Sunday, Dec 15 2019 | Time 18:32 Hrs(IST)
 • ಜನವರಿ 1 ರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಕ್ರಮ: ಲಕ್ಷ್ಮಣ ಸವದಿ
 • ಸುಕನ್ಯಾ ಸಮೃದ್ದಿ ಯೋಜನೆ ಖಾತೆದಾರರಿಗೆ ಸಿಹಿ ಸುದ್ದಿ !
 • ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ದೇಶ ರಕ್ಷಣೆಯಾಗಿದೆ; ಪ್ರಧಾನಿ
 • ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್‌ ಇಂಡೀಸ್‌ಗೆ 289 ರನ್ ಗುರಿ
 • ಸೈಫ್ ಪುತ್ರಿಯಾಗಿ ಅನನ್ಯ !
 • ದಬಾಂಗ್ -3 ಕುರಿತು ಸಲ್ಮಾನ್ ಮಾತು
 • ಎಚ್ ಡಿ ರೇವಣ್ಣ ಮಂಡ್ಯ ಉಸಾಬರಿಗೆ ಬರುವುದು ಬೇಡ: ನಾರಾಯಣಗೌಡ
 • ಧೋನಿ ನನ್ನ ನೆಚ್ಚಿನ ಕ್ರಿಕೆಟರ್; ಸಲ್ಮಾನ್ ಖಾನ್
 • ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ
 • ಭಾರತಕ್ಕೆೆ ಪಂತ್, ಅಯ್ಯರ್ ಅರ್ಧಶತಕಗಳ ಆಸರೆ
 • ರಾಹುಲ್ ಗಾಂಧಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವೆ; ರಂಜಿತ್ ಸಾರ್ವಕರ್
 • ಅಸ್ಸಾಂ ಪರಿಸ್ಥಿತಿ ಕುರಿತು ಮೋದಿ, ಅಮಿತ್‍ ಷಾಗೆ ಮಾಹಿತಿ ನೀಡಲಿರುವ ಸೋನೋವಾಲ್‍
 • ವೃತ್ತಿ ಜೀವನದ 11ನೇ ಬಿಡಬ್ಲ್ಯುಎಫ್ ಫೈನಲ್ಸ್‌ ಗೆದ್ದ ಕೆಂಟೊ ಮೊಮೊಟಾ
 • ಕಾಂಗ್ರೆಸ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ; ಮಾಯಾವತಿ ಲೇವಡಿ
 • ಭಾರತೀಯ ಮೀನುಗಾರರ ದೋಣಿಗಳ ಮೇಲೆ ಶ್ರೀಲಂಕಾ ನೌಕಾಪಡೆಯಿಂದ ದಾಳಿ
business economy Share

ಔರಂಗಾಬಾದ್ ಗೆ ತಾತ್ಕಾಲಿಕವಾಗಿ ಶಿರಡಿ ವಿಮಾನ

ಶಿರಡಿ, ಮಹಾರಾಷ್ಟ್ರ, ನ 21 (ಯುಎನ್ಐ) ಶಿರಡಿಯಲ್ಲಿ ಪ್ರತೀಕೂಲ ಹವಾಮಾನದ ಕಾರಣ ನೋಟ ಸ್ಪಷ್ಟವಾಗಿ ಕಾಣದ ಹಿನ್ನೆಲೆಯಲ್ಲಿ ಶಿರಡಿಯಿಂದ ಮತ್ತು ಶಿರಡಿಗೆ ಬರುವ ವಿಮಾನಗಳನ್ನು ತಾತ್ಕಾಲಿಕವಾಗಿ ಮಟ್ಟಿಗೆ ಔರಂಗಾಬಾದ್ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.

ಪ್ರತಿಕೂಲ ಹವಾಮಾನದ ಕಾರಣ ಕಳೆದೊಂದು ಒಂದು ವಾರದಿಂದ ಶಿರಡಿಯಲ್ಲಿ ವಿಮಾನ ಸೇವೆ ವ್ಯತ್ಯಯವಾಗಿದೆ. ಶಿರಡಿಗೆ ಭೇಟಿ ನೀಡುವವರಿಗೆ ಆಗಿರುವ ಅನಾನುಕೂಲವನ್ನು ಕಡಿಮೆ ಮಾಡಲು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಹತ್ತಿರದ ವಿಮಾನ ನಿಲ್ದಾಣವಾದ ಔರಂಗಾಬಾದ್ ವರೆಗೆ ವಿಮಾನ ಸೇವೆ ನೀಡಲು ನಿರ್ಧರಿಸಿದೆ.
ಸ್ಪೈಸ್ ಜೆಟ್ ನಿಂದ ಪ್ರತಿ ದಿನ ದೆಹಲಿ, ಹೈದರಾಬಾಧ್, ಚೆನ್ನೈ ಮತ್ತು ಬೆಂಗಳೂರುಗಳಿಂದ ಶಿರಡಿಗೆ ವಿಮಾನ ಸೇವೆ ಇದೆ. ನ 22 ರಿಂದ 26 ರ ವರೆಗೆ ಶಿರಡಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಮಾಡುವ ಎಲ್ಲ ವಿಮಾನಗಳನ್ನು ಔರಂಗಾಬಾದ್ ಗೆ ಸ್ಥಳಾಂತರಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಈ ಬದಲಾವಣೆ ಬಗ್ಗೆ ಎಲ್ಲ ಪ್ರಯಾಣಿಕರಿಗೆ ಇ-ಮೇಲ್, ಎಸ್ಎಮ್ಎಸ್, ಕಾಲ್ ಸೆಂಟರ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಲಾಗಿದೆ. ಈ ಸೇವೆ ಬಯಸದ ಗ್ರಾಹಕರಿಗೆ ವಿಮಾನ ಟಿಕೆಟ್ ಹಣ ವಾಪಸ್ ನೀಡುವುದಾಗಿಯೂ ಸಂಸ್ಥೆ ತಿಳಿಸಿದೆ.
ಶಿರಡಿ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಸ್ಪೈಸ್ ಜೆಟ್ ಸಂಸ್ಥೆ ನಿರಂತರ ಸಂಪರ್ಕದಲ್ಲಿದ್ದು ಹವಾಮಾನ ಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದೆ. ಶಿರಡಿ ವಿಮಾನ ನಿಲ್ದಾಣಕ್ಕೆ ಸೇವೆ ನೀಡಲು ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುವುದು ಎಂದು ಸಹ ಸಂಸ್ಥೆ ಹೇಳಿದೆ.
ಯುಎನ್ಐ ಜಿಎಸ್ಆರ್ 2325