Friday, Dec 4 2020 | Time 05:45 Hrs(IST)
Sports Share

ಐಪಿಎಲ್ ನಲ್ಲಿ ಇತಿಹಾಸ ಬರೆದ ಸಿರಾಜ್

ನವದೆಹಲಿ, ಅ.22 (ಯುಎನ್ಐ)- ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಓವರ್ ಗಳನ್ನು ಮೇಡನ್ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಬುಧವಾರ ನಡೆದ ಪಂದ್ಯದಲ್ಲಿ ಸಿರಾಜ್ ಎಂಟು ರನ್‌ಗಳಿಗೆ ಮೂರು ವಿಕೆಟ್ ಪಡೆದರು ಮತ್ತು ತಮ್ಮ ಮೊದಲ ಎರಡು ಓವರ್‌ಗಳನ್ನು ಮೇಡನ್ ಮಾಡಿದರು. ಬೆಂಗಳೂರು ಎಂಟು ವಿಕೆಟ್‌ಗಳಿಂದ ಕೋಲ್ಕತಾ ತಂಡವನ್ನು ಮಣಿಸಿತು. ಸಿರಾಜ್ ಅವರ ಅದ್ಭುತ ಬೌಲಿಂಗ್‌ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಶಹಬಾಜ್ ಅಹ್ಮದ್ ಬದಲಿಗೆ ಈ ಪಂದ್ಯದಲ್ಲಿ ಸಿರಾಜ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ಮತ್ತು ಈ ಐಪಿಎಲ್ ನಲ್ಲಿ ಸಿರಾಜ್ ಅವರ ನಾಲ್ಕನೇ ಪಂದ್ಯ ಆಡಿದರು ಸಿರಾಜ್ ತಮ್ಮ ಮೊದಲ ಓವರ್‌ನಲ್ಲಿ ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಅವರನ್ನು ಔಟ್ ಮಾಡಿದರು. ಸಿರಾಜ್ ತನ್ನ ಎರಡನೇ ಓವರ್‌ನಲ್ಲಿ ಟಾಮ್ ಬ್ಯಾಂಟನ್‌ರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾದರು. ಸಿರಾಜ್ ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಯಾವುದೇ ರನ್ ನೀಡದೆ ಮೂರು ವಿಕೆಟ್ ಪಡೆದರು. ನಾಲ್ಕು ಓವರ್‌ಗಳಲ್ಲಿ ಎಂಟು ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದು ಬೀಗಿದರು.
ಯುಎನ್ಐ ವಿಎನ್ಎಲ್ 1757