗೆ ಸಹಾ ಸೇರ್ಪಡೆಯಾದರು.
ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ:
ಬಾಂಗ್ಲಾದೇಶ ವಿರುದ್ಧ ಎರಡನೇ ಹಾಗೂ ಐತಿಹಾಸಿಕ ಹೊನಲು ಬೆಳಕಿನ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ ನಲ್ಲಿ ಅಜೇಯ 59 ರನ್ ಸಿಡಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೀರ್ಘ ಅವಧಿ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ಐದು ಸಾವಿರ ರನ್ ಪೂರೈಸಿದರು. ಆ ಮೂಲಕ 97 ಇನಿಂಗ್‌ಸ್‌ ಗಳಲ್ಲಿ ಈ ಸಾಧನೆ ಮಾಡಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಮುರಿದರು. ಕೊಹ್ಲಿ ಈ ಸಾಧನೆ ಮಾಡಲು 87 ಇನಿಂಗ್ಸ್‌ ತೆಗೆದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ
ಪ್ರಥಮ ಇನಿಂಗ್ಸ್‌: 30.3 ಓವರ್ ಗಳಿಗೆ 106/10 (ಶದ್ಮನ್ ಇಸ್ಲಾಮ್ 29, ಲಿಟನ್ ದಾಸ್ 24, ನಯೀಮ್ ಹಸನ್ 19; ಇಶಾಂತ್ ಶರ್ಮಾ 22 ಕ್ಕೆೆ 5, ಉಮೇಶ್ ಯಾದವ್ 29 ಕ್ಕೆೆ 3, , ಮೊಹಮ್ಮದ್ ಶಮಿ 36 ಕ್ಕೆೆ 2)
ಭಾರತ
ಪ್ರಥಮ ಇನಿಂಗ್ಸ್‌: 46 ಓವರ್ ಗಳಿಗೆ 174/3 (ವಿರಾಟ್ ಕೊಹ್ಲಿ ಔಟಾಗದೆ 59, ಚೇತೇಶ್ವರ ಪೂಜಾರ 55, ಅಜಿಂಕ್ಯ ರಹಾನೆ ಅಜೇಯ 23; ಇದಾಬತ್ ಹುಸೇನ್ 61 ಕ್ಕೆೆ 2)
ಯುಎನ್‌ಐ ಆರ್ ಕೆ 2211
More News
ಕುಸ್ತಿ: ಭಜರಂಗ್ ಪೂನಿಯಾ-ರವಿಕುಮಾರ್ ದಹಿಯಾಗೆ ಚಿನ್ನದ ಪದಕ

ಕುಸ್ತಿ: ಭಜರಂಗ್ ಪೂನಿಯಾ-ರವಿಕುಮಾರ್ ದಹಿಯಾಗೆ ಚಿನ್ನದ ಪದಕ

19 Jan 2020 | 7:16 PM

ರೋಮ್, ಜ 19 (ಯುಎನ್ಐ) ಭಾರತದ ಹಿರಿಯ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ದಹಿಯಾ ಅವರು ಇಲ್ಲಿ ನಡೆಯುತ್ತಿರುವ ರೋಮ್ ಶ್ರೇಯಾಂಕದ ಸರಣಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

 Sharesee more..
ಸ್ಮಿತ್ ಅಬ್ಬರದ ಶತಕ : ಭಾರತಕ್ಕೆ 287 ರನ್ ಗುರಿ ನೀಡಿದ ಆಸ್ಟ್ರೇಲಿಯಾ

ಸ್ಮಿತ್ ಅಬ್ಬರದ ಶತಕ : ಭಾರತಕ್ಕೆ 287 ರನ್ ಗುರಿ ನೀಡಿದ ಆಸ್ಟ್ರೇಲಿಯಾ

19 Jan 2020 | 6:25 PM

ಬೆಂಗಳೂರು, ಜ 19 (ಯುಎನ್ಐ) ಸ್ಟೀವನ್ ಸ್ಮಿತ್ (131 ರನ್, 132 ಎಸೆತಗಳು) ಅವರ ಶತಕ ಹಾಗೂ ಮಾರ್ನಸ್ ಲಾಬುಶೇನ್ (54 ರನ್, 64 ಎಸೆತಗಳು) ಅವರ ಅರ್ಧಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸವಾಲಿನ ಗುರಿ ನೀಡಿದೆ.

 Sharesee more..