Friday, Nov 15 2019 | Time 13:26 Hrs(IST)
 • ದೇಶದ ರಫ್ತು ವಲಯದಲ್ಲಿ ಕರ್ನಾಟಕದಿಂದ ಮೂರನೇ ಒಂದರಷ್ಟು ಕೊಡುಗೆ: ಎಲ್ಲಾ ವಲಯಗಳಲ್ಲೂ ಬೆಂಗಳೂರು ಮಂಚೂಣಿಯಲ್ಲಿ – ಗೌರವ್ ಗುಪ್ತಾ
 • ಇಸ್ಲಾಮಿಕ್ ಸ್ಟೇಟ್ ಯೋಧರ ವಿಚಾರಣೆಗೆ ಅಂತರರಾಷ್ಟ್ರೀಯ ನ್ಯಾಯಮಂಡಳಿಗೆ ಅಮೆರಿಕಾ ವಿರೋಧ
 • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
 • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
 • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
 • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
 • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
 • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
National Share

ಒಂದು ಲಕ್ಷ ಡಿಜಿಟಲ್ ಗ್ರಾಮಗಳ ಸ್ಥಾಪನೆ; ರವಿಶಂಕರ್ ಪ್ರಸಾದ್

ಒಂದು ಲಕ್ಷ ಡಿಜಿಟಲ್ ಗ್ರಾಮಗಳ ಸ್ಥಾಪನೆ; ರವಿಶಂಕರ್ ಪ್ರಸಾದ್
ಒಂದು ಲಕ್ಷ ಡಿಜಿಟಲ್ ಗ್ರಾಮಗಳ ಸ್ಥಾಪನೆ; ರವಿಶಂಕರ್ ಪ್ರಸಾದ್

ನವದೆಹಲಿ, ಅ.21 (ಯುಎನ್‌ಐ) ಮುಂದಿನ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಒಂದು ಲಕ್ಷ ಡಿಜಿಟಲ್ ಗ್ರಾಮಗಳನ್ನು ಸ್ಥಾಪಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ನಡೆದ ಮೀಟಿವೈ ಸ್ಟಾರ್ಟ್-ಅಪ್ ಶೃಂಗಸಭೆ - 2019ಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ರವಿಶಂಕರ್ ಪ್ರಸಾದ್, ಈ ಡಿಜಿಟಲ್ ಗ್ರಾಮಗಳನ್ನು ತಮ್ಮದೇ ಆದ ರೀತಿಯಲ್ಲಿ ಪೋಷಿಸಿ, ಮಾರ್ಗದರ್ಶನ ನೀಡುವಂತೆ ಸಂಬಂಧಪಟ್ಟ ಭಾಗೀದಾರರಿಗೆ ಮನವಿ ಮಾಡಿದರು. ಈ ಗ್ರಾಮಗಳು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಕೇಂದ್ರಗಳಾಗಿ ರೂಪುಗೊಳ್ಳಲಿವೆ ಸಚಿವರು ಆಶಯ ವ್ಯಕ್ತಪಡಿಸಿದರು.

ದೇಶದ ದೂರದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ಎಲ್ಲಾ ಉದ್ಯಮಗಳು ಮತ್ತು ಉದ್ಯಮಶೀಲತೆಗಳ ಮಾಹಿತಿಯೊಳಗೊಂಡ ಡಿಜಿಟಲ್ ಮ್ಯಾಪಿಂಗ್ ರೂಪಿಸುವ ಅಗತ್ಯತೆ ಕುರಿತು ಸಚಿವರು ಒತ್ತಿ ಹೇಳಿದರು.

ನವಭಾರತ ಹೇಗೆ ಪರಿವರ್ತನೆಗೊಳ್ಳಲಿದೆ ಎಂಬುದಕ್ಕೆ ಸ್ಟಾರ್ಟ್ ಅಪ್ ಹೊಸ ಅತ್ಯುತ್ತಮ ಉತ್ಪನ್ನ ಎಂದು ಸಚಿವ ಪ್ರಸಾದ್ ಹೇಳಿದರು. ಈ ನಿಟ್ಟಿನಲ್ಲಿ ಸಾಫ್ಟ್‌ವೇರ್ ಉತ್ಪನ್ನ ನೀತಿ, ಎಲೆಕ್ಟ್ರಾನಿಕ್ ನೀತಿ ಮತ್ತು ಡಿಜಿಟಲ್ ಸಂವಹನ ನೀತಿ ರೂಪಿಸಲು ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳ ಕುರಿತು ಸಚಿವರು ವಿವರಿಸಿದರು.

ಡಿಜಿಟಲ್ ಇಂಡಿಯಾ ಗ್ರಾಮೀಣ ಭಾರತವನ್ನು ಪರಿವರ್ತಿಸುವ ವೇದಿಕೆಯಾಗಬೇಕು, ಎರಡನೇ ಹಂತ ಹಾಗೂ ಮೂರನೇ ಹಂತದ ನಗರಗಳಲ್ಲಿ ಮಹತ್ವಾಕಾಂಕ್ಷೆಗಳನ್ನು ಸೃಷ್ಟಿಸಬೇಕು. ಸಾಮಾಜಿಕ ನವೋದ್ಯಮಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಪ್ರಸಾದ್ ಅವರು ಮೀಟಿವೈ ಸ್ಟಾರ್ಟ್ ಹಬ್- ಎಂ ಎಸ್ ಎಚ್ ಹಾಗೂ ಬೀಮ್ 2.0 ಮತ್ತು ಇಂಡಿಯನ್ ಸಾಫ್ಟ್‌ವೇರ್ ರಿಜಿಸ್ಟ್ರಿಗೂ ಚಾಲನೆ ನೀಡಿದರು.

ಯುಎನ್ ಐ ಕೆವಿಆರ್ ಎಎಚ್ 1837