Sunday, Dec 6 2020 | Time 00:33 Hrs(IST)
Entertainment Share

ಐಷಾರಾಮಿ ಕಾರ್ ಬಿಟ್ಟು ಬೈಕ್ ಏರಿದ್ದೇಕೆ ಅಕ್ಷಯ್ ಕುಮಾರ್?

ಮುಂಬೈ, ಅ 21 (ಯುಎನ್‍ಐ) ಒಂದಿಲ್ಲೊಂದು ಸಿನಿಮಾಗಳಲ್ಲಿ ಬ್ಯುಸಿ ಇರುವ ಅಕ್ಷಯ್ ಕುಮಾರ್‍ ತಮ್ಮ ಲಕ್ಸುರಿ ಕಾರ್ ಬಿಟ್ಟು ಬೈಕ್ ಹಾಗೂ ಬೋಟ್ ಗಳಲ್ಲಿ ಓಡಾಡಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.

ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿರುವ ಅಕ್ಷಯ್ ತುಂಬಾ ವೃತ್ತಿಪರತೆ ಹೊಂದಿರುವ ನಟ. ಅಂದುಕೊಂಡ ಸಮಯಕ್ಕೆ ಚಿತ್ರೀಕರಣ ಮುಗಿಸಿ, ಮತ್ತೊಂದು ಸಿನಿಮಾ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ಲಾಕ್ ಡೌನ್ ಬಳಿಕ ಅಕ್ಷಯ್ ಕುಮಾರ್ ಬೆಲ್ ಬಾಟಂ ಸಿನಿಮಾದ ಚಿತ್ರೀಕರಣ ಮುಗಿಸಿ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಹಾವಳಿಯ ನಡುವೆಯೂ ಅಕ್ಷಯ್ ಕುಮಾರ್ ಮತ್ತು ತಂಡ ವಿದೇಶಕ್ಕೆ ಹಾರಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಸದಾ ಸಿನಿಮಾದಲ್ಲಿ ನಿರತರಾಗಿರುವ ಅಕ್ಷಯ್ ಸಮಯ ಉಳಿಸಲು ಹೊಸ ದಾರಿ ಕಂಡುಕೊಂಡಿದ್ದಾರೆ.

ಟ್ರಾಫಿಕ್ ತಪ್ಪಿಸಿಕೊಂಡು, ಸಮಯ ಉಳಿಸಲು ಅಕ್ಷಯ್ ಕುಮಾರ್ ಮಾಡಿದ ಐಡಿಯಾಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಕ್ಷಯ್ ಕುಮಾರ್ ಬೈಕ್ ಹಿಂದೆ ಕುಳಿತು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದ್ಹಾಗೆ ಅಕ್ಷಯ್ ಸದ್ಯ ಪೃಥ್ವಿರಾಜ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಳಿಕ ಅಕ್ಷಯ್ ಸೂರ್ಯವಂಶಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಯುಎನ್‍ಐ ಎಸ್‍ಎ 1125
More News
ಆ ಒಂದು ಕನಸಿಗೆ ಮುಹೂರ್ತ

ಆ ಒಂದು ಕನಸಿಗೆ ಮುಹೂರ್ತ

04 Dec 2020 | 9:26 PM

ಬೆಂಗಳೂರು, ಡಿ 04 (ಯುಎನ್‍ಐ) ರಂಗು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಆ ಒಂದು ಕನಸು’ ಚಿತ್ರದ ಮುಹೂರ್ತ ಇತ್ತೀಚೆಗೆ ರಾಜರಾಜೇಶ್ವರಿ ನಗರದ ನಿಮಿಷಾಂಬಾ ದೇವಸ್ಥಾನದಲ್ಲಿ ನೆರವೇರಿದೆ.

 Sharesee more..
“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

04 Dec 2020 | 9:22 PM

ಬೆಂಗಳೂರು, ಡಿ 04 (ಯುಎನ್ಐ) ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರದ ಶೂಟಿಂಗ್ ಸೆಟ್ ಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಭೇಟಿ ನೀಡಿ ತಂಡಕ್ಕೆ ಶುಭಕೋರಿ ಹಾರೈಸಿದ್ದಾರೆ.

 Sharesee more..