Tuesday, Oct 20 2020 | Time 14:46 Hrs(IST)
 • ಇಂದು ಸಂಜೆ 6 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಮುತ್ತಯ್ಯ ಮುರಳೀಧರನ್ ಮನವಿಗೆ ಸಮ್ಮತಿಸಿದ ತಮಿಳು ನಟ ವಿಜಯ್ ಸೇತುಪತಿ
 • ಚಾಲಕರ ಸುಲಿಗೆ ಮಾಡಲು ಸರ್ಕಾರ ಪೊಲೀಸರಿಗೆ ದಂಡ ಶುಲ್ಕ ವಸೂಲಾತಿಗೆ ಟಾರ್ಗೆಟ್ ನೀಡಿದೆ : ಎಚ್ ಡಿ ಕುಮಾರಸ್ವಾಮಿ
 • ಬೆಸ್ಕಾಂ ಮೂಲಕ ಸರ್ಕಾರದ ಡೆಪಾಜಿಟ್ ದಂಧೆ : ಆಮ್ ಆದ್ಮಿ ಪಕ್ಷದ ಆರೋಪ
 • ಸಂಜೆ 6 ಗಂಟೆಗೆ ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
 • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
 • ನಾಳೆ ಕೇಂದ್ರ ಸಂಪುಟ ಸಭೆ
 • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
 • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
 • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
 • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
 • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
 • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
 • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
Sports Share

ಐಪಿಎಲ್‌ 2020: ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ಆರಂಭಿಕ ಪಂದ್ಯ ನಾಳೆ

ನವದೆಹಲಿ, ಸೆ 18 (ಯುಎನ್ಐ) ಕೊರೊನಾ ವೈರಸ್‌ ಮಾರಣಾಂತಿಕ ಸೋಂಕಿನಿಂದ ಎದುರಿಸಿದ್ದ ಹಲವು ಏಳು-ಬೀಳುಗಳ ನಡುವೆ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೆ.19 ರಿಂದ ಯುಎಇಯಲ್ಲಿ ಆರಂಭವಾಗುತ್ತಿದೆ. ಅಬು ಧಾಬಿಯ ಶೇಖ್‌ ಝಹೇದ್‌ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಮುಖಾಮುಖಿಯಾಗಲಿವೆ.
ಕಳೆದ ಮಾರ್ಚ್‌ 29 ರಿಂದಲೇ ಭಾರತದಲ್ಲಿ ಐಪಿಎಲ್‌ ನಡೆಯಬೇಕಿತ್ತು. ಆದರೆ, ಇಡೀ ವಿಶ್ವದಾದ್ಯಂತ ಕೊರೊನಾ ವೈರಸ್‌ ವ್ಯಾಪಿಸಿದ್ದರಿಂದ ಶ್ರೀಮಂತ ಫ್ರಾಂಚೈಸಿ ಲೀಗ್‌ ಅನ್ನ ಎರಡು ಬಾರಿ ಮುಂದೂಡಲಾಗಿತ್ತು. ಆದ್ದರಿಂದ ಸುಮಾರು ಅರ್ಧ ವರ್ಷ ತಡವಾಗಿ ಯುಎಇಯಲ್ಲಿ 13ನೇ ಆವೃತ್ತಿಯ ಐಪಿಎಲ್‌ ಆಯೋಜಿಸಲಾಗಿದೆ.

ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡ ಎಂಬ ಖ್ಯಾತಿಗೆ ಮುಂಬೈ ಇಂಡಿಯನ್ಸ್ ಭಾಜನವಾಗಿದೆ. ಮುಂಬೈ ಫ್ರಾಂಚೈಸಿ ನಾಲ್ಕು ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೂರು ಟ್ರೋಫಿ ಮುಡುಗೇರಿಸಿಕೊಳ್ಳುವ ಮೂಲಕ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ಇದೀಗ ಧೋನಿ ಪಡೆ ನಾಲ್ಕನೇ ಟ್ರೊಫಿ ಮೇಲೆ ಕಣ್ಣಿಟ್ಟಿದೆ.
ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಇದುವರೆಗೂ 28 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಫ್ರಾಂಚೈಸಿ 11 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಮುಂಬೈ ಇಂಡಿಯನ್ಸ್‌ ಒಟ್ಟು 17 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಉಭಯ ತಂಡಗಳ ಅಂಕಿಅಂಶಗಳ ಪ್ರಕಾರ ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸಿದೆ.
ವಾತಾವರಣ-ಪಿಚ್‌ ವರದಿ: ಉದ್ಘಾಟನಾ ಪಂದ್ಯ ಅಬು ಧಾಬಿಯ ಶೇಖ್‌ ಝಹೇದ್‌ ಕ್ರೀಡಾಂಗನದಲ್ಲಿ ನಡೆಯಿದ್ದು, ಇಲ್ಲಿನ ಪಿಚ್‌ ನಿಧಾನಗತಿಯಿಂದ ಕೂಡಿದ್ದು, ಸ್ನೇಹಿ ವಿಕೆಟ್‌ ಆಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಎರಡೂ ತಂಡಗಳು ಪರಿಸ್ಥಿತಿಗಳಿಗೆ ತಕ್ಕಂತೆ ಸ್ಪಿನ್ನರ್‌ಗಳನ್ನು ಬಳಿಸಿಕೊಳ್ಳಲಿವೆ. ಶೇಖ್‌ ಝಹೇದ್‌ ಕ್ರೀಡಾಂಗಣದಲ್ಲಿ 150 ರನ್‌ಗಳು ಸ್ಪರ್ಧಾತ್ಮಕ ಮೊತ್ತವಾಗಲಿದೆ.
ಯುಎಇಯಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಆಟಗಾರರು ಬಿಸಿಲಿನಿಂದ ತಮ್ಮ ಚರ್ಮವನ್ನು ಕಾಪಾಡಿಕೊಳ್ಳಲು ಸನ್ಸ್‌ಕ್ರೀಮ್ಸ್‌ ಬಳಸಿಕೊಳ್ಳಲಿದ್ದಾರೆ. ಭಾರತದ ಕೆಲ ಬಿಸಿ ವಾತಾವರಣದಲ್ಲಿ ಆಡಿದ ಅನುಭವವನ್ನು ಹೊಂದಿರುವ ಆಟಗಾರರಿಗೆ ಯುಎಇ ಪರಿಸ್ಥಿತಿಗಳಲ್ಲಿ ಆಡಲು ಹೊಂದಿಕೊಳ್ಳಲಿದ್ದಾರೆ.
ಯುಎಇಯಲ್ಲಿ ಸಂಜೆಯ ವೇಳೆ ಉಷ್ಣಾಂಶ ಕಡಿಮೆಯಾಗುತ್ತಿದೆ. ಹಾಗಾಗಿ, ಪಂದ್ಯಗಳು ಸಂಜೆಯ ವೇಳೆಗೆ ಆರಂಭವಾಗುವುದರಿಂದ ಆಟಗಾರರಿಗೆ ಇದು ಅನುಕೂಲವಾಗಲಿದೆ. ಆದರೆ, ದಿನವೀಡಿ ಇಲ್ಲಿನ ಉಷ್ಣಾಂಶ 41 ಡಿಗ್ರಿ ಇದ್ದು, ಸಂಜೆಯ ವೇಳೆ ಇದು 31ಕ್ಕೆ ಇಳಿಯುತ್ತದೆ.
ಚೆನ್ನೈ ಸೂಪರ್‌ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌
ಚೆನ್ನೈ ಸೂಪರ್‌ ಕಿಂಗ್ಸ್: ಶೇನ್‌ ವ್ಯಾಟ್ಸನ್‌, ಮುರಳಿ ವಿಜಯ್‌, ಅಂಬಾಟಿ ರಾಯುಡು, ಕೇದಾರ್‌ ಜಾಧವ್‌, ಎಂಎಸ್‌ ಧೋನಿ (ನಾಯಕ, ವಿಕೆಟ್‌ ಕೀಪರ್‌) ಡ್ವೇನ್‌ ಬ್ರಾವೊ, ರವೀಂದ್ರ ಜಡೇಜಾ, ಮಿಚೆಲ್‌ ಸ್ಯಾಂಟ್ನರ್‌, ದೀಪಕ್‌ ಚಹರ್‌. ಶಾರ್ದೂಲ್ ಠಾಕೂರ್‌, ಇಮ್ರಾನ್‌ ತಾಹೀರ್‌.
ಮುಂಬೈ ಇಂಡಿಯನ್ಸ್ ಸಂಭಾವ್ಯ ಇಲೆವೆನ್‌: ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ(ನಾಯಕ), ಕ್ವಿಂಟನ್‌ ಡಿ ಕಾಕ್‌(ವಿ.ಕೀ), ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶಾನ್‌, ಕೀರನ್‌ ಪೊಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ನಥಾನ್ ಕೌಲ್ಟರ್‌ನೈಲ್‌, ರಾಹುಲ್‌ ಚಹರ್, ಜಸ್ಪ್ರಿತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌.
ಪಂದ್ಯದ ವಿವರ
ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ ಕಿಂಗ್ಸ್
ಸ್ಥಳ: ಶೇಖ್‌ ಝಹೇದ್‌, ಅಬು ಧಾಬಿ
ಸಮಯ: ಸೆ.19 ರಂದು ಸಂಜೆ 07: 30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
ಯುಎನ್‌ಐ ಆರ್‌ಕೆ 1527