Friday, Feb 28 2020 | Time 10:11 Hrs(IST)
  • ಜಪಾನ್, ದಕ್ಷಿಣ ಕೋರಿಯಾ ಆಗಮನ ವೀಸಾ ಸೌಲಭ್ಯ ತಾತ್ಕಾಲಿಕ ರದ್ದು; ಭಾರತ ನಿರ್ಧಾರ
  • ಕೇರಳದ ಇಡುಕ್ಕಿಯಲ್ಲಿ ಲಘು ಭೂಕಂಪ
  • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment Share

ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದು ತಪ್ಪು: ದುನಿಯಾ ವಿಜಿ

ಬೆಂಗಳೂರು, ಜ 20 (ಯುಎನ್‍ಐ) ಮಾಸ್ ಪ್ರೇಕ್ಷಕರ ಮೆಚ್ಚಿನ ಹೀರೋ ದುನಿಯಾ ವಿಜಿ ಸೋಮವಾರ ತಮ್ಮ ಹುಟ್ಟುಹಬ್ಬದಂದು ‘ಸಲಗ’ ಚಿತ್ರದ ಟೀಸರ್ ಲಾಂಚ್ ಮಾಡಿದ್ದಾರೆ ಅಲ್ಲದೆ ತಡರಾತ್ರಿ ಕೇಕ್ ಕತ್ತರಿಸಿ ಅಭಿಮಾನಿಗಳ ಜತೆ ಸಂಭ್ರಮಿಸಿದ್ದಾರೆ

ಆದರೆ ಈ ವೇಳೆ ಒಂದು ಎಡವಟ್ಟಾಗಿದೆ ಕತ್ತಿಯಲ್ಲಿ ಕೇಕ್ ಕತ್ತರಿಸಿ, ಖಾಕಿ ಕೆಂಗಣ್ಣಿಗೆ ವಿಜಿ ತುತ್ತಾಗಿದ್ದಾರೆ

ಈ ಎಲ್ಲ ವಿಷಯದ ಬಗ್ಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ವಿಜಿ, “ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದು ತಪ್ಪು.. ಯಾರೋ ಅಭಿಮಾನಿ ತಂದುಕೊಟ್ಟಿದ್ದರಿಂದ ಮಾಡಿದೆ‌ಆಮೇಲೆ ಅರ್ಥವಾಯ್ತು ತಪ್ಪು ಕೆಲಸ ಮಾಡಿದೆ ಅಂತಾ, ಪೊಲೀಸ್ ನೋಟಿಸ್ ಬಂದಿದೆ. ಈ ಸಂಬಂಧವಾಗಿ ಪೊಲೀಸರಿಗೆ ಉತ್ತರ ನೀಡುತ್ತೇನೆ…” ಎಂದು ಹೇಳಿದರು

ಸಲಗ ಸಿನಿಮಾಗೆ ರಾಜ್ಯದ ಜನತೆ ತುಂಬಾ ಸಪೋರ್ಟ್ ನೀಡ್ತಿದ್ದಾರೆ.. ಪ್ರೀತಿಯಿಂದ ಅಪ್ಪಿಕೊಳ್ತಿದ್ದಾರೆ. ಈ ಬೆಳವಣಿಗೆಯಿಂದ ನಾನು ಬದಲಾಗಬೇಕು ಅನ್ನಿಸುತ್ತಿದೆ.. ಜೀವನದ ಪ್ರತಿ ಹಂತದಲ್ಲೂ ನಾನು ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ತೀನಿ ಎಂದರು

ರೌಡಿಸಂ ಸಿನಿಮಾಗಳಿಗೆ ಉಪ್ಪಿ ಗಾಡ್ ಫಾದರ್ ಇದ್ದಂತೆ. ಹೀಗಾಗಿ ಅವ್ರಿಂದ ಟೀಸರ್ ಲಾಂಚ್ ಮಾಡಿಸಲಾಯ್ತು. ಉಪ್ಪಿ ಪ್ರಜಾಕೀಯಕ್ಕೆ ಸಾಥ್ ಕೇಳಿದ್ರೆ ಖಂಡಿತಾ ಮಾಡ್ತೀನಿ
ಅವರ ಪ್ರಜಾಕೀಯ ಥಿಂಕಿಂಗ್ಸ್ ನನ್ನನ್ನು ಕಾಡಿತ್ತು.. ಅವ್ರಿಗೆ ಹೇಳಿದ್ದೀನಿ.. ಪ್ರಜಾಕೀಯಕ್ಕೆ ಏನೇ ಸಹಾಯ ಬೇಕಿದ್ರೂ ಮಾಡ್ತೀನಿ ಅಂತಾ ತಿಳಿಸಿದ್ದೀನಿ ಎಂದು ಹೇಳಿಕೊಂಡರು.

ಕುಸ್ತಿ ಸಿನಿಮಾನಾ ಮಾಡ್ಬೇಕು ಅನ್ನೋ ಆಸೆಯಿದೆ.. ಆದರೆ ದಿನಕ್ಕೆ 4-5 ಗಂಟೆ ವರ್ಕೌಟ್ ಮಾಡ್ಬೇಕು..ಮಗನ ಸಿನಿಮಾದ್ದರಿಂದ ಒಂದಷ್ಟು ತಯಾರಿ ಮಾಡಬೇಕಿದೆ.. ದೇಹ ಹುರಿಗಟ್ಟಿಸಬೇಕು

ಸಲಗದ ನಂತರ ಒಂದಷ್ಟು ದಿನ ರೆಸ್ಟ್ ಮಾಡಿ.. ಹೊಸ‌ ಸಿನಿಮಾದ ಕೆಲಸ ಶುರು ಮಾಡ್ಕೋತೀನಿ ಅಂತ ದುನಿಯಾ ವಿಜಿ ತಿಳಿಸಿದರು.


ಯುಎನ್‍ಐ ಎಸ್‍ಎ ವಿಎನ್ 2100
More News
’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

27 Feb 2020 | 9:00 PM

ಬೆಂಗಳೂರು, ಫೆ 27 (ಯುಎನ್‍ಐ) ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ ಹೈ ವೋಲ್ಟೇಜ್ ಕಾಮಿಡಿ ಹಾರರ್ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಪರೀಕ್ಷೆಗಳು ಮುಗಿದ ನಂತರ ರಿಲೀಸ್ ಆಗಲಿದೆ

 Sharesee more..
‘ಎಂಆರ್ ಪಿ  ಚಿತ್ರದ ತುಣುಕು-ಹಾಸ್ಯದ ಮಿಣುಕು

‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

26 Feb 2020 | 10:25 PM

ಬೆಂಗಳೂರು, ಫೆ 26 (ಯುಎನ್‍ಐ) ಹಾಸ್ಯ ಲೇಪನದೊಡನೆ ಸಂದೇಶವನ್ನೂ ಒಳಗೊಂಡಿರುವ ಮನರಂಜನಾತ್ಮಕ ಚಿತ್ರ ‘ಎಂಆರ್‍ಪಿ’ ಯ ಟ್ರೇಲರ್ ಬಿಡುಗಡೆಯಾಗಿದೆ

 Sharesee more..