Thursday, Feb 25 2021 | Time 04:41 Hrs(IST)
National Share

ಕಕೇಂದ್ರ ಸರ್ಕಾರ-ರೈತ ಸಂಘಟನೆಗಳ ನಡುವಿನ 9 ನೇ ಸುತ್ತಿನ ಮಾತುಕತೆ ಅಪೂರ್ಣ: ಜ 19ರಂದು ಮತ್ತೆ ಸಭೆ

ನವದೆಹಲಿ, ಜ 15 (ಯುಎನ್‌ಐ) ಮೂರು ಕೃಷಿ ಸುಧಾರಣಾ ಕಾನೂನುಗಳ ಕುರಿತ ಬಿಕ್ಕಟ್ಟು ಪರಿಹರಿಸಲು ಗುರುವಾರ ಇಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾನಿರತ ರೈತ ಸಂಘಟನೆಗಳ ನಡುವೆ ನಡೆದ 9ನೇ ಸುತ್ತಿನ ಮಾತುಕತೆ ಅಪೂರ್ಣಗೊಂಡಿದೆ.
ಮುಂದಿನ ಸುತ್ತಿನ ಮಾತುಕತೆ ಜ 19 ರಂದು ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ. ಇಂದಿನ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಖಾತೆ ಸಚಿವ ಸೋಮ್ ಪ್ರಕಾಶ್ ಹಾಗೂ ಸುಮಾರು 40 ರೈತ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಮೂಲಗಳಂತೆ ರೈತರು ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಮೂಲ ಬೇಡಿಕೆಗೆ ಪಟ್ಟು ಹಿಡಿದಿದ್ದು, ತಿದ್ದುಪಡಿಗಳನ್ನು ಮಾಡುವ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.
ಸಭೆ ನಂತರ ಮಾತನಾಡಿದ ಸಚಿವ ನರೇಂದ್ರ ಸಿಂಗ್ ತೋಮರ್, ರೈತ ಸಂಘಟನೆಗಳ ಮುಖಂಡರೊಂದಿಗೆ ಇಂದು ನಡೆಸಿದ ಮಾತುಕತೆ ನಿರ್ಣಾಯಕವಲ್ಲ. 19ರಂದು ಮತ್ತೆ ಸಭೆ ಸೇರಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದರು.
ಯುಎನ್ಐ ಎಸ್ಎಲ್ಎಸ್ 1840
More News
2021ರ ಯುಪಿಎಸ್‌ಸಿ ಪರೀಕ್ಷೆಗೆ ವಯೋಮಿತಿ ಸಡಿಲಗೊಳಿಸಲು ಸುಪ್ರೀಂ ನಕಾರ

2021ರ ಯುಪಿಎಸ್‌ಸಿ ಪರೀಕ್ಷೆಗೆ ವಯೋಮಿತಿ ಸಡಿಲಗೊಳಿಸಲು ಸುಪ್ರೀಂ ನಕಾರ

24 Feb 2021 | 5:47 PM

ನವದೆಹಲಿ, ಫೆ.24 (ಯುಎನ್‌ಐ) ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ವಯಸ್ಸಿನ ಸಡಿಲಿಕೆ ಕೋರಿ ಹಾಗೂ ಒಂದು ಬಾರಿ ಹೆಚ್ಚಿನ ಅವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.

 Sharesee more..

ಪಂಚ ರಾಜ್ಯಗಳ ಚುನಾವಣೆ: ಇಂದೇ ದಿನಾಂಕ ಘೋಷಣೆ?

24 Feb 2021 | 10:21 AM

 Sharesee more..