Thursday, Oct 22 2020 | Time 15:23 Hrs(IST)
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
National Share

ಐಸಿಎಂಆರ್ ನಿಂದ ವೈದ್ಯರಿಗೆ ಆನ್‌ಲೈನ್ ತರಗತಿ

ನವದೆಹಲಿ, ಸೆ 17 (ಯುಎನ್‌ಐ)- ಇಂಟರ್ನ್‌ಶಿಪ್ ಮಾಡುವ ಇಲ್ಲವೇ ಕೋರ್ಸ್‍ ಅನ್ನು ಮುಗಿಸುವ ಎಂಬಿಬಿಎಸ್ ವೈದ್ಯರಿಗೆ ರೋಗಿಗಳ ಚೀಟಿಗಳನ್ನು ಬರೆಯುವುದನ್ನು ಕಲಿಸಲು ಭಾರತೀಯ ವೈದ್ಯಕೀಯ ಮಂಡಳಿ (ಐಸಿಎಂಆರ್) ಗುರುವಾರ ಆನ್‌ಲೈನ್ ಕೋರ್ಸ್ ಆರಂಭಿಸಿದೆ.
ಈ ಕೋರ್ಸ್‌ಗೆ ನೋಂದಣಿ ಇಂದು ಆರಂಭವಾಗಿದೆ. ರೋಗಿಗಳ ಸುರಕ್ಷತಾ ದಿನದ ಅಂಗವಾಗಿ ಕೋರ್ಸ್ ಆರಂಭಿಸುತ್ತಿರುವುದಾಗಿ ಐಸಿಎಂಆರ್ ಗುರುವಾರ ತಿಳಿಸಿದೆ.
ಈ ಕೋರ್ಸ್ ನಡಿ, ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳಿಗೆ ರೋಗಿಗಳ ಚೀಟಿ ಬರೆಯುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು, ಔಷಧಿಗಳನ್ನು ಹೇಗೆ ಶಿಫಾರಸು ಮಾಡಬೇಕು ಮತ್ತು ರೋಗಿಗಳಿಗೆ ಔಷಧಿ ಮಾಹಿತಿಯನ್ನು ನೀಡಲಾಗುವುದು. ಸೋಂಕು, ಕಣ್ಣು, ಕಿವಿ, ಚರ್ಮ ಅಥವಾ ಮಾನಸಿಕ ಕಾಯಿಲೆಗಳನ್ನು ಹೊಂದಿರುವವರು, ವಿಶೇಷವಾಗಿ ವೃದ್ಧರು,ಮಹಿಳೆಯರು, ಮಕ್ಕಳಿಗೆ ಚೀಟಿ ಬರೆಯುವ ಬಗ್ಗೆ ಕೋರ್ಸ್‍ ನಲ್ಲಿ ತಿಳಿಸಲಾಗುವುದು.
ಕೋರ್ಸ್ ಅನ್ನು ಚೆನ್ನೈ ಮೂಲದ ಐಸಿಎಂಆರ್-ಎನ್ಐಇ ನಡೆಸಲಿದೆ.
ದೇಶದ ವೈದ್ಯಕೀಯ ಪದವೀಧರರು ಇತರ ದೇಶಗಳ ವೈದ್ಯರಂತೆಯೇ ಸಮನಾಗಿರಲು ಖಾತ್ರಿಪಡಿಸಲು ಐಸಿಎಂಆರ್ ಬದ್ಧವಾಗಿದೆ. ಸಂಸ್ಥೆ ಬಯೋಮೆಡಿಕಲ್ ಸಂಶೋಧನೆಯ ಮೂಲ ಕೋರ್ಸ್ ಅನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಈ ಕೋರ್ಸ್‍ ಅನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಲಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಪ್ರೊ. ಬಲರಾಮ್ ಭಾರ್ಗವ ಹೇಳಿದ್ದಾರೆ.
ಯುಎನ್‍ಐ ಎಸ್ಎಲ್ಎಸ್ 2130
More News
ಅಮಿತ್ ಶಾ ಜನ್ಮದಿನ: ಪ್ರಧಾನಿ ಶುಭಹಾರೈಕೆ

ಅಮಿತ್ ಶಾ ಜನ್ಮದಿನ: ಪ್ರಧಾನಿ ಶುಭಹಾರೈಕೆ

22 Oct 2020 | 12:47 PM

ನವದೆಹಲಿ, ಅ, 22 (ಯುಎನ್ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ 56 ನೇ ವಸಂತಕ್ಕೆ ಕಾಲಿಟ್ಟಿದ್ದು , ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.

 Sharesee more..
ಸಚಿವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕಮಲ್ ನಾಥ್‍ ಗೆ ಚುನಾವಣಾ ಆಯೋಗ ನೋಟಿಸ್

ಸಚಿವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕಮಲ್ ನಾಥ್‍ ಗೆ ಚುನಾವಣಾ ಆಯೋಗ ನೋಟಿಸ್

21 Oct 2020 | 9:19 PM

ನವದೆಹಲಿ, ಅ21 (ಯುಎನ್‍ಐ)- ಮಧ್ಯಪ್ರದೇಶ ವಿಧಾನಸಭೆ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯ ಸಚಿವೆ ಇಮಾರತಿ ದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಕಮಲ್ ‍ನಾಥ್ ಅವರಿಗೆ ಚುನಾವಣಾ ಆಯೋಗ ನೋಟಿಸ್‍ ಜಾರಿಗೊಳಿಸಿದೆ.

 Sharesee more..
ಎಟಿಎಂ ವಿತ್ ಡ್ರಾ ಮೇಲಿನ ಶುಲ್ಕ ರದ್ದುಪಡಿಸಲು ಮುಂದಾದ ಆರ್ ಬಿಐ

ಎಟಿಎಂ ವಿತ್ ಡ್ರಾ ಮೇಲಿನ ಶುಲ್ಕ ರದ್ದುಪಡಿಸಲು ಮುಂದಾದ ಆರ್ ಬಿಐ

21 Oct 2020 | 9:07 PM

ನವದೆಹಲಿ, ಅ 21 (ಯುಎನ್ಐ) ಭಾರತೀಯ ರಿಸರ್ವ್ ಬ್ಯಾಂಕ್, ಬಹಳ ವರ್ಷಗಳ ನಂತರ ಎಟಿಎಂ ವಿತ್ ಡ್ರಾ ಮೇಲಿನ ಶುಲ್ಕ ವಿಧಿಸುವ ನಿಯಮದಲ್ಲಿ ಕೆಲಮಹತ್ವದ ಬದಲಾವಣೆ ತರಲು ಮುಂದಾಗಿದೆ.

 Sharesee more..