EntertainmentPosted at: Nov 21 2019 4:01PM Shareಕಮಲ್ ಹಾಸನ್ ಕಾಲಿಗೆ ನಾಳೆ ಶಸ್ತ್ರಚಿಕಿತ್ಸೆಚೆನ್ನೈ, ನ ೨೧ (ಯುಎನ್ಐ) ನಟ-ರಾಜಕಾರಣಿ ಮತ್ತು ಮಕ್ಕಳ್ ನೀಧಿ ಮೈಯಮ್ (ಎಂಎನ್ಎಂ) ಸ್ಥಾಪಕ ಕಮಲ್ ಹಾಸನ್ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಲಿದ್ದು, ಬಲಗಾಲಿನ ಕಸಿ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆಜುಲೈ ೨೦೧೬ ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಅವರ ಬಲಗಾಲಿನ ಮೂಳೆ ಮುರಿದಿದ್ದ ಸಂದರ್ಭದಲ್ಲಿ ಕಸಿ ಹಾಕಲಾಗಿತ್ತು. ಇದರಿಂದ ಗಾಯವಾಗಿತ್ತು. ನ. ೨೨ರಂದು ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸಿ ಈ ಕಸಿ ತೆಗೆಯಲಾಗುವುದು ಎಂದು ಎಂಎನ್ಎಂ ಉಪಾಧ್ಯಕ್ಷ ಡಾ. ಆರ್ ಮಹೇಂದ್ರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆರಾಜಕೀಯ ಮತ್ತು ಚಲನಚಿತ್ರಗಳಲ್ಲಿ ಕಾರ್ಯಬಾಹುಳ್ಯದ ಕಾರಣ, ಕಸಿ ತೆಗೆಯುವ ಚಿಕಿತ್ಸೆಯನ್ನು ಮುಂದೂಡಲಾಗಿತ್ತು. ಆದರೆ ಇದೀಗ ಅವರ ವೈದ್ಯರ ಸಲಹೆಯ ಮೇರೆಗೆ ಕಮಲ್ ಹಾಸನ್ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಲಿದ್ದಾರೆ.ಇದಲ್ಲದೆ, ಶಸ್ತ್ರಚಿಕಿತ್ಸೆಯ ಬಳಿಕ ಕೆಲ ವಾರಗಳವರೆಗೆ ವಿಶ್ರಾಂತಿ ಪಡೆಯುವಂತೆಯೂ ವೈದ್ಯರು ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಯುಎನ್ಐ ಎಸ್ಎ ವಿಎನ್ ೧೫೫೮